Dec 24, 2023, 9:18 AM IST
ಬರೋಬ್ಬರಿ 6 ವರ್ಷಗಳ ನಂತರ ಬಾಹುಬಲಿ ಪ್ರಭಾಸ್(Prabhas) ಮತ್ತೆ ವಾಪಸ್ ಬಂದಿದ್ದಾರೆ. ಸಾಲು ಸಾಲು ಸೋಲಿನಿಂದ ಹತಾಶರಾಗಿದ್ದ ತೆಲುಗು ಸೂಪರ್ ಸ್ಟಾರ್ ಪ್ರಭಾಸ್‌ಗೆ ಪ್ರಶಾಂತ್ ನೀಲ್(Prashanth Neel) ಜೀವ ತುಂಬಿದ್ದಾರೆ. ಸಾಲು ಸಾಲು ಸಕ್ಸಸ್ ಸಿನಿಮಾಗಳನ್ನ ನೀಡಿರೋ ಹೊಂಬಾಳೆ ಫಿಲ್ಮ್ಸ್ (Hombale Films) ಸಲಾರ್‌ಗೆ 100 ಕೋಟಿ ಬಂಡವಾಳ ಹೂಡಿ ರಿಲೀಸ್ ಮಾಡಿದ್ರು. ಕೆಜಿಎಫ್ ಲೆವಲ್‌ನಲ್ಲಿ ಹೈಪ್ ಸೃಷ್ಟಿಸಿದ್ದ ಸಲಾರ್, ಫಸ್ಟ್ ಡೇ ಎಷ್ಟು ದುಡಿದಿದೆ ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ. ಸಲಾರ್ ಸಿನಿಮಾಗೆ ಟಕ್ಕರ್ ಕೊಡಲು ಬಾಲಿವುಡ್‌ನ ಡಂಕಿ(Dunki) ಸಿನಿಮಾ ರಿಲೀಸ್ ಆಗಿತ್ತು. ಶಾರುಖ್ ಖಾನ್‌ರ ಸಿನಿಮಾ ಮುಂದೆ ಸಲಾರ್ ಸೋಲುತ್ತೆ ಅಂತ ಹೇಳಲಾಗಿತ್ತು. ಆದ್ರೆ ಸಲಾರ್ ಫಸ್ಟ್ ಡೇ 95 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡೋ ಮೂಲಕ, ಬಾಲಿವುಡ್‌ಗೆ ಸೌತ್ ಸಿನಿಮಾ ಶಾಕ್ ಕೊಟ್ಟಿದೆ. ಸಲಾರ್ ಸಿನಿಮಾ ಮೊದಲ ದಿನವೇ ಭರ್ಜರಿ ಬೂಸ್ಟ್ ಪಡೆದಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ 70 ಕೋಟಿಗಳಿಸಿದೆ. ಕರ್ನಾಟಕದಲ್ಲಿ 12 ಕೋಟಿ, ಕೇರಳ- 5 ಕೋಟಿಗಳಿಸಿ, ಬಾಕ್ಸಾಫಿಸ್‌ನಲ್ಲಿ ರೆಕಾರ್ಡ್ ಬೆರೆದಿದೆ.
ಇದನ್ನೂ ವೀಕ್ಷಿಸಿ: ಈ ಜೋಡಿಗಳಿಗೆ ಹೊಸ ಬದುಕು ಕೊಟ್ಟ 2023: ಈ ವರ್ಷ 2ನೇ ಮದುವೆ ಆದ ಸ್ಟಾರ್ಸ್ ಇವರೇ!