Feb 16, 2022, 3:27 PM IST
ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone), ಸಿದ್ಧಾಂತ್ ಚತುರ್ವೇದಿ (Sidhant Chaturvedi) ಹಾಗೂ ಅನನ್ಯ ಪಾಂಡೆ (Ananya Pandey) ಅಭಿನಯದ 'ಗೆಹ್ರೈಯಾನ್' (Gehraiyaan) ಸಿನಿಮಾ ಫೆಬ್ರವರಿ 11 ರಂದು ಓಟಿಟಿ (OTT) ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನೆಗೆಟಿವ್ ವಿಮರ್ಶೆಗಳು ಲಭ್ಯವಾಗಿತ್ತು. 'ಗೆಹ್ರೈಯಾನ್' ಸಿನಿಮಾ ಅಶ್ಲೀಲ ಮತ್ತು ಕೆಟ್ಟ ಸಿನಿಮಾ ಅಂತ ಇತ್ತೀಚೆಗಷ್ಟೇ ನಟಿ ಕಂಗನಾ ರಣಾವತ್ (Kangana Ranaut) ಹೇಳಿದ್ದರು. ಇದೀಗ 'ಗೆಹ್ರೈಯಾನ್' ಚಿತ್ರದ ಬಗ್ಗೆ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ (Bhaskar Rao) ತಮ್ಮ ಅಭಿಪ್ರಾಯವನ್ನು ಟ್ವೀಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ.
ಗೆಹ್ರೈಯಾನ್ ಚಿತ್ರದಲ್ಲಿ ನಟನ ಜೊತೆ ದೀಪಿಕಾ ರೊಮ್ಯಾನ್ಸ್; ಪತಿ Ranveer Singh ಹೇಳಿದ್ದಿಷ್ಟು!
'ಗೆಹ್ರೈಯಾನ್' ಚಿತ್ರವನ್ನು ನೋಡಲು ಪ್ರಾರಂಭಿಸಿದೆವು. 20 ನಿಮಿಷಗಳ ನಂತರ ನಾನು ಚಿತ್ರವನ್ನು ವೀಕ್ಷಿಸಲು ನಿಲ್ಲಿಸಿದೆ. ಜೀವನದ ಮೌಲ್ಯಗಳಿಗೆ ಈ ಚಿತ್ರ ಅವಮಾನಿಸಿದೆ ಎಂದು ನನಗೆ ಅನಿಸಿತು. ನಾನು ದೀಪಿಕಾ ಪಡುಕೋಣೆ ಅವರ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ, ಸಾಧಕಿ ಮತ್ತು ಧೈರ್ಯಶಾಲಿ ಹೆಣ್ಣುಮಗಳು. ಲಕ್ಷಾಂತರ ಯುವತಿಯರು ದೀಪಿಕಾ ಪಡುಕೋಣೆ ಅವರನ್ನು ಆರಾಧಿಸುತ್ತಾರೆ, ಅನುಸರಿಸುತ್ತಾರೆ. ಆದರೆ, ಸಿನಿಮಾದಲ್ಲಿ ವಿವಾಹೇತರ ಸಂಬಂಧ ಮತ್ತು ಮನೆಯ ನಾಶದ ಕಥಾವಸ್ತು ಇದೆ. ಇದು ಸರಿ ಎಂದು ಕೆಲವರು ಭಾವಿಸಬಹುದು. ಆದರೆ ಚಿತ್ರದಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ನಾನು ಹಳೆಯ ಕಾಲದವನಾ? ಎಂದು ಭಾಸ್ಕರ್ ರಾವ್ ಟ್ವೀಟ್ (Tweet) ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment