'ಹಮ್ ಕಿಸಿ ಸೆ ಕಮ್ ನಹಿ' ಸಿನಿಮಾ ಹಾಡು ಟ್ರೆಂಡ್: ಹಲ್ ಚಲ್ ಎಬ್ಬಿಸಿದ ಕುರಿಗಾಹಿ ಡಾನ್ಸ್

Dec 13, 2022, 12:40 PM IST

ಸಂಜಯ್ ದತ್ ಅಜಯ್ ದೇವಗನ್ ಅಭಿನಯದ 'ಹಮ್ ಕಿಸಿ ಸೆ ಕಮ್ ನಹಿ' ಸಿನಿಮಾದ 'ಪೀಚೆ ಬಾರಾತಿ ಆಗೇ ಬ್ಯಾಂಡ್-ಬಾಜಾ ಹಾಡು ಟ್ರೆಂಡ್ ಆಗುತ್ತಿದೆ. ಅದಕ್ಕೆ ಕಾರಣ ರಾಜಸ್ಥಾನದ ಕುರಿಗಾಹಿ ಒಬ್ಬ ಈ ಹಾಡಿಗೆ ವಿಶೇಷವಾಗಿ ಡಾನ್ಸ್ ಮಾಡಿರೋದು. ಕುರ್ತಾ ಧರಿಸಿದ ಕುರಿಗಾಹಿ ನಡೆದುಕೊಂಡು ಡಾನ್ಸ್ ಮಾಡುತ್ತಿದ್ದಾರೆ. ಅವನ ಹಿಂದೆ ಹತ್ತಾರು ಕುರಿಗಳು ನಡೆದುಕೊಂಡು ಬರುತ್ತವೆ. ಈ ಕುರಿಗಾಹಿಯ ಡಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.