Nov 17, 2023, 10:14 AM IST
ಟೈಗರ್ 3 ಸಿನಿಮಾ ರಿಲೀಸ್ ದಿನ ಥಿಯೇಟರ್‌ಗೆ(Theater) ಬಂದ ಅಭಿಮಾನಿಗಳು(Fans) ಪಟಾಕಿ ಹೊಡೆದು, ಕ್ಲಾಸ್‌ಗಳನ್ನೆಲ್ಲಾ ಒಡೆದಿದ್ದಾರೆ. ಹೌದು, ಟೈಗರ್ 3 ಸಿನಿಮಾ ನೋಡಲು ಬಂದ ಅಭಿಮಾನಿಗಳು ಖುಷಿಯಾಯಿತು ಎಂದು ಥಿಯೇಟರ್‌ನಲ್ಲೇ ಪಟಾಕಿ(Firecrackers) ಹೊಡೆದಿದ್ದಾರೆ. ಇದರಿಂದ ಥಿಯೇಟರ್ ಮಾಲೀಕ ಕಂಗಾಲಾಗಿದ್ದಾರೆ. ಅಲ್ಲದೇ ದೊಡ್ಡ ದೊಡ್ಡ ಸಿನಿಮಾಗಳನ್ನು ಹಾಕಲು ಹೆದರುತ್ತಿದ್ದಾರೆ. ಟೈಗರ್ 3 ಸಿನಿಮಾ(Tiger 3 Movie) ನೋಡಿದ ಅಭಿಮಾನಿಗಳು ಈ ರೀತಿ ಮಾಡಿದ್ದು, ಇದನ್ನು ನೋಡಿದ ಸಲ್ಮಾನ್ ಖಾನ್ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಮಾಹಾರಷ್ಟ್ರದ ನಾಸಿಕ್‌ನ ಮಲೆಗಾಂವ್‌ನಲ್ಲಿ ನಡೆದಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಹಾಗೂ ಇಮ್ರಾನ್ ಹಷ್ಮಿ ನಟನೆಯ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇದೆ. ಗೋರೆಗಾಂವ್ ಥಿಯೇಟರ್ನಲ್ಲಿ ‘ಟೈಗರ್ 3’ ಸಿನಿಮಾ ಪ್ರದರ್ಶನ ಆಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಇದನ್ನೂ ವೀಕ್ಷಿಸಿ: ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರಕ್ಕೂ ಕೈವ ಸಿನಿಮಾದ ಆ ಘಟನೆಗೂ ಇದೆಯಾ ಕನೆಕ್ಷನ್ ?