ಈ ವಾರ ಥಿಯೇಟರ್‌ನಲ್ಲಿ ಟಾಪ್ ಸಿನಿಮಾಗಳ ಸಂಗ್ರಾಮ: ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತಿವೆ ಗೊತ್ತಾ?

ಈ ವಾರ ಥಿಯೇಟರ್‌ನಲ್ಲಿ ಟಾಪ್ ಸಿನಿಮಾಗಳ ಸಂಗ್ರಾಮ: ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತಿವೆ ಗೊತ್ತಾ?

Published : Sep 29, 2022, 01:40 PM IST

ಒಂದು ಕಡೆ ಸತತ ಸಕ್ಸಸ್ ಫುಲ್ ಸಿನಿಮಾಗಳನ್ನ ಕೊಡುತ್ತಿರೋ ಸ್ಯಾಂಡಲ್ವುಡ್. ಮತ್ತೊಂದ್ ಕಡೆ ಸೋತು ಸುಣ್ಣವಾಗಿರೋ ಬಾಲಿವುಡ್. ಮೊಗದಂದು ಕಡೆ ಅದ್ಧೂರಿ ತಾರಾಗಣದಿಂದ ವಿಜೃಂಭಿಸೋ ಟಾಲಿವುಡ್ ಕಾಲಿವುಡ್.

ಒಂದು ಕಡೆ ಸತತ ಸಕ್ಸಸ್ ಫುಲ್ ಸಿನಿಮಾಗಳನ್ನ ಕೊಡುತ್ತಿರೋ ಸ್ಯಾಂಡಲ್ವುಡ್. ಮತ್ತೊಂದ್ ಕಡೆ ಸೋತು ಸುಣ್ಣವಾಗಿರೋ ಬಾಲಿವುಡ್. ಮೊಗದಂದು ಕಡೆ ಅದ್ಧೂರಿ ತಾರಾಗಣದಿಂದ ವಿಜೃಂಭಿಸೋ ಟಾಲಿವುಡ್ ಕಾಲಿವುಡ್. ಹೌದು! ಈ ವಾರ ಸಿಲ್ವರ್ ಸ್ಕ್ರೀನ್ ಮೇಲೆ ಎಲ್ಲಾ ಭಾಷೆಯ ನಿರೀಕ್ಷಿತ ಸಿನಿಮಾಗಳ ಗ್ರಾಮ ಆಗಲಿದೆ. ಆ ಸಿನಿಮಾಗಳೇ ಕಾಂತಾರ, ತೋತಾಪುರಿ, ಪೊನ್ನಿಯಿನ್ ಸೆಲ್ವನ್.. ಹಿಂದಿಯ ವಿಕ್ರಂ ವೇಧ. ಕನ್ನಡ ಸಿನಿ ಪ್ರೇಕ್ಷಕರು ಕಣ್ಬಿಟ್ಟುಕೊಂಡು ಕಾಯುತ್ತಿರೋ ಸಿನಿಮಾ ಕಾಂತಾರ. ಹೊಂಬಾಳೆ ಪ್ರೊಡಕ್ಷನ್, ರಿಷಬ್ ಶೆಟ್ಟಿ ಟ್ಯಾಲೆಂಟ್ ಮಿಕ್ಸ್ ಆಗಿ ಸಿದ್ಧವಾಗಿರೋ ಸಿನಿಮಾ ಇದು. ಮಸ್ತ್ ಮೇಕಿಂಗ್, ಮ್ಯೂಸಿಕ್, ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಅನ್ನೋ ಹ್ಯೂಜ್ ಸ್ಟಾರ್ ಕಾಸ್ಟ್, ಫ್ರೆಶ್ ಎನಿಸೋ ಸ್ಟೋರಿ ಲೈನ್ ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕಾಂತಾರ ಒಂದು ದಂತಕತೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಈ ದಂತಕಥೆ ರಾಜ್ಯದ 250 ಚಿತ್ರಮಂದಿರಗಳಲ್ಲಿ ತೆರೆದುಕೊಳ್ಳಲಿದೆ. 

ಒಂದ್ ಕಡೆ ಕಾಂತಾರದ ದಂತಕಥೆ ನೋಡಿ ಎಂಜಾಯ್ ಮಾಡೋಕೆ ಅವಕಾಶ. ಮತ್ತೊಂದ್ ಕಡೆ ಬಾಯಿ ಚಪ್ಪರಿಸಿಕೊಂಡು ನವರಸ ನಾಯಕ ಜಗ್ಗೇಶ್ ತೋತಾಪುರಿ ನೋಡಿ ಖುಷಿ ಪಡೋ ಚಾನ್ಸ್ ಸಿಕ್ತಿದೆ. ಈ ತೋತಾಪುರಿಯಲ್ಲಿ ಸಿಹಿ-ಉಪ್ಪು, ಹುಳಿ, ಕಾರ ಎಲ್ಲದ ಮಿಶ್ರಣ ಇದೆ. ಜಗ್ಗೇಶ್ ಅಧಿತಿ ಪ್ರಭುದೇವ, ದತ್ತಣ್ಣ, ಸುಮನ್ ರಂಗನಾಥ್ ರಂತಹ ಘಟಾನುಘಟಿಗಳು ನಟಿಸಿದ್ದಾರೆ. ಇದರ ಜತೆಗೆ ವಿಜಯ್ ಪ್ರಸಾದ್ ಸ್ಟೋರಿ ಬೇರೆ. ಇಂತಹ ಟೀಂ ಜೊತೆಯಾಗಿ ಒಂದ್ ಸಿನಿಮಾ ಮಾಡಿದೆ ಅದ್ಮೇಲೆ ಎಂಟರ್ಟೈನ್ಮೆಂಟ್ಗೆ ಏನ್ ಕಮ್ಮಿ ಅಲ್ವಾ.. ಅದಕ್ಕೇನು ಕೊರತೆ ಇಲ್ಲ ಅಂತ ತೋತಾಪುರಿ ಟ್ರೈಲರ್ನಲ್ಲೇ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾ ಕೂಡ ಇದೇ ವಾರ ಸೆಂಪರ್ 30ಕ್ಕೆ ಬೆಳ್ಳಿತೆರೆಗೆ ಬರುತ್ತೆ. ಕನ್ನಡದಲ್ಲಿ ಕಾಂತಾರ. ತೋತಾಪುರಿ ಸಿನಿಮಾಗಳು ಬಂದ್ರೆ ಪ್ಯಾನ್ ಇಂಡಿಯಾ ಸಿನಿಮಾ ಒಂದು ತರೆ ಕಾಣುತ್ತಿದೆ. 

ಅದೇ ಮಣಿರತ್ನಂರ ಪೊನ್ನಿಯಿನ್ ಸೆಲ್ವನ್. ಸೂರ್ಯ, ಕಾರ್ತಿ, ಜಯಂ ರವಿ, ಐಶ್ವರ್ಯ ರೈ, ತ್ರಿಷಾ ಹೀಗೆ ದೊಡ್ಡ ತಾರಾಗಣದ ಸಿನಿಮಾ ಇದು. ಚೋಳರ ಕಥೆ ಹೇಳೋ ಈ ಹಿಸ್ಟಾರಿಕಲ್ ಸಿನಿಮಾದ ಮೊದಲ ಭಾಗ ಐದು ಭಾಷೆಯಲ್ಲಿ ಬರ್ತಿದೆ. ಬಾಹುಬಲಿ ಸಿನಿಮಾದ ಹಾಗೆ ಈ ಸಿನಿಮಾ ಕೂಡ ಬಾಕ್ಸಾಫೀಸ್ ನಲ್ಲಿ ದಾಖಲೆ ಮಾಡೋ ನಿರೀಕ್ಷೆ ಇದೆ. 2017ರಲ್ಲಿ ತಮಿಳಿನಲ್ಲಿ 'ವಿಕ್ರಮ್ ವೇದಾ' ಸಿನಿಮಾ ಬಂದು ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಇದೀಗ ಅದೇ ಸಿನಿಮಾ ಹಿಂದಿಗೆ ರಿಮೇಕ್ ಆಗಿದೆ. ಹಿಂದಿಯಲ್ಲಿ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ನಟಿಸಿದ್ದಾರೆ. ಈ ಸಿನಿಮಾ ಕೂಡ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗ್ತಿದ್ದು, ಬಾಲಿವುಡ್ನಲ್ಲೂ ಹಿಟ್ ಲೀಸ್ಟ್ ಸೇರೋ ನಿರೀಕ್ಷೆ ಇದೆ. ಅಷ್ಟೆ ಅದಲ್ಲ ಕಾಲಿವುಡ್ನ ಕೊಲವೆರಿ ಬಾಯ್ ಧನುಷ್ ಧ್ವಿಪಾತ್ರದಲ್ಲಿ ನಟಿಸಿರೋ ನಾನೇ ವರುವೇನ್ ಸಿನಿಮಾ ಕೂಡ ಇದೇ ವಾರ ರಿಲೀಸ್ ಆಗುತ್ತಿದ್ದೆ. ಹೀಗಾಗಿ ಪ್ರೇಕ್ಷಕ ಯಾವ ಸಿನಿಮಾ ಮೆಚ್ಚಿಕೊಳ್ತಾನೆ ಅನ್ನೋದೆ ಈಗ ಕುತೂಹಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!