ಪ್ರಶಾಂತ್‌ ನೀಲ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಹೀರೋನಾ? ವಿಲನ್ನಾ?

ಪ್ರಶಾಂತ್‌ ನೀಲ್ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್ ಹೀರೋನಾ? ವಿಲನ್ನಾ?

Published : Sep 29, 2022, 02:20 PM IST

ಭಾರತೀಯ ಚಿತ್ರರಂಗದ ಡೈರೆಕ್ಟರ್ ಡಿಪಾರ್ಟ್‌ಮೆಂಟ್‌ನ ಫೈಯರ್ ಬ್ರ್ಯಾಂಡ್ ಪ್ರಶಾಂತ್ ನೀಲ್. ಇವರ ಡೈರೆಕ್ಷನ್‌ನಲ್ಲಿ ಕ್ಯಾಮೆರಾ ಮುಂದೆ ನಿಲ್ಲಬೇಕು ಅಂತ ಭಾರತದ ಬಿಗ್ ಸ್ಟಾರ್ಸ್ ಹಪಹಪಿಸುತ್ತಾರೆ. ಆದ್ರೆ ಆ ಭಾಗ್ಯ ಈಗ ಸಧ್ಯಕ್ಕೆ ಸಿಕ್ಕಿರೋದು ಡಾರ್ಲಿಂಗ್ ಪ್ರಭಾಸ್ ಹಾಗು ಜ್ಯೂ.ಎನ್‌ಟಿಆರ್‌ಗೆ.

ಭಾರತೀಯ ಚಿತ್ರರಂಗದ ಡೈರೆಕ್ಟರ್ ಡಿಪಾರ್ಟ್‌ಮೆಂಟ್‌ನ ಫೈಯರ್ ಬ್ರ್ಯಾಂಡ್ ಪ್ರಶಾಂತ್ ನೀಲ್. ಇವರ ಡೈರೆಕ್ಷನ್‌ನಲ್ಲಿ ಕ್ಯಾಮೆರಾ ಮುಂದೆ ನಿಲ್ಲಬೇಕು ಅಂತ ಭಾರತದ ಬಿಗ್ ಸ್ಟಾರ್ಸ್ ಹಪಹಪಿಸುತ್ತಾರೆ. ಆದ್ರೆ ಆ ಭಾಗ್ಯ ಈಗ ಸಧ್ಯಕ್ಕೆ ಸಿಕ್ಕಿರೋದು ಡಾರ್ಲಿಂಗ್ ಪ್ರಭಾಸ್ ಹಾಗು ಜ್ಯೂ.ಎನ್‌ಟಿಆರ್‌ಗೆ. ಡಾರ್ಲಿಂಗ್ ಪ್ರಭಾಸ್ ಜೊತೆ ಸಲಾರ್ ಕೈಗೆತ್ತಿಕೊಂಡಿರೋ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್‌ರನ್ನ ಪಕ್ಕಾ ಹೀರೋಯಿಸಂನಲ್ಲಿ ತೋರಿಸೋದು ನಿಕ್ಕಿಯಾಗಿದೆ. ಆದ್ರೆ ನೀಲ್ ನ್‌ಟಿಆರ್‌ಗೆ ಆಕ್ಷನ್ ಕಟ್ ಹೇಳುತ್ತಿರೋ ಸಿನಿಮಾದಲ್ಲಿ ಯಂಗ್ ಟೈಗರ್ ರೋಲ್ ಏನು ಅನ್ನೋ ಸೆನ್ಸೇಷನ್ ಸುದ್ದಿಯೊಂದು ಈಗ ಟಾಲಿವುಡ್ ಅಂಗಳದಿಂದ ಹೊರ ಬಂದಿದೆ. ಆ ಚಿತ್ರದಲ್ಲಿ ಜ್ಯೂ.ನ್‌ಟಿಆರ್‌ ಹೀರೋನಾ..? ವಿಲನ್ನಾ ಅಂತ ಕೇಳಿದ್ರೆ ಅದಕ್ಕೆ ಉತ್ತರ ಡಬಲ್ ಶೇಡ್. ಜ್ಯೂ.ಎನ್‌ಟಿಆರ್‌ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾದ ಕಥೆ ಏನಿರಬಹುದು..? 

ತಾರಕ್ ಕ್ಯಾರೆಕ್ಟರ್ ಹೇಗಿರುತ್ತೆ ಅನ್ನೋ ಹುಡುಕಾಟವನ್ನ ಎಂಗ್ ಟೈಗರ್ ಫ್ಯಾನ್ಸ್ ಮಾಡಿದ್ರು. ಇದೀಗ ಡಬಲ್ ಶೇಡ್‌ನಲ್ಲಿ ಜ್ಯೂನಿಯರ್ ಎನ್ಟಿಆರ್ ಕಾಣಿಸುತ್ತಾರೆ ಅಂತ ಉತ್ತರ ಸಿಕ್ಕಿದೆ. ಈ ಸಿನಿಮಾದಲ್ಲಿ ತಾರಕ್ ಹೀರೋನು ಹೌದು ವಿಲನ್ ಕೂಡ ಹೌದು ಅನ್ನೋ ಸೀಕ್ರೆಟ್ ರಿವಿಲ್ ಆಗಿದೆ. ಜ್ಯೂ.ಎನ್‌ಟಿಆರ್‌ಗೆ ಡಬಲ್ ಶೇಡ್‌ನ ಪಾತ್ರಗಳು ಹೊಸದೇನಲ್ಲ. ಈ ಹಿಂದೆ ಟೆಂಟರ್ ಹಾಗು ಜೈ ಲವ ಕುಶ ಸಿನಿಮಾದಲ್ಲಿ ತಾರಕ್ ವಿಲನ್ ಪಾತ್ರದಲ್ಲೂ ಮಿಂಚಿದ್ರು. ಈಗ ಹೀರೋಗಳನ್ನ ವಿಲನ್ ಪಾತ್ರದಲ್ಲೇ ಹೀರೋಯಿಸಂ ತೋರಿಸೋ ರೀತಿ ಪಾತ್ರಗಳನ್ನ ಹೆಣೆಯೋ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾದಲ್ಲೂ ಜ್ಯೂ.ಎನ್‌ಟಿಆರ್‌ ಹೀರೋ ಕಮ್ ವಿಲನ್ ಆಗಿ ಮಿಂಚಲಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ಜ್ಯೂ.ಎನ್‌ಟಿಆರ್‌ 30ನೇ ಸಿನಿಮಾ ಮಾಡುತ್ತಿದ್ದಾರೆ. ಆ ಕಡೆ ಪ್ರಶಾಂತ್ ನೀಲ್ ಸಲಾರ್ ಕೆಲಸ ಮಾಡುತ್ತಿದ್ದಾರೆ. ಆ ಸಿನಿಮಾಗಳ ಕೆಲಸ ಮುಗಿಯುತ್ತಿದ್ದಂತೆ ಜ್ಯೂ.ಎನ್‌ಟಿಆರ್‌ ಹಾಗು ನೀಲ್ ಸಿನಿಮಾ ವರ್ಕ್ ಶುರುಮಾಡಲಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more