RRR: ಬಾಹುಬಲಿ​-2ಗಿಂತ ಡಬಲ್‌ ಬಜೆಟ್‌, ರೆಕಾರ್ಡ್ ಬುಕ್ ಸೇರಿದ 'ಆರ್‌ಆರ್‌ಆರ್‌’..!

RRR: ಬಾಹುಬಲಿ​-2ಗಿಂತ ಡಬಲ್‌ ಬಜೆಟ್‌, ರೆಕಾರ್ಡ್ ಬುಕ್ ಸೇರಿದ 'ಆರ್‌ಆರ್‌ಆರ್‌’..!

Published : Mar 23, 2022, 04:00 PM IST

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25 ರಂದು ಬಿಡುಗಡೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(RRR) ಚಿತ್ರದ ಒಟ್ಟಾರೆ ಬಜೆಟ್‌ 500 ಕೋಟಿ ರು. ದಾಟಿದೆ ಎನ್ನಲಾಗುತ್ತಿದೆ.

 

ಬೆಂಗಳೂರು (ಮಾ. 23): ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಮಾ.25 ರಂದು ಬಿಡುಗಡೆಗೆ ಸಿದ್ಧವಾಗಿರುವ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’(RRR) ಚಿತ್ರದ ಒಟ್ಟಾರೆ ಬಜೆಟ್‌ 500 ಕೋಟಿ ರು. ದಾಟಿದೆ ಎನ್ನಲಾಗುತ್ತಿದೆ.  ಇದು ನಿಜವಾದಲ್ಲಿ ಇದು, ಇದುವರೆಗೆ ಭಾರತದಲ್ಲಿ ನಿರ್ಮಾಣವಾದ ಅತ್ಯಂತ ಹೆಚ್ಚಿನ ಬಜೆಟ್‌ನ (High Budget Movie) ಸಿನೆಮಾ ಎನ್ನಿಸಿಕೊಳ್ಳಲಿದೆ.

ರಾಜಮೌಳಿ (SS rajamouli) ಅವರದ್ದೇ ಆದ ಬಹುಜನಪ್ರಿಯ ‘ಬಾಹುಬಲಿ’(Bahubali) 180 ಕೋಟಿ ರು.ನಲ್ಲಿ ಹಾಗೂ ಮುಂದುವರೆದ 2ನೇ ಭಾಗವಾದ ‘ಬಾಹುಬಲಿ: ದ ಕನ್‌ಕ್ಲೂಷನ್‌’ ಅನ್ನು 250 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದೇ ಇದುವರೆಗಿನ ಅತಿ ದುಬಾರಿ ವೆಚ್ಚದ ಚಿತ್ರ ಎನ್ನಿಸಿಕೊಂಡಿತ್ತು. ಇದನ್ನು ಆರ್‌ಆರ್‌ಆರ್‌ ಮೀರಿಸುವ ಸಾಧ್ಯತೆ ಇದೆ.

ಚಿತ್ರದಲ್ಲಿ ರಾಮ್‌ಚರಣ್‌ ಮತ್ತು ಜ್ಯೂನಿಯರ್‌ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರೂ ಚಿತ್ರಕ್ಕೆ ತಲಾ 45 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ಈ ಹಿಂದೆ ವರದಿಗಳು ಹೇಳಿದ್ದವು. ಇನ್ನು ಅಜಯ್‌ ದೇವಗನ್‌ ಮತ್ತು ಅಲಿಯಾ ಭಟ್‌ ಕೂಡಾ ಚಿತ್ರದಲ್ಲಿ ನಟಿಸಿದ್ದು, ಅವರಿಗೆ ಕ್ರಮವಾಗಿ 25 ಮತ್ತು 9 ಕೋಟಿ ರು. ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಇದಕ್ಕೆ ಇತರೆ ನಟರು, ಸಿಬ್ಬಂದಿ ಸಂಭಾವನೆ ಮತ್ತು ಜಿಎಸ್‌ಟಿಯೂ ಸೇರಿದರೆ ಅದು ಹೆಚ್ಚು ಕಡಿಮೆ 500 ಕೋಟಿ ರು. ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.

 

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more