Dec 16, 2023, 10:31 AM IST
ತಂತ್ರಜ್ಞಾನದ ದುರ್ಬಳಕೆ ಅಂದ್ರೆ ಇದೇ ನೋಡಿ. ರಶ್ಮಿಕಾ ಡೀಪ್ ಫೇಕ್ ವಿಡಿಯೋ(Deepfake Video) ನೋಡಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳೇ ವಿರೋಧ ವ್ಯಕ್ತಪಡಿಸಿದ್ದರು. ಹೀಗೆ ವಿಡಿಯೋ ಎಡಿಟ್ ಮಾಡಿದವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮಿತಾಬ್ ಸೇರಿದಂತೆ ಹಲವು ಗಣ್ಯರು ಆಗ್ರಹಿಸಿದ್ದರು. ಹೀಗೆ ಡೀಪ್ ಫೇಕ್ ಮಾಡಿದವನ್ನು ವಿಚಾರಣೆಗೂ ಒಳಪಡಿಸಲಾಯಿತು. ಆದರೆ, ಇದೀಗ ಮತ್ತೊಂದು ರಶ್ಮಿಕಾ ಡೀಫ್ ಫೇಕ್ ವಿಡಿಯೋ ವೈರಲ್ ಆಗಿದೆ. ರಶ್ಮಿಕಾರನ್ನೇ(Rashmika Mandanna) ಹೋಲುವಂತಿದ್ದರೂ ರಶ್ಮಿಕಾ ದೇಹವಲ್ಲ ಎಂದು ಖಚಿತವಾಗಿ ಗುರುತಿಸಬಹುದು. ಯಾರದ್ದೋ ದೇಹಕ್ಕೆ ಯಾರದ್ದೋ ತಲೆಯನ್ನು ಫೋಟೋ ಎಡಿಟಿಂಗ್ ಟೂಲ್ ಮೂಲಕ ಜೋಡಿಸುವುದು ಹಳೆಯ ವಿಚಾರ. ಈ ಫೋಟೋಗಳನ್ನು ನೋಡುವಾಗ ಸ್ವಲ್ಪವಾದರೂ ಅನುಮಾನ ಬರುತ್ತದೆ. ಆದರೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಯಾವುದೇ ಅನುಮಾನ ಬಾರದಂತೆ ಫೋಟೋ ಅಲ್ಲ ವಿಡಿಯೋವನ್ನೇ ಸೃಷ್ಟಿ ಮಾಡಲಾಗುತ್ತದೆ. ತುಂಬಾ ರಿಯಲಿಸ್ಟಿಕ್ಕಾಗಿ ಈ ವಿಡಿಯೋ ಕಾಣುತ್ತೆ. ಹಾಗೆ ರಶ್ಮಿಕಾ ವಿಡಿಯೋ(Video) ಮಾಡಿದ್ದಾರೆ. ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದ್ದು, ಮತ್ತೆ ಚರ್ಚೆಗೆ ಕಾರಣವಾಗಿದೆ. ತಿಂಗಳ ಹಿಂದೆಯಷ್ಟೇ ಇವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಸರ್ಕಾರದ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು. ಆದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹರಿಬಿಟ್ಟ ಮತ್ತೊಂದು ವಿಡಿಯೋ ಸಾಕ್ಷಿಯಾಗಿದೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಕ್ರಿಕೆಟ್ ಹಬ್ಬಕ್ಕೆ ಕೌಂಟ್‌ಡೌನ್: ಕೆಸಿಸಿ ಸೀಸನ್4ರ ಪ್ರಾಕ್ಟೀಸ್‌ನಲ್ಲಿ ಸೆಂಚ್ಯೂರಿ ಸ್ಟಾರ್ ಶಿವಣ್ಣ..!