ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

Published : Oct 07, 2023, 09:34 AM IST

ಟ್ರೈಲರ್ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ!
ಥಿಯೇಟರ್ ಕುರ್ಚಿಗಳನ್ನು ಧ್ವಂಸ ಮಾಡಿದ ದಳಪತಿ ಫ್ಯಾನ್ಸ್
ಲಿಯೋ ಟ್ರೈಲರ್ನಲ್ಲಿ ಹಿಂಸೆಗೆ ರೊಚ್ಚಿಗೆದ್ರಾ ಅಭಿಮಾನಿಗಳು?

ಸೌತ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡಿಯೋ ನಂ.1 ಸ್ಟಾರ್ ದಳಪತಿ ವಿಜಯ್(Thalapathy Vijay) ಲಿಯೋ ಸಿನಿಮಾಗೆ 200 ಕೋಟಿ ಸಂಭಾವನೆ ಪಡೆದಿದ್ದಾರೆಂಬ ದೊಡ್ಡ ಸುದ್ದಿ ವೈರಲ್ ಆಗಿತ್ತು. ಇದೀಗ ಇದೇ ಲಿಯೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಯೂಟ್ಯೂಬ್ ಸಿನಿಮಾ ಟ್ರೈಲರ್ ಧೂಳೆಬ್ಬಸುತ್ತಿದೆ.ಆದರೆ 'ಲಿಯೋ' ಸಿನಿಮಾದ(Leo cinema)  ಸ್ಕ್ರೀನಿಂಗ್ ವೇಳೆ ವಿಜಯ್ ಅಭಿಮಾನಿಗಳು ಪುಂಡಾಟ ನಡೆಸಿ ಚಿತ್ರಮಂದಿರದ ಸೀಟುಗಳನ್ನು ಧ್ವಂಸ ಮಾಡಿದ್ದಾರೆ. ವಿಜಯ್‌ಗೆ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ(Fans). ಅದರಲ್ಲಿಯೂ ವಿಜಯ್ರ ಅಭಿಮಾನಿಗಳು ತುಸು ವೈಯಲೆಂಟ್ ಪ್ರವೃತ್ತಿಯವರು ಎಂದು ಅಪಖ್ಯಾತಿಗೆ ಸಹ ಒಳಗಾಗಿದ್ದಾರೆ. ಚೆನ್ನೈನ ರೋಹಿಣಿ ಹೆಸರಿನ ಚಿತ್ರಮಂದಿರದಲ್ಲಿ ‘ಲಿಯೋ’ ಸಿನಿಮಾದ ಟ್ರೈಲರ್(LEO Official Trailer) ಅನ್ನು ಪ್ರದರ್ಶಿಸಲಾಯ್ತು. ಟ್ರೈಲರ್ ಅನ್ನು ನೋಡಿ ಎಂಜಾಯ್ ಮಾಡಿದ ವಿಜಯ್ ಅಭಿಮಾನಿಗಳು ಒಮ್ಮೆಲೆ ಕೂಗಾಟ-ಕಿರುಚಾಟ ಆರಂಭಿಸಿದ್ದಲ್ಲದೆ, ರೊಚ್ಚಿಗೆದ್ದು ಚಿತ್ರಮಂದಿರದ ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ವಿಜಯ್ ಅಭಿಮಾನಿಗಳ ಹುಚ್ಚಾಟದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಜಯ್ ಅಭಿಮಾನಿಗಳಿಗೆ ತಪರಾಕಿ ಹಾಕುತ್ತಿದ್ದಾರೆ.ಲಿಯೋ’ ಸಿನಿಮಾದಲ್ಲಿ ವಿಜಯ್ ಜೊತೆಗೆ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ದಶಕದ ಬಳಿಕ ಈ ಜೋಡಿ ಮತ್ತೆ ಬೆಳ್ಳಿ ತೆರೆ ಮೇಲೆ ಒಂದಾಗಿದೆ. ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಒದಗಿಸಿದ್ದಾರೆ. ಸಿನಿಮಾವು ಅಕ್ಟೋಬರ್ 19ರಂದು ಕನ್ನಡದ ಘೋಸ್ಟ್ ರಲೀಸ್ ದಿನಂದೆ ಬಿಡುಗಡೆ ಆಗಲಿದೆ.

ಇದನ್ನೂ ವೀಕ್ಷಿಸಿ:  50 ಸಾವಿರದಿಂದ 10 ಕೋಟಿಯವರೆಗೆ ಧ್ರುವ ಸಿನಿಪಯಣ.. ಮೊದಲ ಸಂಭಾವನೆಯಿಂದ ನಟ ಮಾಡಿದ್ದೇನು..?

05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more