ಪಾಕಿಗಳಿಗೆ ಭಯ ಹುಟ್ಟಿಸಿದ್ದೇಕೆ Salman Khan ಹೇಳಿಕೆ? ಇಂಡಿಯಾದಲ್ಲಿ ಹೀರೋ.. ಪಾಕ್​ನಲ್ಲಿ ಟೆರೆರಿಸ್ಟ್!

ಪಾಕಿಗಳಿಗೆ ಭಯ ಹುಟ್ಟಿಸಿದ್ದೇಕೆ Salman Khan ಹೇಳಿಕೆ? ಇಂಡಿಯಾದಲ್ಲಿ ಹೀರೋ.. ಪಾಕ್​ನಲ್ಲಿ ಟೆರೆರಿಸ್ಟ್!

Published : Oct 28, 2025, 01:12 PM ISTUpdated : Oct 28, 2025, 02:12 PM IST

ಭಾರತದ ಸೂಪರ್ ಸ್ಟಾರ್ ಸಲ್ಮಾನ್ ಖಾನ್​ಗೆ ಪಕ್ಕದ ಪಾಕಿಸ್ತಾನದಲ್ಲಿ ಟೆರೆರಿಸ್ಟ್ ಪಟ್ಟ ನೀಡಲಾಗಿದೆ. ಬಲೂಚಿಸ್ತಾನ ಗೃಹ ಇಲಾಖೆ ಸಲ್ಲುಮಿಯಾನ ಟೆರೆರಿಸ್ಟ್ ಪಟ್ಟಿಗೆ ಸೇರಿಸಿದೆ. ಅಷ್ಟಕ್ಕೂ ಸಲ್ಮಾನ್ ಅದೇನು ಟೆರೆರಿಸ್ಟ್ ಆಕ್ಟಿವಿಟಿ ಮಾಡಿದ್ರು ಅಂತೀರಾ..?

ಭಾರತದ ಸೂಪರ್ ಸ್ಟಾರ್ ಸಲ್ಮಾನ್ ಖಾನ್​ಗೆ ಪಕ್ಕದ ಪಾಕಿಸ್ತಾನದಲ್ಲಿ ಟೆರೆರಿಸ್ಟ್ ಪಟ್ಟ ನೀಡಲಾಗಿದೆ. ಬಲೂಚಿಸ್ತಾನ ಗೃಹ ಇಲಾಖೆ ಸಲ್ಲುಮಿಯಾನ ಟೆರೆರಿಸ್ಟ್ ಪಟ್ಟಿಗೆ ಸೇರಿಸಿದೆ. ಅಷ್ಟಕ್ಕೂ ಸಲ್ಮಾನ್ ಅದೇನು ಟೆರೆರಿಸ್ಟ್ ಆಕ್ಟಿವಿಟಿ ಮಾಡಿದ್ರು ಅಂತೀರಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ಯೆಸ್ ಬಾಲಿವುಡ್ ಟೈಗರ್, ಸೂಪರ್ ಸ್ಟಾರ್ ಸಲ್ಮಾನ್ ಖಾನ್​ಗೆ ಪಕ್ಕದ ಪಾಕಿಸ್ತಾನ ಭಯೋತ್ಪಾದಕನ ಪಟ್ಟ ಕಟ್ಟಿದೆ. ನಿಜ ಹೇಳಬೇಕು ಅಂದ್ರೆ ಸಲ್ಮಾನ್ ಖಾನ್​ಗೆ ಪಾಕಿಸ್ತಾನದಲ್ಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಲ್ಲುಮಿಯಾನ ಸಿನಿಮಾ ಅಲ್ಲೂ ಹಿಟ್ ಆಗುತ್ವೆ. ಸಿನಿಮಾದಲ್ಲಿ ಹಾಡು ಹಾಡಿಕೊಂಡು,  ಫೈಟ್ ಮಾಡಿಕೊಂಡು ಮನರಂಜಿಸುವ ಈ ನಟ ಅಂಥದ್ದೇನು ಭಯೋತ್ಪಾದಕ ಕೃತ್ಯ ಮಾಡಿದ್ರು..? ಇವರಿಗ್ಯಾಕೆ ಟೆರೆರಿಸ್ಟ್ ಪಟ್ಟ ಅಂತೀರಾ. ಅಸಲಿಗೆ ಇತ್ತೀಚಿಗೆ ದುಬೈನಲ್ಲಿ ಸಲ್ಮಾನ್ ಆಡಿದ ಒಂದು ಮಾತೇ ಈ ಘಟನೆಗೆ ಕಾರಣ.

ಇತ್ತೀಚಿಗೆ ದುಬೈನ ರಿಯಾದ್​ನಲ್ಲಿ ಜಾಯ್ ಫೋರಮ್ 2025ನಲ್ಲಿ ಭಾಗಿಯಾಗಿದ್ದ ಸಲ್ಮಾನ್, ದುಬೈನಲ್ಲಿ ಹಿಂದಿ ಸಿನಿಮಾಗಳಿಗಿರುವ ಮಾರ್ಕೆಟ್ ಬಗ್ಗೆ ಮಾತನಾಡಿದ್ರು. ಇಲ್ಲಿನ ಜನ ಹಿಂದಿ ಸಿನಿಮಾ ಇಷ್ಟಪಡ್ತಾರೆ. ಇಲ್ಲಿ ಅಫ್ಘಾನಿಸ್ತಾನ, ಬಲೂಚಿಸ್ತಾನ, ಪಾಕಿಸ್ತಾನದ ಜನ ನೆಲೆಸಿದ್ದಾರೆ ಅಂದಿದ್ರು. ಬಲೂಚಿಸ್ತಾನ ಸದ್ಯ ಪಾಕಿಸ್ತಾನದ ಭಾಗವಾಗಿದೆ. ಆದ್ರೆ ಅಲ್ಲಿನ ಜನ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಮಾಡ್ತಾ ಇದ್ದಾರೆ. ಈ ಜನ ತಮ್ಮ ಬಲೂಚಿಸ್ತಾನವನ್ನ ಪ್ರತ್ಯೇಕ ರಾಷ್ಟ್ರದಂತೆ ಕರೆದಿದ್ದಕ್ಕೆ ಸಲ್ಮಾನ್​ಗೆ ಧನ್ಯವಾದ ಹೇಳಿದ್ರು. ಆದರೆ ಇದರಿಂದ ಗರಂ ಆಗಿರೋ ಪಾಕ್ ಸರ್ಕಾರ ಭಯೋತ್ಪಾದಕ ಕಾಯ್ದೆಯ 4ನೇ ಶೆಡ್ಯೂಲ್ ಅನುಸಾರ ಸಲ್ಮಾನ್ ನ​ ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ. ಸಲ್ಮಾನ್ ಅದೆಷ್ಟೋ ಸಿನಿಮಾಗಳಲ್ಲಿ ಭಾರತೀಯ ಯೋಧನಾಗಿ, ರಾ ಏಜೆಂಟ್ ಆಗಿ ಪಾಕಿಸ್ತಾನಿಯರಿಗೆ ಬುದ್ದಿ ಕಲಿಸಿದ್ದಾರೆ. ಈಗ ರಿಯಲ್ ಆಗೇ ಒಂದೇ ಒಂದು ಸ್ಟೇಟ್​ಮೆಂಟ್ ಮೂಲಕ ಪಾಕ್​ಗೆ ಭಯ ಹುಟ್ಟಿಸಿದ್ದಾರೆ. ಅಂತೆಯೇ ಪಾಕ್ ಸಲ್ಲುನ ಭಯೋತ್ಪಾದಕ ಅಂತ ಘೋಷಣೆ ಮಾಡಿದೆ.

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more