ಹನುಮಂತನ ಮನೆಮಂದಿಗೆ ಕಂತು ಕಟ್ಟೋಕೆ ದುಡ್ಡಿಲ್ವಾ? ಕುರಿಗಾಹಿ ಹನುಮಂತ ನಿಜಕ್ಕೂ ಬಡವನಾ?

Jan 7, 2025, 2:16 PM IST

ಈ ಬಿಗ್ ಬಾಸ್ ಶೋ ಇನ್ನೇನು ಕೊನೆಯ ಹಂತಕ್ಕೆ ಬರ್ತಾ ಇದೆ. ಫಿನಾಲೆ ಸಮೀಪಿಸ್ತಾ ಇದ್ದ ಹಾಗೇನೇ ಈ ಬಾರಿ ಬಿಗ್ ಟ್ರೋಫಿ ಗೆಲ್ಲೋರ್ಯಾರು ಅನ್ನೋ ಚರ್ಚೆ ಶುರುವಾಗಿದೆ. ಕುರಿಗಾಹಿ ಕಂ ಸಿಂಗರ್ ಹನುಮಂತ ಅಂತೂ ಪ್ರಶಸ್ತಿ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾನೆ. ಈ ನಡುವೆ ಹನುಮಂತನ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಏನದು ಚರ್ಚೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
  
ಯೆಸ್ ಈ ಬಾರಿಯ ಬಿಗ್ ಬಾಸ್ ಶೋ ಇನ್ನೇನು  ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ದೊಡ್ಮನೆಯಲ್ಲಿ ಜಸ್ಟ್ 9 ಮಂದಿ ಉಳಿದಿದ್ದು, ಅದ್ರಲ್ಲಿ ಒಬ್ಬರು ಬಿಗ್ ಬಾಸ್ 11 ಟ್ರೋಫಿ ಎತ್ತಿ ಹಿಡಿಯಲಿದ್ದಾರೆ. ಅದ್ರಲ್ಲೂ ಕುರಿಗಾಹಿ ಕಂ ಸಿಂಗರ್ ಹನುಮಂತಣ್ಣ ಈ ಬಾರಿಯ ಪ್ರಶಸ್ತಿ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾನೆ.  ಆದ್ರೆ ಹನುಮಂತನ ಸಾಚಾತನದ ಬಗ್ಗೆ ಮನೆಮಂದಿಗಷ್ಟೇ ಅಲ್ಲ ನೋಡುಗರಿಗೂ ಕೊಂಚ ಅನುಮಾನ ಇವೆ. ಈತ ನಿಜಕ್ಕೂ ಮುಗ್ದನಾ ಇಲ್ಲಾ ಮುಗ್ದನಂತೆ ಆಡೋ ಕಿಲಾಡಿನಾ ಅಂತ ಜನ ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ಇವತ್ತಿಗೂ ಹನುಮಂತ ತನ್ನ ಗುಟ್ಟನ್ನ ಬಿಟ್ಟುಕೊಟ್ಟಿಲ್ಲ.

ಇತ್ತೀಚಿಗೆ ಎಲ್ಲಾ ಸದಸ್ಯರ ಮನೆಮಂದಿ ದೊಡ್ಮನೆಗೆ ಹಾಜರಾಗಿದ್ರು. ಹನುಮಂತನ ತಂದೆ ತಾಯಿ ಕೂಡ ಬಂದಿದ್ರು. ಆಗ ಹನುಮಂತನ ತಾಯಿ ಒಂದು ಮಾತು ಹೇಳ್ತಾರೆ. ಈ ಬಾರಿಯ ಸಾಲದ ಕಂತು ಕಟ್ಟೋಕೆ ಆಗ್ಲಿಲ್ಲ ಅಂತ. ಇದನ್ನ ನೋಡಿದ ಜನ ಅರೇ ಹನುಮಂತನ ಮನೆಯಲ್ಲಿ ಈಗಲೂ ಇಷ್ಟೊಂದು ಬಡತನ ಇದೆಯಾ ಅಂತ ಯೋಚಿಸ್ತಾ ಇದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಚಿಲ್ಲೂರು ಬಡ್ನಿ ತಾಂಡಾದ ಹನುಮಂತ ಕನ್ನಡಿಗರಿಗೆ ಪರಿಚಿತ ಆಗಿದ್ದು ಸರಿಗಮಪ ಶೋನಲ್ಲಿ ಸಿಂಗರ್ ಆಗಿ ಎಂಟ್ರಿ ಕೊಡುವ ಮೂಲಕ. ತನ್ನ ವೇಷ, ಮುಗ್ದತೆ, ಹಾಡುಗಾರಿಕೆಯಿಂದ ಎಲ್ಲರ ಮನಗೆದ್ದ ಈತ ಈ ಶೋನಲ್ಲಿ ರನ್ನರ್ ಅಪ್ ಆಗಿದ್ದ.

ಈ ಶೋನಲ್ಲಿ ಸಿಕ್ಕ ಜನಪ್ರಿಯತೆಯಿಂದ ಹನುಮಂತನಿಗೆ  ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳಿಗೆ ಹಾಡುವ ಆಪರ್ಸ್ ಬಂದ್ವು. ವಿದೇಶಗಳಲ್ಲೂ ಹನುಮಂತ ಹಲವು ಕಾರ್ಯಕ್ರಮ ಕೊಟ್ಟು ಬಂದಿದ್ದಾನೆ. ಒಂದೊಂದು ಕಾರ್ಯಕ್ರಮಕ್ಕೂ ಸಾವಿರಾರು ರೂಪಾಯಿ ಸಂಭಾವನೆ ಪಡೆದಿದ್ದಾನೆ.  ಇನ್ನೂ ಅನೇಕ  ವಾಹಿನಿಗಳ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿ ಹನುಮಂತ ಸಾಕಷ್ಟು ಸಂಪಾದನೆ ಮಾಡಿದ್ದಾನೆ. ಸದ್ಯ ಬಿಗ್ ಬಾಸ್​ನಲ್ಲಿ ಭಾಗಿಯಾಗಿದ್ದಕ್ಕೂ ಲಕ್ಷ ಲಕ್ಷ ಪೆಮೆಂಟ್ ಪಡೆಯಲಿದ್ದಾನೆ. ಇಷ್ಟೆಲ್ಲಾ ಯಾಕೆ ಹನುಮಂತನ ಮನೆಯವರು 50 ರಿಂದ 100 ಕುರಿ ಸಾಕಿದ್ದು ಅವುಗಳ ಬೆಲೆಯೇ  10 ರಿಂದ 20 ಲಕ್ಷ ಆಗುತ್ತೆ.

ಅಲ್ಲಿಗೆ ಹೇಗೆ ನೋಡಿದ್ರೂ ಹನುಮಂತ ಭಾರಿ ಹಣವಂತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಹನುಮಂತನ  ತಾಯಿ ಕಂತು ಕಟ್ಟೋಕೆ ಅಗಿಲ್ಲ ಅಂತ ಬಿಗ್ ಬಾಸ್ ಮನೆಯಲ್ಯಾಕೆ ಹೇಳಿದ್ರು..? ಹನುಮಂತ ತಿಂಗಳುಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರೋದ್ರಿಂದ ಅವರಿಗೆ ನಿಜಕ್ಕೂ ಆರ್ಥಿಕ ಸಮಸ್ಯೆ ಆಗಿದೆಯಾ,.? ಅಥವಾ ಜನರ ಅನುಕಂಪ ಪಡೆಯೋಕೆ ಅವರು ಈ ರೀತಿ ಮಾಡಿದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿವೆ. ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆ  ನಡೀತಾ ಇವೆ,

ಒಟ್ಟಾರೆ ಈ ರಿಯಾಲಿಟಿ ಶೋಗಳ ಕಾಲದಲ್ಲಿ ಯಾವುದು ರಿಯಾಲಿಟಿ ಅಂತ ತಿಳಿದುಕೊಳ್ಳೋದು ಅಷ್ಟು ಸುಲಭ ಅಲ್ಲ. ಇಲ್ಲಿ ಮುಗ್ದರು ಅಂದುಕೊಂಡವರು ಕಿಲಾಡಿಗಳಾಗಿರ್ತಾರೆ.. ಕಿಲಾಡಿಗಳು ಅಂದುಕೊಂಡವರು ಕಿರಾತಕರಾಗಿರ್ತಾರೆ..!