ಶಾರುಖ್ ಖಾನ್ ಮಗಳು ಈಗ ಬ್ಯುಸಿನೆಸ್​ನಲ್ಲಿ ಬ್ಯುಸಿ! ಮುಂಬೈ ಬಳಿ ಆಸ್ತಿ ಖರೀದಿಸಿದ ಸುಹಾನಾ ಖಾನ್!

Feb 25, 2024, 12:57 PM IST

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಮಾಡಿದ್ದಾರೆ. ಮುಂಬೈ ಸಮೀಪದ ಅಲಿಭಾಗ್​ನಲ್ಲಿ ಕೋಟ್ಯಂತರ ರೂ. ಹಣ ಕೊಟ್ಟು ದೊಡ್ಡ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಸುಮಾರು ಎರಡು ಎಕರೆ ಜಮೀನನ್ನು ಸುಹಾನಾ ಖಾನ್ ಖರೀದಿ ಮಾಡಿದ್ದಾರೆ. ಈ ಜಮೀನಿನ ಅಳತೆ 78,361 ಚದರ ಅಡಿಗಳಿವೆ. ಈ ಜಮೀನು ನೊಂದಾವಣಿ ಮಾಡಿಸಿಕೊಳ್ಳಲು 57 ಲಕ್ಷ ರೂಪಾಯಿ ಶುಲ್ಕವನ್ನು ಸುಹಾನಾ ಖಾನ್ ತುಂಬಿದ್ದು, ದಾಖಲೆಯಲ್ಲಿರುವಂತೆ ಒಟ್ಟು ಆಸ್ತಿಯ ಮೌಲ್ಯ 12.91 ಕೋಟಿ ರೂ. ಎಂದು ಮಾಹಿತಿ ಲಭಿಸಿದೆ. ಹೆಚ್ಚಿನ ಮಾಹಿತಿಗೆ ಈನ ವಿಡಿಯೋವನ್ನು ವೀಕ್ಷಿಸಿ.