Oct 11, 2022, 10:35 AM IST
ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೂನ್ 9ರಂದು ಮದುವೆಯಾಗಿದ್ದರು. ಸರಿಯಾಗಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದು, ಅವಳಿ ಮಕ್ಕಳನ್ನು ಪಡೆದಿದ್ದಾರೆ. ಇನ್ನು ಬಾಡಿಗೆ ತಾಯ್ತನ ಮೂಲಕ ದಂಪತಿ ಮಕ್ಕಳನ್ನು ಪಡೆದಿದ್ದಾರೆನ್ನಲಾಗುತ್ತಿದೆ. ಇದೀಗ ಇಬ್ಬರಿದ್ದ ನಯನತಾರ ಕುಟುಂಬದಲ್ಲಿ ನಾಲ್ಕು ಜನರಾಗಿದ್ದಾರೆ. ದಂಪತಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ.