ಸೂರ್ಯ-ದಿಶಾ ಪಟಾಣಿ ಹೆಜ್ಜೆಗೆ ಫಿದಾ ಆದ ಫ್ಯಾನ್ಸ್: ಕಂಗುವಾ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಸೂರ್ಯ-ದಿಶಾ ಪಟಾಣಿ ಹೆಜ್ಜೆಗೆ ಫಿದಾ ಆದ ಫ್ಯಾನ್ಸ್: ಕಂಗುವಾ ರೊಮ್ಯಾಂಟಿಕ್ ಸಾಂಗ್ ರಿಲೀಸ್

Published : Oct 23, 2024, 04:27 PM IST

ಸೂರ್ಯ ನಟನೆಯ ಬಹುನಿರೀಕ್ಷೆಯ ಫ್ಯಾಂಟಸಿ ಆಕ್ಷನ್ ಸಿನಿಮಾ ಕಂಗುವ ಇನ್ನೇನು ರಿಲೀಸ್​ಗೆ ಸಜ್ಜಾಗಿದೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್​ವೊಂದು ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. 
 

ಸೂರ್ಯ ನಟನೆಯ ಬಹುನಿರೀಕ್ಷೆಯ ಫ್ಯಾಂಟಸಿ ಆಕ್ಷನ್ ಸಿನಿಮಾ ಕಂಗುವ ಇನ್ನೇನು ರಿಲೀಸ್​ಗೆ ಸಜ್ಜಾಗಿದೆ. ಸದ್ಯ ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್​ವೊಂದು ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. ಸೂರ್ಯ ದಿಶಾ ಪಟಾಣಿ ಹೆಜ್ಜೆ ಹಾಕಿರೋ ಈ ಸಾಂಗ್ ತಮಿಳು ಜೊತೆಗೆ ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲೂ ರಿಲೀಸ್ ಆಗಿದ್ದು ಎಲ್ಲಾ ಭಾಷೆಗಳಲ್ಲೂ ಟ್ರೆಂಡಿಂಗ್​ನಲ್ಲಿದೆ. ನವೆಂಬರ್ 14ಕ್ಕೆ ಕಂಗುವಾ ಪ್ಯಾನ್ ಇಂಡಿಯಾ ತೆರೆಗೆ ಬರಲು ಸಜ್ಜಾಗಿದೆ.

ಸ್ಯಾಂಡಲ್​ವುಡ್​​ನ ಶೋಮ್ಯಾನ್ ನಿರ್ದೇಶಕ ಪ್ರೇಮ್ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ ಕೆಡಿ ರಿಲೀಸ್​ ತಯಾರಿಯಲ್ಲಿದೆ. ಌಕ್ಷನ್ ಪ್ರಿನ್ಸ್ ಧ್ರುವ ನಟಿಸಿರೋ ಈ ಸಿನಿಮಾಗೆ ಕೆವಿಎನ್ ಪ್ರೊಡಕ್ಷನ್ಸ್​ ಬಂಡವಾಳ ಹೂಡಿದ್ದು ದೊಡ್ಡ ಮಟ್ಟದಲ್ಲಿ ಸಿನಿಮಾ ತಯಾರಾಗಿದೆ. ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾಶೆಟ್ಟಿಯಂಥಾ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಬರ್ತ್​ಡೇ ಸಂಭ್ರಮದಲ್ಲಿರೋ ಪ್ರೇಮ್​ಗೆ ಕೆಡಿ ಟೀಮ್ ಮೇಕಿಂಗ್​ ಝಲಕ್​ ನ ರಿಲೀಸ್ ಮಾಡಿ ಸ್ಪೆಷಲ್ ಗಿಫ್ಟ್ ಕೊಟ್ಟಿದೆ.  

ಬಹುಭಾಷಾ ನಟ ಅರ್ಜುನ್ ಸರ್ಜಾ ಈ ಹಿಂದೆ ತಮ್ಮ ಪುತ್ರಿ ಐಶ್ವರ್ಯಗಾಗಿ ಪ್ರೇಮ ಬರಹ ಅನ್ನೋ ಸಿನಿಮಾ ಮಾಡಿದ್ರು. ಇದೀಗ ಒನ್ಸ್ ಅಗೈನ್ ಪುತ್ರಿಯನ್ನ ನಾಯಕಿಯಾಗಿಸಿ ಮತ್ತೊಂದು ಸಿನಿಮಾ ರೆಡಿ ಮಾಡ್ತಿದ್ದಾರೆ ಸರ್ಜಾ. ಚಿತ್ರಕ್ಕೆ ಸೀತಾ ಪಯಣ ಅಂತ ಟೈಟಲ್ ಫಿಕ್ಸ್ ಆಗಿದ್ದು ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ರೆಡಿಯಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧಿಂದ್ರ ನಾಯಕನಾಗಿ ನಟಿಸ್ತಾ ಇರೋದು ವಿಶೇಷ. ಸದ್ಯ ಚಿತ್ರದ ಟೈಟಲ್ ಲಾಂಚ್ ಆಗಿದ್ದು ಮುಂದಿನ ದಿನಗಳಲ್ಲಿ ಸಿನಿಮಾದ ಮತ್ತಷ್ಟು ಡಿಟೈಲ್ಸ್ ರಿವೀಲ್ ಆಗಲಿವೆ.

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್