ಅಂಬಾನಿ ಮನೆ ಮದ್ವೆಯಲ್ಲಿ ಸೌತ್ ಸ್ಟಾರ್ಸ್ ಮಿಂಚಿಂಗೋ ಮಿಂಚಿಂಗ್! ನಟ ರಜನಿಕಾಂತ್ ಮಸ್ತ್ ಡಾನ್ಸ್..!

ಅಂಬಾನಿ ಮನೆ ಮದ್ವೆಯಲ್ಲಿ ಸೌತ್ ಸ್ಟಾರ್ಸ್ ಮಿಂಚಿಂಗೋ ಮಿಂಚಿಂಗ್! ನಟ ರಜನಿಕಾಂತ್ ಮಸ್ತ್ ಡಾನ್ಸ್..!

Published : Jul 14, 2024, 09:03 AM IST

ಅದು 6 ಸಾವಿರ ಕೋಟಿ ಖರ್ಚಿನ ಮದುವೆ. ದೇಶದ ಆಗರ್ಭ ಶ್ರೀಮಂತನ ಮಗನ ಮದುವೆ. ಭಾರತದ ನಂಬರ್ ಒನ್ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಮೂರನೇ ಮುದ್ದಿನ ಮಗ ಅನಂತ್ ಅಂಬಾನಿ ಮದುವೆ. ಇದೀಗ ಅನಂತ್ ಅಂಬಾನಿ ಆಗರ್ಭ ಶ್ರೀಮಂತೆ ರಾಧಿಕಾ ಮರ್ಚೆಂಟ್ ಕೈ ಹಿಡಿದಿದ್ದು, ಈ ಜೋಡಿ ಮದುವೆ ಮುಂಬೈನಲ್ಲಿ ಅದ್ಧೂರಿ ನಡೆದಿದೆ. 

ಅಂಬಾನಿ ಕುಟುಂಬದ ಮದುವೆ ಅಂದ್ರೆ ದೇಶದ ಪ್ರಸಿದ್ಧ ತಾರೆಯರು, ಕ್ರಿಕೆಟರ್ಸ್ ಆಗರ್ಭ ಶ್ರೀಮಂತರು ಹಾಜರಿರುತ್ತಾರೆ. ಅಷ್ಟೆ ಅಲ್ಲ ವಿದೇಶದ ಶ್ರೀಮಂತರು, ಸೆಲೆಬ್ರೆಟಿಗಳಿಗೂ ಆಹ್ವಾನ ಇರುತ್ತೆ. ಮುಖೇಶ್ ಅಂಬಾನಿ(Mukesh Ambani) ಕೊನೆ ಮಗನ ಮದುವೆಯಲ್ಲಿ ಅವರೆಲ್ಲಾ ಇದ್ರು. ಸ್ಯಾಂಡಲ್‌ವುಡ್‌ನಿಂದ ಹಿಡಿದು ಕಾಲಿವುಡ್, ಟಾಲಿವುಡ್, ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳ ಸಾಗರೇ ಅಲ್ಲಿ ಸೃಷ್ಟಿಯಾಗಿತ್ತು. ಅಂಬಾನಿ ಮನೆ ಮದುವೆ (Marriage) ಬಾಲಿವುಡ್ ಸ್ಟಾರ್ಸ್ಗೆ ಸ್ಪೆಷಲ್. ಅಂಬಾನಿ ಕುಟುಂಬದ ಮದುವೆಗಳಲ್ಲಿ ಬಿಟೌನ್ನ ತಾರೆಯರೇ ಹೆಚ್ಚು ಮಿಂಚುತ್ತಾರೆ. ಈ ಭಾರಿ ಕೂಡ ಹಾಗೆ ಇತ್ತು. ನಟ ಸಂಜಯ್ ದತ್, ಜನಿಲಿಯಾ, ರಿತೇಶ್ ದೇಶಮುಖ್, ವರುಣ್ ಧವನ್, ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಮದುವೆ ಹೈಲೆಟ್ ಆಗಿದ್ರು. ಅಷ್ಟೆ ಅಲ್ಲ ಅನಂತ್ ಅಂಬಾನಿ(Anant Ambani ) ಮದುವೆಯಲ್ಲಿ ಭಾಗಿಯಾದ ಬಾಲಿವುಡ್ ಸ್ಟಾರ್ಸ್ ಲೀಸ್ಟ್ ದೊಡ್ಡದಿದೆ. ಕೋಟ್ಯಾಧಿಪತಿ ಮಗನ ಮದುವೆಗೆ ಮುಂಬೈನಲ್ಲಿ(Mumbai) ಸ್ವರ್ಗವೇ ಧರೆಗಿಳಿದಿತ್ತು. ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್, ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ದಂಪತಿ, ಸಲ್ಮಾನ್ ಖಾನ್, ಅಮೀರ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್ , ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್ ಕತ್ರಿನಾ ಕೈಫ್ ಈ ಮದ್ವೆ ಸಮಾರಂಭದ ಮೆರಗು ಹೆಚ್ಚಿಸಿದ್ರು. ಮುಖೇಶ್ ಅಂಬಾನಿ ತನ್ನ ಮಗನ ಮದುವೆಗೆ ದೇಶವನ್ನೇ ಒಂದು ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಕಳೆದೋಗಿದೆ ಪುರಿ ಜಗನ್ನಾಥ ರತ್ನಭಂಡಾರ ಕೀಲಿ ಕೈ.. ಆದ್ರೂ ಓಪನ್‌ ಆಗುತ್ತೆ ಬಾಗಿಲು ಹೇಗೆ ಗೊತ್ತಾ ?

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more