ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?

Jan 10, 2025, 5:38 PM IST

ಬಾಲಿವುಡ್ ಬ್ಯೂಟಿ , ಮಾದಕ ನಟಿ ಕತ್ರಿನಾ ಕೈಫ್​ಗೆ ಈಗ 41 ವರ್ಷ ವಯಸ್ಸು. ಮದುವೆ ನಂತರವೂ ನಟನೆ ಮುಂದುವರೆಸಿರೋ ಕ್ಯಾಟ್ ಈಗಲೂ 20ರ ತರುಣಿಯಂತೆ ಕಾಣ್ತಾಳೆ. ಕತ್ರಿನಾ ಮೈಮಾಟ-ಮಾದಕ ನೋಟ ಈಗಲೂ ಪಡ್ಡೆ ಹೈಕಳಿಗೆ ನಿದ್ದೆ ಗೆಡಿಸುತ್ತೆ. ಒಂದು ರೀತಿ ಎಣ್ಣೆ ಹೊಡೆಯದೇ ನಶೆ ಏರಿಸೋ ಮೈಮಾಟ ಈ ಬ್ಯೂಟಿದು.ಲ್ಲಾ ನಟಿಮಣಿಯರು ಹೇಳುವಂತೆ ಕತ್ರಿನಾ   ಕೂಡ ತನ್ನ ಬ್ಯೂಟಿ ಹಿಂದಿನ ಸೀಕ್ರೆಟ್ ವರ್ಕೌಟ್ ಮತ್ತು ಡಯಟ್ ಅಂತಾಳೆ. ಕತ್ರಿನಾ ಸೋಷಿಯಲ್ ಮಿಡಿಯಾದಲ್ಲಿ ತನ್ನ ಡಯಟ್ ಸೀಕ್ರೆಟ್​ನ ಶೇರ್ ಮಾಡೋದ್ರ ಜೊತೆಗೆ ವರ್ಕೌಟ್ ವಿಡಿಯೋಸ್​ನೂ ಶೇರ್ ಮಾಡ್ತಾ ಇರ್ತಾರೆ. ಕತ್ರಿನಾ ಸಪೂರ ಮೈಕಟ್ಟು ನೋಡಿದವರು ಈಕೆ ಇಂಥಾ ಕಠಿಣಾತಿಕಠಿಣ ವರ್ಕೌಟ್ ಮಾಡ್ತಾಳೆ ಅಂದ್ರೆ ನಂಬೋದೇ ಕಷ್ಟ. ಅಷ್ಟು ಟಫ್ ವರ್ಕೌಟ್ ಮಾಡೋ ಈ ಚೆಲುವೆ ಜಿಮ್ ನಲ್ಲಿ ಅನುದಿನ ಬೆವರಿಳಿಸ್ತಾಳೆ. ಈಕೆಯ ವರ್ಕೌಟ್ ವಿಡಿಯೋಸ್ ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಕಿಚ್ಚು ಹಚ್ಚಿ ನಿಗಿ ನಗಿ ಮಿನುಗ್ತಾ ಇರುತ್ವೆ.

ಲವ್-ದೋಖಾ, ಸಾಲ-ಸೋಲ, 48 ವರ್ಷದ ನಟ ವಿಶಾಲ್ ದುಸ್ಥಿತಿಗೆ ಕಾರಣ ಏನು?