ರಜಿನಿಕಾಂತ್ 'ಜೈಲರ್' ಸಿನಿಮಾ ಬಿಡುಗಡೆ ದಿನ: ಇಡೀ ಕಂಪನಿಗೆ ರಜೆ ಘೋಷಿಸಿದ ಅಭಿಮಾನಿ!

ರಜಿನಿಕಾಂತ್ 'ಜೈಲರ್' ಸಿನಿಮಾ ಬಿಡುಗಡೆ ದಿನ: ಇಡೀ ಕಂಪನಿಗೆ ರಜೆ ಘೋಷಿಸಿದ ಅಭಿಮಾನಿ!

Published : Aug 06, 2023, 04:39 PM IST

ಬಹುಷಃ ಇಂತಹ ಸಂದರ್ಭ ಬೇರೆ ಯಾವ ಸ್ಟಾರ್ಗೂ ಬರೊಲ್ಲ ಅನ್ನಿಸುತ್ತೆ. ಅದು ರಜಿನಿಕಾಂತ್ ಸಿನಿಮಾಗೆ ಮಾತ್ರ. ತಲೈವ ಅಂದ್ರೆ ಇಷ್ಟೊಂದು ಕ್ರೇಜ್ ..ತಲೈವಾ ಸಿನಿಮಾ ಬರ್ತಿದೆ ಅಂದ್ರೆ ಮಕ್ಕಳೀಂದ ಮುದುಕರವರೆಗೆ ಯಂಗ್ ಆಗಿಬಿಡ್ತಾರೆ. 

ಬಹುಷಃ ಇಂತಹ ಸಂದರ್ಭ ಬೇರೆ ಯಾವ ಸ್ಟಾರ್ಗೂ ಬರೊಲ್ಲ ಅನ್ನಿಸುತ್ತೆ. ಅದು ರಜಿನಿಕಾಂತ್ ಸಿನಿಮಾಗೆ ಮಾತ್ರ. ತಲೈವ ಅಂದ್ರೆ ಇಷ್ಟೊಂದು ಕ್ರೇಜ್ ..ತಲೈವಾ ಸಿನಿಮಾ ಬರ್ತಿದೆ ಅಂದ್ರೆ ಮಕ್ಕಳೀಂದ ಮುದುಕರವರೆಗೆ ಯಂಗ್ ಆಗಿಬಿಡ್ತಾರೆ. ಅದೇನೆ ಬಿಲ್ಡಪ್ ಕೊಟ್ರೂ ಸಿನಿಮಾನ ಸಿನಿಮಾ ರೀತಿಯೆ ಶಿಳ್ಳೆ ಹೊಡೆದು ಎಂಜಾಯ್ ಮಾಡ್ತಾರೆ. 72 ನೇ ವಯಸ್ಸಿನಲ್ಲೂ ತೆರೆ ಮೇಲೆ ಹೀರೋ ಆಗಿ ಮಿಂಚುವ ಈ ನಟನ ಸ್ಟೈಲ್ಗೆ, ಅಭಿನಯಕ್ಕೆ ಎಂಥವರೂ ಕೂಡ ಫಿದಾ ಆಗೇ ಆಗುತ್ತಾರೆ. ಅಷ್ಟರ ಮಟ್ಟಿಗೆ ಹಾರ್ಡ್ ಫ್ಯಾನ್ಸ್ ರಜನಿಗಿದ್ದಾರೆ. ಅದರಂತೆಯೇ ಇದೀಗ ಜೈಲರ್ ಸಿನಿಮಾದಲ್ಲಿ ತಲೈವಾ ನಟಿಸುತ್ತಿದ್ದಾರೆ. 

ಇದೇ ತಿಂಗಳು 10ನೇ ತಾರೀಖು ಈ ಸಿನಿಮಾ ತೆರೆ ಮೇಲೆ ಬರುತ್ತಿದೆ. ಅದರಂತೆಯೇ ಇಲ್ಲೊಬ್ಬ ಸೂಪರ್ ಸ್ಟಾರ್ನ ಅಭಿಮಾನಿಯೊಬ್ಬರು ಏನು ಮಾಡಿದ್ದಾನೆ ಗೊತ್ತಾ?. ಸಿನಿಮಾ ನೋಡಲು ತನ್ನ ಖಾಸಗಿ ಕಂಪನಿಗೆ ರಜೆ ಘೋಷಿಸಿದ್ದಾರೆ. ಹೌದು. UNO ಆಕ್ವಾ ಕೇರ್ ಕಂಪನಿಯಿಂದ ರಜನಿಕಾಂತ್ ಅವರ ಸಿನಿಮಾ ನೋಡಲು ರಜೆ ಘೋಷಿಸಿದ್ದಾರೆ. ಇದೇ ತಿಂಗಳು 10ನೇ ತಾರೀಖು ಬಹುನಿರೀಕ್ಷಿತ ಜೈಲರ್ ಸಿನಿಮಾ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಜೈಲರ್ ಸಿನಿಮಾ ತೆರೆ ಮೇಲೆ ಬರುತ್ತಿದೆ. ಹೀಗಾಗಿ ರಜನಿ ಅಪ್ಪಟ್ಟ ಅಭಿಮಾನಿಯೊಬ್ಬರು ತನ್ನ ಕಂಪನಿಗೆ ರಜೆ ಘೋಷಿಸಿದ್ದಲ್ಲದೆ, ಬೆಂಗಳೂರು, ಚೆನ್ನೈ ಸೇರಿದಂತೆ 8 ಬ್ರ್ಯಾಂಚ್ಗಳಿಗೆ ರಜೆ ಘೋಷಣೆ ಮಾಡಿದ್ದಾರೆ. 

ಬರೀ ನೌಕರರಿಗೆ ರಜೆ ಕೊಡುವುದಷ್ಟೆ ಅಲ್ಲದೆ ನೌಕರರಿಗೆ ಜೈಲರ್ ಸಿನಿಮಾದ ಫ್ರೀಟಿಕೆಟ್ಸ್ ಕೂಡ ಕೊಡುತ್ತಿದ್ದಾರೆ. ಈ ಘೋಷಣೆ ಬಗ್ಗೆ ಎಲ್ಲಾ ಬ್ರಾಂಚ್ಗಳಿಗೆ ಮಾಹಿತಿಯನ್ನು ಹಂಚಿದ್ದಾರೆ. ಜೈಲರ್ ಸಿನಿಮಾ ರಿಲೀಸ್ಗೂ ಮೊದಲೇ ಹಲ್ಚಲ್ ಎಬ್ಬಿಸಿದೆ. ಈಗಾಗಲೇ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಇತ್ತೀಚೆಗೆ ಬಿಡುಗಡೆಗೊಂಡ ಕಾವಲಯ್ಯ ಹಾಡು ಕೂಡ ಭಾರೀ ಸೌಂಡ್ ಮಾಡಿತ್ತು. ಮಿಲ್ಕಿ ಬ್ಯೂಟಿ ತಮನ್ನಾ ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು.  ಕಲಾನಿಧಿ ಮಾರನ್ ಜೈಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್ವುಡ್ ನಟ ಶಿವ ರಾಜ್ಕುಮಾರ್, ಮಾಲಿವುಡ್ ಮೋಹನ್ಲಾಲ್, ವಿನಾಯಕನ್, ರಮ್ಯಾ ಕೃಷ್ಣ ಸೇರಿ ಅನೇಕ ತಾರಾಗಣ ಸಿನಿಮಾದಲ್ಲಿದ್ದಾರೆ. ಸದ್ಯ ರಜಿನಿ ಅಭಿಮಾನಿಯ  ಘೋಷಣೆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹಲ್ ಚಲ್ ಸೃಷ್ಟಿಸಿದೆ.

06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
Read more