ಸಾಲದ ಸುಳಿಯಲ್ಲಿ ಬಾಹುಬಲಿ ಪ್ರಭಾಸ್?: ಸಾಲಕ್ಕಾಗಿ ಪ್ರಾಪರ್ಟಿ ಅಡವಿಟ್ಟ ಸಾಹೋ ಹೀರೋ?

ಸಾಲದ ಸುಳಿಯಲ್ಲಿ ಬಾಹುಬಲಿ ಪ್ರಭಾಸ್?: ಸಾಲಕ್ಕಾಗಿ ಪ್ರಾಪರ್ಟಿ ಅಡವಿಟ್ಟ ಸಾಹೋ ಹೀರೋ?

Published : Dec 29, 2022, 08:43 PM IST

ಸಾಲ ಮಾಡಿ ಆದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು ಅಂತ ದುನಿಯಾ ಸಿನಿಮಾದಲ್ಲಿ ರಂಗಾಯಣ ರಘು ಹಾಡಿದ್ರು. ಈ ಹಾಡು ಇಂದಿಗೂ ಸೂಪರ್ ಹಿಟ್.. ಇದೀಗ ಈ ಹಾಡಿನ ಇನ್ಸ್ಪರೇಷನ್ನಿಂದಲೇ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಏನಾದ್ರ ಸಾಲಾ ಮಾಡಿದ್ರಾ..?
 

ಸಾಲ ಮಾಡಿ ಆದ್ರು ತುಪ್ಪ ತಿನ್ನು ಗೋಳು ಪರದಾಟ ಸಾಕಿನ್ನು ಅಂತ ದುನಿಯಾ ಸಿನಿಮಾದಲ್ಲಿ ರಂಗಾಯಣ ರಘು ಹಾಡಿದ್ರು. ಈ ಹಾಡು ಇಂದಿಗೂ ಸೂಪರ್ ಹಿಟ್.. ಇದೀಗ ಈ ಹಾಡಿನ ಇನ್ಸ್ಪರೇಷನ್ನಿಂದಲೇ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಏನಾದ್ರ ಸಾಲಾ ಮಾಡಿದ್ರಾ..? ಹೀಗೊಂದು ಡೌಟ್ ಶುರುವಾಗಿದೆ. ಯಾಕಂದ್ರೆ ಬಾಹುಬಲಿ ಪ್ರಭಾಸ್‌ಗೆ ಹಣಬಲ ಕಡಿಮೆ ಆಗಿದೆ. ಪ್ರಭಾಸ್ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹೊರ ಬಂದಿದೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್. ಈ ಸಾಹೋ ಹೀರೋ ಒಂದ್ ಸಿನಿಮಾಗೆ ಏನಿಲ್ಲ ಅಂದ್ರು 100 ಕೋಟಿ ಸಂಭಾವನೆ ಪಡೆಯುತ್ತಾರೆ. 

ಭಾರತೀಯ ಚಿತ್ರರಂಗದ ಕಾಸ್ಟ್ಲಿ ಹೀರೋಗಳಲ್ಲಿ ಪ್ರಭಾಸ್ ಕೂಡ ಒಬ್ರು. ಆದ್ರೆ ಪ್ರಭಾಸ್ ಹೆಸರಲ್ಲಿ 21 ಕೋಟಿ ಸಾಲ ಇದೆಯಂತೆ. ಹೈದರಾಬಾದ್‌ನಲ್ಲಿರೋ ಬೆಲೆಬಾಳೋ ಆಸ್ತಿಯನ್ನ ಅಡವಿಟ್ಟು ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರಂತೆ. ಪ್ರಭಾಸ್ ಬಳಿ ಸದ್ಯ ಐದು ಮೆಗಾ ಸಿನಿಮಾಗಳಿವೆ. ಈ ಸಿನಿಮಾಗಳಿಂದ ಕನಿಷ್ಟ 500 ಕೋಟಿ ಸಂಭಾವನೆ ಪ್ರಭಾಸ್ ಜೇಬು ಸೇರುತ್ತೆ. ಆದ್ರೆ ರಾಧೆ ಶ್ಯಾಮ್, ಸಾಹೋ ಸೋಲು ಪ್ರಭಾಸ್ರನ್ನ ಸಾಲ ಮಾಡೋ ಹಾಗೆ ಮಾಡಿದೆ. ಯಾಕಂದ್ರೆ ಮೇಲ್ನೋಟಕ್ಕೆ ಸಾಹೋ ಹಾಗು ರಾಧೆ ಶ್ಯಾಮ್ ಸಿನಿಮಾ ನಿರ್ಮಾಪಕರು ಬೇರೆಯವರು. ಆದ್ರೆ ಈ ಚಿತ್ರಗಳಿಗೆ ಪ್ರಭಾಸ್ ಕೂಡ ಬಂಡವಾಳ ಹೂಡಿದ್ದಾರಂತೆ. ಈಗ ಈ ಸಿನಿಮಾಗಳ ಸೋಲಿನಿಂದ ನಷ್ಟ ಅನುಭವಿಸಿರೋ ಸಿನಿಮಾ ವಿತರಕರಿಗೆ ನಷ್ಟ ತುಂಬಿಕೊಡಲು ಪ್ರಭಾಸ್, ತನ್ನ ಪ್ರಾಪರ್ಟಿಯನ್ನ ಅಡವಿಟ್ಟು 21 ಕೋಟಿ ಸಾಲ ಪಡೆದಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
Read more