ಕಾಡ್ಗಿಚ್ಚಿನಿಂದ ನಟಿ ಪ್ರಿಯಾಂಕಾ ಮತ್ತು ನಟಿ ನೋರಾ ಜಸ್ಟ್ ಮಿಸ್; ಶೂಟಿಂಗ್ ಸ್ಟುಡಿಯೋಗಳೆಲ್ಲಾ ಭಸ್ಮ

Jan 11, 2025, 6:39 PM IST

ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ಏಂಜಲಿಸ್ನಲ್ಲಿ ಕಾಡ್ಗಿಚ್ಚು ಅಬ್ಬರಿಸ್ತಾ ಇದೆ. 20ಎಕರೆಗೂ ಹೆಚ್ಚು ಜಾಗದಲ್ಲಿ ವ್ಯಾಪಿಸಿರೋ ಬೆಂಕಿಗೆ ಇಡೀ ಅಮೇರಿಕ ಕಂಗೆಟ್ಟು ಹೋಗಿದೆ. ಪೆಸಿಫಿಕ್ ಪಾಲಿಸೇಡ್ಸ್ನ ಹಾಲಿವುಡ್ ಹಿಲ್ಸ್ನಲ್ಲೂ ಬೆಂಕಿ ಆವರಿಸಿದ್ದು  ಹಾಲಿವುಡ್​ನ ಸ್ಟಾರ್ ನಟ ನಟಿಯರ ಮನೆಗಳೆಲ್ಲಾ ಬೆಂಕಿಗೆ ಆಹುತಿ ಆಗಿವೆ. ನಮ್ಮ ಬಾಲಿವುಡ್ ಬೆಡಗಿಯರಾದ ನೋರಾ ಫತೇಹಿ, ಪ್ರಿಯಾಂಕಾ ಛೋಪ್ರಾ ಕೂಡ ಕಾಡ್ಗಿಚ್ಚಿನ ನಡುವೆ ಸಿಲುಕಿದ್ದಾರೆ.ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೋರ್, ಜೇಮೀ ಲೀ ಕರ್ಟಿಸ್ ಸೇರಿದಂತೆ ಹಲವು ಹಾಲಿವುಡ್ ಸೆಲೆಬ್ರೀಟಿಗಳ ಮನೆ ಸುಟ್ಟು ಕರಲಾಗಿವೆ. ಮನೆ ಕಳೆದುಕೊಂಡು ಸ್ನೇಹಿತರ ಮನೆಯಲ್ಲಿ ಈ ಸ್ಟಾರ್ಸ್ ಅಸರೆ ಪಡೆದುಕೊಂಡಿದ್ದಾರೆ. ಬಾಲಿವುಡ್ ಬೆಡಗಿ ನೋರಾ ಫತೇಹಿ ಹಾಲಿವುಡ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡ್ತಾ ಇದ್ದು, ಈಕೆ ವಾಸ ಮಾಡ್ತಿದ್ದ ಮನೆಯೂ ಉರಿದು ಬೂದಿಯಾಗಿದೆ.ಯಾಂಕಾ ಛೋಪ್ರ ಕೂಡ ಈ ಕಾಡ್ಗಿಚ್ಚಿನ ಭೀಕರತೆಯನ್ನ ಕಣ್ಣಾರೆ ಕಂಡು ಅದರ ಕುರಿತು ಪೋಸ್ಟ್ ಹಾಕಿದ್ದಾರೆ. ಈಗಾಗ್ಲೇ ಈ ಕಾಡ್ಗಿಚ್ಚಿಗೆ 5 ಜನರು ಬಲಿಯಾಗಿದ್ದು ಲಕ್ಷಾಂತರ ಜನ ಮನೆ ಗಳನ್ನ ಕಳೆದುಕೊಂಡಿದ್ದಾರೆ. ನಿನ್ನೆವರೆಗೂ ಸ್ಟಾರ್ ಆಗಿ ಮೆರೀತಾ , ಐಷಾರಾಮಿ ಮನೆಯಲ್ಲಿ ಬದುಕ್ತಾ ಇದ್ದವರು ಇವತ್ತು ಬೀದಿಗೆ ಬಿದ್ದಿದ್ದಾರೆ.

ಹೊರ ರಾಜ್ಯಕ್ಕೆ ತೆರಳಲು ಅನುಮತಿ ಬೇಡಿದ ಪವಿತ್ರಾ ಗೌಡ; ಟ್ರಿಪ್ ಅಲ್ಲ ತೀರ್ಥಯಾತ್ರೆಗಂತೆ