
ದಳಪತಿ ವಿಜಯ್ ಹುಟ್ಟುಹಬ್ಬದ ಉಡುಗೊರೆಯಾಗಿ ಜನನಾಯಗನ್ ಮೂವಿ ಫಸ್ಟ್ ಟೀಸರ್ ಹೊರಬಂದಿದೆ. ಇದು ವಿಜಯ್ ನಟಿಸ್ತಾ ಇರೋ ಕಟ್ಟ ಕಡೆಯ ಚಿತ್ರ. ಇದು ನನ್ನ ಕೊನೆ ಸಿನಿಮಾ ಇದರ ಬಳಿಕ ರಾಜಕೀಯದಲ್ಲಿ ಫುಲ್ ಟೈಂ ಌಕ್ಟಿವ್ ಆಗ್ತಿನಿ ಅಂತ ಖುದ್ದು ವಿಜಯ್ ಹೇಳಿದ್ದಾರೆ. ಸೋ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸ್ತಾ ಇರೋ, ಎಚ್.ವಿನೋದ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಟೀಸರ್ ಹೊರಬಂದಿದೆ. ದಳಪತಿ ಬರ್ತ್ಡೇಗೆ ಫಸ್ಟ್ ರೋರ್ ಅನ್ನೋ ಹೆಸರಿನಲ್ಲಿ ವಿಜಯ್ ಲುಕ್ನ ರಿವೀಲ್ ಮಾಡಿದೆ ಚಿತ್ರತಂಡ. ಬೆಂಕಿ ಅಲೆಗಳ ಎದುರು ಖಾಕಿ ತೊಟ್ಟು ತುಪಾಕಿಯಂತೆ ಎಂಟ್ರಿ ಕೊಡೋ ವಿಜಯ್ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ಅಲ್ಲಿಗೆ ಈ ಸಿನಿಮಾದಲ್ಲಿ ವಿಜಯ್ ಖಾಕಿದಾರಿಯಾಗಿ ಮಿಂಚಲಿದ್ದಾರೆ ಅನ್ನೋದು ಖಾತ್ರಿಯಾಗಿದೆ. ರಾಜಕೀಯಕ್ಕೆ ಬಂದು ಜನನಾಯಕ ಆಗುವ ಮುನ್ನ ಬರ್ತಿರೋ ಈ ಜನನಾಯಗನ್ ಮೂವಿನಲ್ಲಿ, ವಿಜಯ್ ಪಾಲಿಟಿಕ್ಸ್ಗೆ ಬೂಸ್ಟ್ ಕೊಡುವಂಥಾ ಎಲೆಮೆಂಟ್ಸ್ ಇವೆ ಎನ್ನಲಾಗ್ತಾ ಇದೆ. ಜಯನಾಯಗನ್ ಮೂವಿಯಲ್ಲಿ ಪೂಜಾ ಹೆಗಡೆ, ಮಮೈತಾ ಬೈಜು, ಬಾಬಿ ಡಿಯೋಲ್, ಶ್ರುತಿ ಹಾಸನ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಅಸದ್ಯ ವಿಜಯ್ ಬರ್ತ್ಡೇಗೆ ಬಂದಿರೋ ಟೀಸರ್ ಅಂತೂ ಫ್ಯಾನ್ಸ್ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿದೆ.