Jan 6, 2024, 10:44 AM IST
ನಟ ಅಚ್ಯುತ್ ಕುಮಾರ್ ವರ್ಸಟೈಲ್ ಆ್ಯಕ್ಟರ್, ಸೆಟಲ್ ಆ್ಯಕ್ಟರ್. ಮೆಚ್ಯೂರ್ಡ್ ಆ್ಯಕ್ಟರ್. ಕಲಾವಿದನಿಗೆ ಭಾಷೆಯ ಬೇಲಿಯಿಲ್ಲ. ಹಾಗಾಗಿ ಅವರು ಭಾಷೆ ಬರದಿದ್ದರೂ ನಟಿಸಬಲ್ಲರು. ಅಚ್ಯುತ್ ಕುಮಾರ್(Achyut Kumar) ಅವರಿಗೆ ತಮಿಳು ಅಷ್ಟೊಂದು ಬರದೇ ಹೋದ್ರೂ ಇತ್ತೀಚೆಗೆ ತೆರಕಂಡಿರೋ ನಯನತಾರ(Nayanthara) ಮುಖ್ಯಭೂಮಿಕೆಯಲ್ಲಿರೋ ಅನ್ನ ಪೂರ್ಣಿ ಅನ್ನೋ ತಮಿಳು ಸಿನಿಮಾದಲ್ಲಿ(Tamil Movie) ನಟಿಸಿದ್ದರು. ನಯನತಾರ ತಂದೆಯ ಪಾತ್ರವದು. ಶ್ರೀರಂಗಸ್ವಾಮಿಗೆ ಪೂಜೆ ಮಾಡುತ್ತಾ ಪ್ರಸಾದ ಮಾಡುವ ಬಹಳ ಪೂಜಾರಿ ಪಾತ್ರವದು. ನಯನತಾರ ನಟನೆಯ ಅನ್ನಪೂರ್ಣಿ ಸಿನಿಮಾದ ತಂದೆಯ ಪಾತ್ರದ ಬಗ್ಗೆ ಬಾರೀ ಚರ್ಚೆಯಾಯಿತು. ‘ದೊಡ್ಡ ಸ್ಟಾರ್‌ಗಳ ಹೆಸರು ಲಿಸ್ಟ್ನಲ್ಲಿ ಇತ್ತು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ನಿರ್ದೇಶಕರು ಫೈನಲ್ ಮಾಡಿದರು. ‘ಈ ಮೊದಲ ಸಿನಿಮಾಗಳಲ್ಲಿ ನನ್ನ ತಂದೆಯ ಪಾತ್ರವನ್ನು ಅವರು ಮಾಡಿರಬಾರದು. ಅಂಥ ಕಲಾವಿದರನ್ನು ಹುಡುಕುತ್ತಿದ್ದೆವು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ಫೈನಲ್ ಮಾಡಿದೆವು’. ಅವರು ಸಿನಿಮಾ ಸೆಟ್ನಲ್ಲೂ ಇರುತ್ತಿದ್ದರು. ತುಂಬಾನೇ ಗಂಭೀರವಾಗಿ ಇರುತ್ತಿದ್ದರು. ಊಟ ಆಯ್ತಾ ಎಂದು ಕೇಳಿದರೆ ಹೌದು ಎಂದು ಕೂಡ ಹೇಳುತ್ತಿರಲಿಲ್ಲ. ಮುಖದಲ್ಲೇ ಸನ್ನೆ ಮಾಡುತ್ತಿದ್ದರು. ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಅವರಿಗೆ ತಮಿಳು ಬರುವುದಿಲ್ಲ. ಆದರೆ, ಅವರ ಪರ್ಫಾರ್ಮೆನ್ಸ್ ಮಾಡಿದ್ದು ಅದ್ಭುತವಾಗಿತ್ತು. ನನಗೆ ತಂದೆ ರೀತಿಯೇ ಫೀಲ್ ಆಯಿತು’ ಎಂದಿದ್ದಾರೆ ನಯನತಾರಾ.
ಇದನ್ನೂ ವೀಕ್ಷಿಸಿ: Drone Pratap: ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲು..ಬಿಗ್ ಬಾಸ್ ಮನೆಗೆ ಪೊಲೀಸರ ಎಂಟ್ರಿ!