ನೇಹಾ ವರ್ಕೌಟ್ ನೋಡಿದವರು ಆಹಾ ಅನ್ನೋದು ಫಿಕ್ಸ್!

ನೇಹಾ ವರ್ಕೌಟ್ ನೋಡಿದವರು ಆಹಾ ಅನ್ನೋದು ಫಿಕ್ಸ್!

Published : May 05, 2025, 06:06 PM ISTUpdated : May 06, 2025, 10:00 AM IST

ಮುಂಗಾರು ಮಳೆ-2 ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ನೇಹಾ ಶೆಟ್ಟಿ. ತಮ್ಮ ಫಿಟ್ನೆಸ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಜಿಮ್ ವರ್ಕೌಟ್ ಮತ್ತು ಯೋಗದ ಮೂಲಕ ಫಿಟ್ ಆಗಿರೋದೇ ತಮ್ಮ ಸೌಂದರ್ಯದ ಗುಟ್ಟು ಎನ್ನುತ್ತಾರೆ ನೇಹಾ.

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ  ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ..

ಮುಂಗಾರು ಮಳೆ-2 ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಚೆಲುವೆ ನೇಹಾ ಶೆಟ್ಟಿ. ಈ ಕರಾವಳಿ ಬ್ಯೂಟಿಯ ಹಾಲುಬಣ್ಣದ ಹೊಳಪು, ಕಣ್ ಕುಕ್ಕೋ ಮೈಮಾಟದ ಒನಪು ನೋಡಿದವರು ಒಮ್ಮೆಲೆ ಕ್ಲೀನ್ ಬೌಲ್ಡ್ ಆಗಿಬಿಟ್ರು. ಈಕೆ ಹೊಸ ಮಳೆ ಹುಡುಗಿ ಅಂತಾನೇ ಫೇಮಸ್ ಆದ್ಳು. ಆದ್ರೆ ಈ ಮಳೆ ಹುಡ್ಗಿ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾದಲ್ಲಿ. ಇದಾದ ನಂತರ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದ ನೇಹಾಗೆ ಅವಕಾಶಗಳ ಸುರಿಮಳೆಯೇ ಆಯ್ತು. ಈಗಲೂ ನೇಹಾ ಕೈಲಿ ಸಾಲು ಸಾಲು ಸಿನಿಮಾ ಇವೆ. ಕನ್ನಡದಲ್ಲಿ ನಟಿಸಿಲ್ಲ ಅಂದ ಮಾತ್ರಕ್ಕೆ ನೇಹಾ ಕನ್ನಡದ ಹುಡುಗ್ರಿಗೇನೂ ಮೋಸ ಮಾಡಿಲ್ಲ. ತನ್ನ ಸೋಷಿಯಲ್ ಮಿಡಿಯಾದಲ್ಲಿ ಚೆಂದ ಚೆಂದದ, ಮಾದಕ ಭಂಗಿಯ ಫೋಟೋಸ್ ಹಾಕಿ ಹುಡ್ಗರ ಕಣ್ತಂಪು ಮಾಡ್ತಾ ಇರ್ತಾಳೆ ಈ ಚೆಲುವೆ. ಕೋಮಲಾಂಗಿ ನೇಹಾ ತನ್ನ ಯೋಗ, ಜಿಮ್ ವರ್ಕೌಟ್ ವಿಡಿಯೋಸ್ ಕೂಡ ಶೇರ್ ಮಾಡ್ತಾ ಇರ್ತಾಳೆ. ಹಲವು ಸಾಹಸ ಕಲೆಗಳನ್ನೂ ಕಲಿತಿದ್ದಾಳೆ ಈ ಕರಾವಳಿ ಬೆಡಗಿ. ದಿನನಿತ್ಯದ ಈ ಕಸರತ್ತೇ ನನ್ನ ಸೌಂದರ್ಯದ ಗುಟ್ಟು ಅಂತಾಳೆ ನೇಹಾ.. ನೇಹಾಳ ಈ ವಿಡಿಯೋಸ್ ನೋಡಿದವರು ಕನಸಲ್ಲೂ ಆಹಾ ಅಂತ ಕನವರಿಸೋದು ಸುಳ್ಳಲ್ಲ..!

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more