Dec 29, 2023, 10:36 AM IST
ಡಾರ್ಲಿಂಗ್ ಪ್ರಭಾಸ್ ಈಗ ಭಾರತೀಯ ಚಿತ್ರರಂಗದ ಟಾಪ್ ಆಫ್ ದಿ ಟೌನ್. ಅದಕ್ಕೆ ಕಾರಣ ಪ್ರಭಾಸ್‌ರ(Prabhas) ಸಲಾರ್(Salaar) ಸಿನಿಮಾ. ಸಾಹೋ, ಆದಿಪುರುಷ್, ರಾಧೆ ಶ್ಯಾಮ್ ಸಿನಿಮಾ ಸೋತಿದ್ದಕ್ಕೆ ಪ್ರಭಾಸ್ ಸಕ್ಸಸ್ ಪಟ್ಟ ಕಳಚಿ ಹೋಯ್ತು ಅಂತ ಮಾತಾಡಿದ್ರು. ಆದ್ರೆ ಸಲಾರ್ ಪ್ರಭಾಸ್‌ಗೆ ಬಾಕ್ಸಾಫಿಸ್ ಸುಲ್ತಾನ್ ಪಟ್ಟವನ್ನ ಮತ್ತೆ ತಂದು ಕೊಟ್ಟಿದೆ. ಸಲಾರ್ ಸಿನಿಮಾ ರಿಲೀಸ್ ಆಗಿ ಆರೇ ದಿನದಲ್ಲಿ 550 ಕೋಟಿ ಕಲೆಕ್ಷನ್(Collection) ಮಾಡಿದೆ. ಈ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಕನ್ನಡಿಗರ ಹೊಂಬಾಳೆ ಪ್ರೊಡಕ್ಷನ್ ಹೌಸ್ ಟಾಲಿವುಡ್(Tollywood) ಹೀರೋ ಪ್ರಭಾಸ್‌ಗೆ ಗೆಲುವಿನ ಹಾರ ಬೀಳೋ ಹಾಗೆ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: Sandalwood: 2023ರಲ್ಲಿ ವಿವಾಹ ಬಂಧನಕ್ಕೊಳಗಾದ ಸಿಂಹಪ್ರಿಯಾ: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ !