Dec 17, 2023, 9:14 AM IST
ಸಲಾರ್ ನಿರ್ದೇಶಕ ಕರ್ನಾಟಕ ಪ್ರೈಡ್ಪ್ರಶಾಂತ್ ನೀಲ್ ಹಾಗೂ ಆಂಧ್ರ ಪ್ರೈಡ್ ಎಸ್ ಎಸ್ ರಾಜಮೌಳಿಗೆ(SS Rajamouli) ಸದ್ಯ ಚಿತ್ರರಂಗದಲ್ಲಿ ಟಫ್ ಕಾಂಪಿಟೇನ್ ನಡೀತಿದೆ. ರಾಜಮೌಳಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಡೈರೆಕ್ಟರ್ ಆದ್ರೆ, ಅವರಿಗೆ ಕಾಂಪೀಟ್ ಮಾಡೋಕೆ ನೀಲ್ ನಾನ್ ರೆಡಿ ಪ್ರ್ಯೂ ಮಾಡ್ತಾ ಬರ್ತಿದ್ದಾರೆ. ಆದ್ರೆ ಈಗ ಪ್ರಶಾಂತ್ ನೀಲ್(Prashant Neel) ನಿರ್ದೇಶನದ ಸಲಾರ್ ಫಸ್ಟ್ ಟಿಕೆಟ್ ಅನ್ನೇ ರಾಜಮೌಳಿ ಖರೀದಿಸಿದ್ದಾರೆ. ರಾಜಮೌಳಿಯೇ ಸಲಾರ್ ಟಿಕೆಟ್ ಸೇಲಿಂಗ್ ಕೌಂಟರ್ ಓಪನ್ ಮಾಡಿದ್ದಾರೆ. ಸಲಾರ್ ಟಿಕೆಟ್ ಬುಕ್ಕಿಂಗ್(Ticket booking) ಓಪನ್ ಆಗ್ತಿದ್ದಂತೆ ಬುಕ್ ಮೈ ಶೋನಲ್ಲಿ ಒಂದು ಮಿಲಿಯನ್ ಜನ ನೋಡೋಕೆ ಇಂಟ್ರೆಸ್ಟೆಡ್ ಅನ್ನೋದನ್ನ ತೋರಿಸುತ್ತಿದೆ. ಇದು ಸೌತ್ ಇಂಡಿಯಾ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಸೃಷ್ಟಿಸಿರೋ ರೆಕಾರ್ಡ್. ಸಿನಿಮಾದ ಟೀಸರ್ ಟ್ರೈಲರ್ ಬಿಟ್ರೆ ಇನ್ನೂ ಯಾವುದೇ ಪ್ರೆಸ್ ಮೀಟ್ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿಲ್ಲ. ಆದ್ರೂ ಆರ್ಗ್ಯಾನಿಕ್ ಆಗಿ ಸಲಾರ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದೆ. ಅಷ್ಟೆ ಅಲ್ಲ ಸಲಾರ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಬೆಂಗಳೂರ ಥಿಯೇಟರ್ ಲೀಸ್ಟ್ ಕೂಡ ರಿಲೀಸ್ ಮಾಡಿದೆ. ಇಲ್ಲೂ ರೆಸ್ಪಾನ್ಸ್ ದೊಡ್ಡ ಮಟ್ಟದಲ್ಲಿ ಸಿಕ್ತಿದೆ.ಸಲಾರ್ ವಿಶ್ವ ಸಿನಿ ಜಗತ್ತನ್ನ ಆವರಿಸಕೊಳ್ತಿದೆ. ಕಾರಣ ಇದು ಕೆಜಿಎಫ್ ಮೇಕರ್ಸ್ ಸಿನಿಮಾ ಅನ್ನೋದು. ಮತ್ತೊಂದು ಪ್ರಭಾಸ್‌ಗೆ ವರ್ಲ್ಡ್ ವೈಡ್ ಇರೋ ಫ್ಯಾನ್ಸ್ ಬಳಗ. ಇದೀಗ ದೂರದ ಕೆನಡಾದಲ್ಲಿ ಸಲಾರ್ ಕ್ರೇಜ್‌ಗೆ ಸಾಕ್ಷಿಯೊಂದು ಸಿಕ್ಕಿದೆ. ಕೆನಡಾ ಸಿನಿ ಪ್ರೇಕ್ಷಕರು ಸಲಾರ್‌ಗಾಗಿ ಕಾಯುತ್ತಿದ್ದು, ಈ ಸಿನಿಮಾಗೆ ಚಾಪರ್ ಏರ್ ಸೆಲ್ಯೂಟ್ ಮಾಡಿದ್ದಾರೆ. ಆರು ಚಾಪರ್ಗಳನ್ನ ಬಳಸಿಕೊಂಡು ಆಗಸದಲ್ಲಿ ಸಲಾರ್ ಅಂತ ಬರೆದಿದ್ದಾರೆ. ಈ ವೀಡಿಯೋವನ್ನ ಹೊಂಬಾಳೆ ಫಿಲ್ಮ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಸಲಾರ್ ವಿಶ್ವದಾದ್ಯಂತ ತೆರೆ ಕಾಣಲಿದೆ.
ಇದನ್ನೂ ವೀಕ್ಷಿಸಿ: ಧಾರವಾಡದಲ್ಲಿ ಕಾರ್ಮಿಕ ಇಲಾಖೆ ಐತಿಹಾಸಿಕ ಕಾರ್ಯಕ್ರಮ: 550 ತ್ರಿಚಕ್ರ ವಾಹನ ನೀಡಿದ ಸಚಿವ ಸಂತೋಷ್ ಲಾಡ್..!