Mar 5, 2022, 3:03 PM IST
ಬಾಲಿವುಡ್ (Bollywood) ನಟಿ ಶಿಲ್ಪಾ ಶೆಟ್ಟಿ (Shilpa Shetty) ಸಿನಿಮಾ, ಕಿರುತೆರೆ, ಯೋಗ ತರಬೇತಿ, ಉದ್ಯಮ, ಜಾಹೀರಾತು ಹೀಗೆ ಹಲವು ಕ್ಷೇತ್ರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್ ಆಗಿರುವ 'ಇಂಡಿಯಾಸ್ ಗಾಟ್ ಟ್ಯಾಲೆಂಟ್' ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಶೋ ಸೆಟ್ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಅವರಿಗೆ ಶಿಲ್ಪಾ ಶೆಟ್ಟಿ ಅವರು ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ/ಗಾಯಕ ಬಾದ್ಷಾ ಅವರಿಗೂ ಕೂಡ ಏಟು ಬಿದ್ದಿದೆ.
Gangubai Kathiawadi ಚಿತ್ರದಲ್ಲಿ ನಟಿಸೋಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಸದ್ಯ ಈ ವಿಡಿಯೋ ವೈರಲ್ (Viral) ಆಗಿದ್ದು, ಶೂಟಿಂಗ್ ಬಿಡುವಿನ ವೇಳೆ ಜಡ್ಜ್ ಸೀಟ್ನಲ್ಲಿ ಕುಳಿತಿದ್ದ ರೋಹಿತ್ ಶೆಟ್ಟಿ ಮತ್ತು ಬಾದ್ಷಾ ಅವರು ಗಾಢವಾಗಿ ಏನನ್ನೋ ಚರ್ಚೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ಬಂದ ಶಿಲ್ಪಾ ಶೆಟ್ಟಿ ಅವರು ರೋಹಿತ್ ಶೆಟ್ಟಿಯ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಕಡೆಗೆ ರೋಹಿತ್ ಶೆಟ್ಟಿ ಗಮನ ಕೊಡಲಿಲ್ಲ. ಅದರಿಂದ ಶಿಲ್ಪಾ ಶೆಟ್ಟಿಗೆ ಕೋಪ ಬಂತು. ಪಕ್ಕದಲ್ಲಿ ಇದ್ದ ಗಾಜಿನ ಬಾಟಲ್ ಎತ್ತಿಕೊಂಡು ರೋಹಿತ್ ಶೆಟ್ಟಿಗೆ ಹೊಡೆದಿದ್ದು, ಈ ವಿಡಿಯೋ ತಮಾಷೆಗಾಗಿ ಮಾಡಲಾಗಿದೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies