ಮತ್ತೊಂದು ದೊಡ್ಡ ಎಕ್ಸ್‌ಪಿರಿಮೆಂಟ್‌ನಲ್ಲಿ ವಿಕ್ರಂ: ಮೈ ನಡುಗಿಸುವಂತೆ ಎಂಟ್ರಿ ಕೊಟ್ಟ ಚಿಯಾನ್..!

Nov 4, 2023, 9:11 AM IST

ಚಿಯಾನ್ ವಿಕ್ರಂ ಐಕಾನಿಕ್ ಪರ್ಫಾಮೆನ್ಸ್‌ಗೆ ಫೇಮಸ್. ಇದಕ್ಕೆ ಅನ್ನಿಯನ್, ಐ, ಸಿನಿಮಾಗಳೇ ಸಾಕ್ಷಿ. ಅಷ್ಟೆ ಯಾಕೆ ಮೊನ್ನೆ ಮೊನ್ನೆ ಬಂದ ಕೋಬ್ರಾ ಸಿನಿಮಾದಲ್ಲಿ ವಿಕ್ರಂ 20 ಬಗೆಯೆ ವಿಭಿನ್ನ ಲುಕ್‌ನಲ್ಲಿ ವಿಜೃಂಭಿಸಿದ್ರು. ಇದೀಗ ಕಾಲಿವುಡ್‌ನ(Kollywood) ಚಿಯಾನ್ ಮತ್ತೊಂದು ಎಕ್ಸ್ಪರಿಮೆಂಟ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾದಲ್ಲಿ ವಿಕ್ರಂ(Vikram) ಕ್ಯಾರೆಕ್ಟರ್ ನೋಡಿದ್ರೆ ನಿಮ್ಮ ಮೈ ನಡುಗುತ್ತೆ. ಆ ಸಿನಿಮಾವೇ ತಂಗಲಾನ್. ಈಗ ತಂಗಲಾನ್ ಸಿನಿಮಾ ಟೀಸರ್(teaser) ರಿಲೀಸ್ ಆಗಿದೆ. ಗಣಿ ಕಾರ್ಮಿಕರನ್ನು ಬಳಸಿ ದುಷ್ಟಕೂಟವೊಂದು 'KGF'ನಲ್ಲಿ ಅಟ್ಟಹಾಸ ಮೆರೆಯುವಾಗ ಅಲ್ಲಿಗೆ ಬಂದ ರಾಕಿ ಏನೆಲ್ಲಾ ಮಾಡ್ದ ಅನ್ನೋದು ಕೆಜಿಎಫ್ನ ಕಾಲ್ಪನಿಕ ಕತೆ. ಆದ್ರೆ 'ತಂಗಲಾನ್'ನಲ್ಲಿ ಬುಡಕಟ್ಟು ಜನರನ್ನು ಬಳಸಿಕೊಂಡು ಗಣಿಗಾರಿಕೆಗೆ ಮಾಡೋ ಬ್ರಿಟೀಷರು ಹಾಗೂ ಆ ಬುಡಕಟ್ಟು ಜನರ ನಡುವಿನ ಸಂಘರ್ಷದ ರಿಯಲ್ ಸ್ಟೋರಿ ಇದೆ. ಇಲ್ಲಿ ಚಿಯಾನ್ ವಿಕ್ರಂ ಬುಡಕಟ್ಟು ಜನರ ನಾಯಕನಾಗಿ ರಾಕ್ಷಸನ ರೀತಿ ನಟಿಸಿದ್ದಾರೆ. 1870 ರಿಂದ 1940 ನಡುವಿನ ಕಾಲಘಟ್ಟದ ಸ್ಟೋರಿ 'ತಂಗಲಾನ್'(Thangalaan) ಯಾವುದೇ ಡೈಲಾಗ್ ಇಲ್ಲದೇ ಬರೀ ಮಾಂಟೇಜ್ ಶಾಟ್ಸ್ ಜೊತೆ ಬಿಜಿಎಂ ಸೇರಿಸಿ 'ತಂಗಲಾನ್' ಟೀಸರ್ ಬಿಟ್ಟಿದ್ದಾರೆ. ಮಾಳವಿಕಾ ಮೋಹನನ್, ಪಾರ್ವತಿ ತಿರುವೊತ್ತು, ಪಶುಪತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ರಕ್ತಸಿಕ್ತ ಸ್ಟೋರಿಯನ್ನ ಹಾಗೇ ಹಸಿ ಹಸಿಯಾಗಿ ತೋರಿಸಿದ್ದು, ಚಿಯಾನ್ ವಿಕ್ರಂ ಮೇಕ್ ಓವರ್ ಅಂತೂ ದಂಗುಬಡಿಸುವಂತಿದೆ. 'ತಂಗಲಾನ್' ಟೀಸರ್‌ ಚಿನ್ನದ ಗಣಿ ಕಥೆ ಹೇಗರುತ್ತೆ ಅನ್ನೋ ತೋರಿಸೋ ಚಿಕ್ಕ ಸ್ಯಾಂಪಲ್ ಅಷ್ಟೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಪ್ರೇಮ-ಪ್ರೀತಿ ವಿಚಾರದಲ್ಲಿ ಮನಸ್ತಾಪ ಬರಲಿದ್ದು, ಎಚ್ಚರವಾಗಿರಿ..