ಕ್ಯಾನ್ಸರ್ ಗೆದ್ದ ಶಿವಣ್ಣ: ಅಭಿಮಾನಿ ದೇವರುಗಳಿಗೆ ಅಣ್ಣಾವ್ರ ಮಗ ಹೇಳಿದ್ದೇನು?

ಕ್ಯಾನ್ಸರ್ ಗೆದ್ದ ಶಿವಣ್ಣ: ಅಭಿಮಾನಿ ದೇವರುಗಳಿಗೆ ಅಣ್ಣಾವ್ರ ಮಗ ಹೇಳಿದ್ದೇನು?

Published : Jan 02, 2025, 09:21 AM IST

ಚಿಕಿತ್ಸೆ ಯಶಸ್ಸಿನ ನಂತರ ಅಮೆರಿಕಾದ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಶಿವರಾಜ್‌ ಕುಮಾರ್ ಕಂಪ್ಲೀಟ್ ಗುಣಮುಖವಾಗಿ ಕರುನಾಡಿಗೆ ವಾಪಸ್ ಆಗೋದು ಯಾವಾಗ?. ಒಂದು ಮೂಲದ ಪ್ರಕಾರ ಶಿವರಾಜ್‌ ಕುಮಾರ್ ಅಮೆರಿಕಾದಿಂದ ವಾಪಸ್ ಆಗಲು ಇನ್ನು ಒಂದು ತಿಂಗಳು ಆಗಬಹುದು ಎಂದು ಹೇಳಲಾಗುತ್ತಿದೆ. 

ಬೆಂಗಳೂರು(ಜ.02): ಹೊಸ ವರ್ಷ.. ಹೊಸ ಭರವಸೆ.. ಕ್ಯಾನ್ಸರ್ ಗೆದ್ದ ಶಿವಣ್ಣ..! ಅಮೆರಿಕದಿಂದಲೇ I will be back ಎಂದ ಸಿಂಹದಮರಿ..! ಕೀಮೋಥೆರಪಿ ಮಧ್ಯೆಯೇ ಫೈಟ್ ಸೀನ್.. ಹೇಗಿತ್ತು ಆ ಕ್ಷಣ..? ಅಭಿಮಾನಿ ದೇವರುಗಳಿಗೆ ಅಣ್ಣಾವ್ರ ಮಗ ಹೇಳಿದ್ದೇನು?. ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಕ್ಯಾನ್ಸರ್ ಗೆದ್ದ ಶಿವಣ್ಣ

ನಟ ಶಿವರಾಜ್‌ ಕುಮಾರ್ ತಮ್ಮೆಲ್ಲ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಈ ವಿಶ್ ಅಭಿಮಾನಿಗಳಿಗೆ ತುಂಬಾ ಮಹತ್ವ ಮತ್ತು ಭಾವನಾತ್ಮಕತೆಯಿಂದ ಕೂಡಿದೆ. ಯಾಕೆಂದ್ರೆ ಶಿವಣ್ಣ ಕಳೆದ ಕೆಲ ದಿನಗಳ ಹಿಂದೆ ಅಮೆರಿಕಾಗೆ ಟ್ರೀಟ್ಮೆಂಟ್‌ಗೆ ಹೋಗಿದ್ದರು. ಶಸ್ತ್ರ ಚಿಕಿತ್ಸೆ ನಂತರ ಶಿವರಾಜ್‌ ಕುಮಾರ್ ಇದೇ ಮೊದಲು ಅಭಿಮಾನಿಗಳನ್ನ ಕುರಿತು ಮಾತನಾಡಿದ್ದಾರೆ. ನ್ಯೂ ಇಯರ್ ವಿಶ್ ಮಾಡಿದ್ದಾರೆ. ಜೊತೆಗೆ ಟ್ರೀಟ್ಮೆಂಟ್ ಕುರಿತು ಮಾತನಾಡಿದ್ದಾರೆ. ಆ ಕುರಿತು ಒಂದಿಷ್ಟು ಇಲ್ಲಿ ನೋಡೋಣ. 

ಸ್ಯಾಂಡಲ್​ವುಡ್ 2024: ಗಳಿಸಿದ್ದೆಷ್ಟು? ಕಳೆದಿದ್ದೆಷ್ಟು? 226 ಸಿನಿಮಾಗಳು ರಿಲೀಸ್, ಲಾಭ ಕಂಡಿದ್ದು ಜಸ್ಟ್ 10!

ಶಿವರಾಜ್ ಕುಮಾರ್ ಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಒಂದು ತಿಂಗಳ ನಂತರ ವಾಪಸ್ ಬರುವುದಾಗಿ ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದಾರೆ. ಹಾಗೆನೇ ಎಲ್ಲ ಅಭಿಮಾನಿಗಳಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಶಿವಣ್ಣ ಈ ಎಲ್ಲ ಖುಷಿಯಲ್ಲಿದ್ದರು ಸಹ ಅದೊಂದು ಸುದ್ದಿ ಅವರಿಗೆ ತುಂಬಾ ಬೇಸರವನ್ನು ತರಿಸಿದೆ ಅದೇನೆ?. 

ಶಿವರಾಜ್‌ ಕುಮಾರ್ ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಇನ್ನು ಮುಂದೆ ಅವರಿಗೆ ಕ್ಯಾನ್ಸರ್ ಭಯ ಇಲ್ಲ. ಆದ್ರೆ ಈ ಖುಷಿ ಸಮಯದಲ್ಲಿ ಮನೆ ಸದಸ್ಯನಂತೆಯೇ ಇದ್ದ ಮುದ್ದು ನೀಮೋ ಕಳೆದುಕೊಂಡ ದುಃಖದಲ್ಲಿ ಶಿವಣ್ಣ ಇದ್ದಾರೆ. 
ಚಿಕಿತ್ಸೆ ಯಶಸ್ಸಿನ ನಂತರ ಅಮೆರಿಕಾದ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಿದ್ರೆ ಶಿವರಾಜ್‌ ಕುಮಾರ್ ಕಂಪ್ಲೀಟ್ ಗುಣಮುಖವಾಗಿ ಕರುನಾಡಿಗೆ ವಾಪಸ್ ಆಗೋದು ಯಾವಾಗ?. ಒಂದು ಮೂಲದ ಪ್ರಕಾರ ಶಿವರಾಜ್‌ ಕುಮಾರ್ ಅಮೆರಿಕಾದಿಂದ ವಾಪಸ್ ಆಗಲು ಇನ್ನು ಒಂದು ತಿಂಗಳು ಆಗಬಹುದು ಎಂದು ಹೇಳಲಾಗುತ್ತಿದೆ. ಬಹುಶ ಈ ತಿಂಗಳ ಕೊನೆಯಲ್ಲಿ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ವಾಪಸ್ ಆಗುವ ಸಾಧ್ಯತೆಗಳಿವೆ. 

ಒಟ್ಟಿನಲ್ಲಿ ಅಮೆರಿಕಾಗೆ ಟ್ರೀಟ್ಮೆಂಟ್‌ಗೆ ಹೋಗಿದ್ದ ನಟ ಶಿವರಾಜ್‌ ಕುಮಾರ್ ಹೊಸ ವರ್ಷದಂದೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶಿವರಾಜ್‌ ಕುಮಾರ್ ಡಬಲ್ ಪವರ್‌ನೊಂದಿಗೆ ವಾಪಸ್ ಬರೋದಾಗಿ ಹೇಳಿದ್ದಾರೆ. ಶಿವಣ್ಣನ ಡ್ಯಾನ್ಸ್ ಫೈಟ್ ಇನ್ನೂ ಜೋರಾಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಶಿವರಾಜ್‌ ಕುಮಾರ್ ವಾಪಸ್ ಕರುನಾಡಿಗೆ ಬರಲಿ. ಅವರ ಸಿನಿ ಅಬ್ಬರ ಮತ್ತೆ ಅಬ್ಬರಿಸಲಿ. 

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more