ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

Published : Oct 13, 2023, 09:42 AM IST

ಸ್ಟಾರ್‌ಗಳ ಡಯೇಟ್  ಸಿಕ್ರೇಟ್‌ ಇಲ್ಲಿದೆ ನೋಡಿ..!
ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್!
ದಿನಕ್ಕೆ ಎರಡೇ ಹೊತ್ತು ಊಟ ಮಾಡ್ತಾರಾ ಕಿಚ್ಚ?

ಕಿಚ್ಚ ಸುದೀಪ್  ಯಾವಾಗಲೂ ಫಿಟ್ ಅಂಡ್ ಫೈನ್ ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುತ್ತಾರೆ. ಇತ್ತೀಚೆಗೆ ಬಿಗ್ ಬಾಸ್ ಲಾಂಚಿಂಗ್ ಪ್ರೆಸ್ಟಿವಲ್‌ನಲ್ಲಿ ಸುದೀಪ್(Sudeep) ದಿನಕ್ಕೆ ಎರಡೇ ಬಾರಿ ಊಟ ಮಾಡುವ ವಿಚಾರ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಡಯೆಟ್ ವಿಚಾರ ಕೇಳಿದ್ರೆ  ಅಬ್ಬಾ..? ಏನ್ ಗುರು ಇದು ? 72 ರ ರಜಿನಿಕಾಂತ್‌ಗೆ ಒಮ್ಮೆ ಇದ್ದಕ್ಕಿದ್ದ ಹಾಗೆ ಹೈ ಬಿಪಿ ಬಂತು ಯಾಕೆ ಅಂತ ಚೆಕ್ ಮಾಡ್ದಾಗ ಗೊತ್ತಾಗಿದ್ದು ಆ ನಾಲ್ಕು ವಸ್ತುಗಳು. ರಜಿನಿ ಈಗ ಆ ನಾಲ್ಕು ವಸ್ತುಗಳನ್ನು ತ್ಯಜಿಸಿದ್ದಾರೆ. ಅದೇನೂಂತ ನೀವೇ ಕೇಳಿ.. ಸ್ವತಃ ರಜಿನಿ ಹೇಳ್ತಾರೆ ಆ 4 ವಸ್ತುಗಳನ್ನ ದೂರ ಇಟ್ಟಿದ್ದಾರೆ ರಜಿನಿ.  ಸಾಲ್ಟ್, ಶುಗರ್, ಹಾಲು ಮತ್ತು ಅನ್ನ. ಜೊತೆಗೆ  ಮೈದಾ  ಮಾತ್ರೆಯನ್ನೂ ದೂರವಿಟ್ಟಿದ್ದಾರಂತೆ. ಮುಖ್ಯವಾಗಿ ರಜಿನಿಕಾಂತ್ ಪ್ರತಿ ದಿನ ಮಾಡೊ 2 ಗಂಟೆಗಳ ಎಕ್ಸಸೈಜ್ ಬಾರೀ ಮುಖ್ಯವಾದದ್ದು. ಅದೇನೆಂದರೆ  1 ಗಂಟೆ ವಾಕ್,20 ಮಿನಟ್ಸ್  ಸ್ಟ್ರೆಚಿಂಗ್, ಅರ್ಧ ಗಂಟೆ ಯೋಗಾಸನ, 20 ಮಿನಿಟ್ಸ್ ಪ್ರಾಣಾಯಾಮ ಇದೇ ನೋಡಿ ಸೂಪರ್‌ಸ್ಟಾರ್‌ ಸೀಕ್ರೆಟ್ ಡೆಯೆಟ್. ಇದರ ಜೊತೆಗೆ ಗುರು ಮಂತ್ರವನ್ನೂ ಪಠಿಸುತ್ತಾರೆ. ಬಾಲಿವುಡ್‌ನಲ್ಲಿ ಶಾರುಖ್‌ ಖಾನ್‌ಗಿಂತ ಒಂದು ವರ್ಷವಷ್ಟೇ ಸಣ್ಣವರು ಅಕ್ಷಯ್ ಕುಮಾರ್. ಅಕ್ಷಯ್ ಕುಮಾರ್ ತುಂಬಾನೆ ಆರೋಗ್ಯವಂತರಾಗಿ ಕಾಣುತ್ತಾರೆ. ಅದಕ್ಕೆ ಕಾರಣ  ಅವರ ಊಟ. ಲೈಫ್ ಸ್ಟೈಲ್ ಸಂಜೆ 6.30 7 ರ ನಂತರ ಏನನ್ನೂ ತಿನ್ನೋದಿಲ್ಲ ಅಕ್ಷಯ್ ಇದೇ ಇವರ ಆರೋಗ್ಯದ ಗುಟ್ಟು. 7 ರ ನಂತರ ಏನೆ ತಿಂದರೂ ದೇಹಕ್ಕೆ ಶ್ರಮ ಕೊಟ್ಟಂತೆ. ದೇಹಕ್ಕೂ ರೆಸ್ಟ್ ಕೊಡಿ ಅಂತಾರೆ ಅಕ್ಷಯ್‌ ಕುಮಾರ್‌(Akshay Kumar). ಜೊತೆ ಪ್ರತಿ ದಿನ  1 ಗಂಟೆ ನಿಮ್ಮ ದೇಹಕ್ಕಾಗಿ ಸಮಯ ಕೊಡಿ  ವಾಕಿಂಗ್ ವರ್ಕೌಟ್ ಪ್ರಾಣಾಯಾಮ ಮಾಡಿ ಎನ್ನುತ್ತಾರೆ.

ಇದನ್ನೂ ವೀಕ್ಷಿಸಿ:  ನಿಜವಾಗುತ್ತಾ ಕೋಡಿಶ್ರೀಗಳ ಭವಿಷ್ಯವಾಣಿ..? ಭೂಪಟದಿಂದ ಅಳಿಸಿ ಹೋಗುವ ದೇಶ ಯಾವುದು..?

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more