ಕಿಚ್ಚನಿಗೆ ಲಕ್ ತಂದ ವರ್ಷಾಂತ್ಯ, ಮ್ಯಾಕ್ಸ್ ಬಂಗಾರದ ಬೆಳೆ! ಲೇಟ್ ಆಗಿ ಬಂದ್ರೂ ಲೇಟೆಸ್ಟ್  ಹಿಟ್ ಕೊಟ್ಟ ಸುದೀಪ್!

Dec 31, 2024, 5:32 PM IST

ಡಿಸೆಂಬರ್ ಕೊನೆವಾರ ಸಿನಿಮಾ ತೆರೆಗೆ ಬಂದ್ರೆ ಸೂಪರ್ ಸಕ್ಸಸ್ ಕಾಣುತ್ತೆ ಅನ್ನೋದು ಸ್ಯಾಂಡಲ್​ವುಡ್​ನಲ್ಲಿ ಬಹುಕಾಲದಿಂದ ನಂಬಿಕೊಂಡು ಬಂದಿರೊ ನಂಬಿಕೆ. ಈ ಸಾರಿ ಕೂಡ ಆ ನಂಬಿಕೆ ನಿಜವಾಗಿದೆ. ಕಿಚ್ಚ ಸುದೀಪ್ ನಟನೆ ಮ್ಯಾಕ್ಸ್ ಮೂವಿ ಅಮೋಘ ಸಕ್ಸಸ್ ಗಳಿಸಿದೆ. ಬುಧವಾರವೇ ತೆರೆಗೆ ಬಂದ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಚಿನ್ನದ ಬೆಳೆ ಬೆಳೆದಿದೆ. ಯೆಸ್ ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಡಿಸೆಂಬರ್ ಲಕ್ ವರ್ಕ್ ಆಗಿದೆ. ವರ್ಷದ ಕೊನೆಯ ವಾರ ತೆರೆಗೆ ಬಂದ ಅನೇಕ ಸಿನಿಮಾಗಳು ಇಂಡಸ್ಟ್ರಿ ಹಿಟ್ ಅನ್ನಿಸಿಕೊಂಡಿದ್ವು. ಇದೀಗ ಒನ್ಸ್ ಅಗೈನ್ ಮ್ಯಾಕ್ಸ್ ಮೂಲಕ ಅದು ನಿಜ ಅಂತ ಪ್ರೂವ್ ಆಗಿದೆ. ಬಾಕ್ಸಾಫೀಸ್​​ನಲ್ಲಿ ಸುದೀಪ್ ಸಿನಿಮಾ ಚಿನ್ನದ ಬೆಳೆ ತೆಗೆದಿದೆ.ಕ್ರಿಸ್ ಮಸ್ ದಿನ, ಬುಧವಾರ ಮ್ಯಾಕ್ಸ್ ಮೂವಿ ರಿಲೀಸ್ ಆಗಿದ್ದು ಚಿತ್ರಕ್ಕೆ ಸಖತ್ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಬುಧವಾರದಿಂದ ಭಾನುವಾರದತನಕ ಸಿನಿಮಾ ಭರ್ತಿ 30 ಕೋಟಿ ಬ್ಯುಸಿನೆಸ್ ಮಾಡಿದೆ. ಶುಕ್ರವಾರದಿಂದ ತೆಲುಗು, ತಮಿಳಿನಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಪಾಸಿಟಿವ್ ಪ್ರತಿಕ್ರಿಯೆ ಪಡೀತಾ ಇದೆ. ಇನ್ನೂ ಈ ಅದ್ಭುತ ಸಕ್ಸಸ್​ನಿಂದ ಸಖತ್ ಖುಷ್ ಆಗಿರೋ ಸುದೀಪ್, ಫ್ಯಾನ್ಸ್​ನ ಮೀಟ್ ಮಾಡಿ ಧನ್ಯವಾದ ಹೇಳಿದ್ದಾರೆ. ಬೆಂಗಳೂರಿನ ಜಿಟಿ ಮಾಲ್​ನಲ್ಲಿ ಫ್ಯಾನ್ಸ್​​ನ ಮೀಟ್ ಮಾಡಿರೋ ಕಿಚ್ಚ, ಲೇಟ್ ಆಗಿ ಬಂದಿದ್ದಕ್ಕೆ ಸಾರಿ...ಅದ್ರೆ ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗ್ ಬಂದು ಹಿಟ್ ಕೊಟ್ಟಿದ್ದೀನಿ ಅಂದಿದ್ದಾರೆ.
ಮ್ಯಾಕ್ಸ್​​ ಗೆ ವಿಜಯ್ ಕಾರ್ತಿಕೇಯ ಅಕ್ಷನ್ ಕಟ್ ಹೇಳಿದ್ದು, ಹೆಸರಾಂತ ವಿ ಕ್ರಿಯೇಷನ್ಸ್ ಬಂಡವಾಳ ಹೂಡಿದೆ. ಒಂದೇ ರಾತ್ರಿಯಲ್ಲಿ ನಡೆಯೋ  ಥ್ರಿಲ್ಲಿಂಗ್ ಕಹಾನಿ ಎಲ್ಲರ ಮೆಚ್ಚುಗೆ ಪಡೆದಿದ್ದು, ಇಯರ್ ಎಂಡ್ ಸೆಲೆಬ್ರೇಷನ್ ಟೈಂನಲ್ಲಿ ಮತ್ತಷ್ಟು ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ.