ಚಿರಯೌವನದ ಹುಚ್ಚಿಗೆ ಬಲಿಯಾದ್ರಾ ನಟಿ ಶೆಫಾಲಿ?

ಚಿರಯೌವನದ ಹುಚ್ಚಿಗೆ ಬಲಿಯಾದ್ರಾ ನಟಿ ಶೆಫಾಲಿ?

Published : Jun 30, 2025, 05:42 PM IST

ನಟಿ ಶೆಫಾಲಿ ಅವರ ಅಕಾಲಿಕ ನಿಧನಕ್ಕೆ ಹೃದಯಾಘಾತ ಕಾರಣ ಎನ್ನಲಾಗಿದ್ದರೂ, ಚಿರಯೌವನದ ಔಷಧಿ ಸೇವನೆಯ ಅಡ್ಡಪರಿಣಾಮಗಳ ಬಗ್ಗೆ ಚರ್ಚೆಯಾಗುತ್ತಿದೆ. ಅದು ಎಷ್ಟು ಮಟ್ಟಿಗೆ ನಿಜ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ನಟಿ ಶೆಫಾಲಿ ಅಕಾಲಿಕ ನಿಧನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೇಲ್ನೋಟಕ್ಕೆ ಶೆಫಾಲಿ ಸಾವಿಗೆ ಹೃದಯಾಘಾತ ಕಾರಣ ಅಂತ ಹೇಳಲಾಗ್ತಾ ಇದೆ. ಆದ್ರೆ ಈ ಸಾವಿನ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಅದ್ರಲ್ಲೂ ಶೆಫಾಲಿ ಌಂಟಿ ಏಜಿಂಗ್ ಡ್ರಗ್ ಸೇವಿಸ್ತಾ ಇದ್ರು. ಚಿರಯೌವನ್ನಾಗಿ ಕಸರತ್ತು ಮಾಡ್ತಾ ಇದ್ರು. ಅದರ ಅಡ್ಡ ಪರಿಣಾಮದಿಂದಲೇ ಜೀವತೆತ್ತಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಅದು ಎಷ್ಟು ಮಟ್ಟಿಗೆ ನಿಜ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಯೆಸ್ ನಟಿ, ನೃತ್ಯಗಾರ್ತಿ ಶೆಫಾಲಿ ಸಾವಿನ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ. ಜಸ್ಟ್  42 ವರ್ಷದ ಶೇಫಾಲಿಯ ಈ ಅಗಲಿಕೆ ಎಲ್ಲರಿಗೂ ಶಾಕ್ ತಂದಿದೆ.  ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಶುಕ್ರವಾರ  ತೀವ್ರ ಎದೆನೋವು ಕಾಣಿಸಿಕೊಂಡು  ಅಸ್ವಸ್ಥರಾಗಿದ್ರಂತೆ.  ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಶೇಫಾಲಿ ಪ್ರಾಣಪಕ್ಷಿ ಹಾರಿಹೋಗಿದೆ.

ಹಿಂದಿ ಕಿರುತೆರೆ, ಬಿಗ್ ಬಾಸ್ ಮತ್ತು ಬಾಲಿವುಡ್ ಚಿತ್ರಗಳಿಂದ ಗುರುತಿಸಿಕೊಂಡಿದ್ದ ಶೆಫಾಲಿ ಕನ್ನಡಿಗರಿಗೆ ಪರಿಚಿತಳಾಗಿದ್ದು ಹುಡುಗರು ಸಿನಿಮಾ ಮೂಲಕ.  2011ರಲ್ಲಿ ತೆರೆಕಂಡ  'ಹುಡುಗರು' ಚಿತ್ರದ 'ತೊಂದ್ರೆ ಇಲ್ಲ ಪಂಕಜಾ' ಹಾಡಿಗೆ ಶೆಫಾಲಿ ಹೆಜ್ಜೆ ಹಾಕಿದ್ರು. ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಜೊತೆಗೆ ಶೆಫಾಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದರು.  ಪಕ್ಕಾ ಟಪೋರಿ ಸ್ಟೈಲ್ ನ ಈ ಸಾಂಗ್ ಸಖತ್ ಸದ್ದು ಮಾಡಿತ್ತು.

ಇಂಥಾ ಶೆಫಾಲಿ 42ನೇ ವಯಸ್ಸಿನಲ್ಲಿ ಏಕಾಏಕಿ ಜೀವತೆತ್ತಿರೋದು ಎಲ್ಲರಿಗೂ ಸಹಜವಾಗೇ ಶಾಕ್ ತಂದಿದೆ. ಮೇಲ್ನೋಟಕ್ಕೆ ಶೆಫಾಲಿ ಸಾವಿಗೆ ಹೃದಯಾಘಾತ ಕಾರಣ ಅಂತ ಹೇಳಿದ್ರೂ ಇದರ ಬಗ್ಗೆ ನಾನಾ ಆಯಾಮದಲ್ಲಿ ಚರ್ಚೆ ನಡೀತಾ ಇವೆ. ಅದ್ರಲ್ಲೂ ಈಕೆ ಚಿರಯೌನದ ಹುಚ್ಚಿಗೆ ಬಲಿಯಾದ್ರಾ ಅನ್ನೊ ನಿಟ್ಟಿನಲ್ಲೂ ಚರ್ಚೆ ನಡೀತಾ ಇವೆ.


ಹೌದು ಶೆಫಾಲಿ ಏಜ್ ರಿವರ್ಸ್ ಮಾಡುವ ಚಿಕಿತ್ಸೆ ಪಡೆದುಕೊಳ್ತಾ ಇದ್ರಂತೆ. ಸದಾ ಸೌಂದರ್ಯವತಿಯಾಗಿಬೇಕು.. ಯೌವನ ತನ್ನ ದೇಹದಲ್ಲಿ ನಳನಳಿಸ್ತಾ ಇರಬೇಕು ಅಂತ ಔಷದಿಗಳನ್ನ ಸೇವಿಸ್ತಾ ಇದ್ರಂತೆ. ಕಳೆದ ಶುಕ್ರವಾರ ನಟಿ ಶೆಫಾಲಿ ಮನೆಯಲ್ಲಿ ಪೂಜೆ ಆಯೋಜನೆಗೊಂಡಿತ್ತು. ಪೂಜೆ ಇರುವ ಕಾರಣ ಶೆಫಾಲಿ ಉಪವಾಸ ವ್ರತ ಕೈಗೊಂಡಿದ್ರಂತೆ. ಆದರೆ ಅಂದು ವೃದ್ಧಾಪ್ಯ ತಡೆಯುವ ಔಷಧಿಯನ್ನ ಕೂಡ ಸೇವಿಸಿದ್ರಂತೆ. ಇದರ ಪರಿಣಾಮವೇ ಅವರಿಗೆ ಲೋ ಬೀಪಿಯಾಗಿ ಹೃದಾಯಾಘಾತವಾಗಿದೆ ಅನ್ನೋ ಮಾತು ಕೇಳಿಬರ್ತಾ ಇವೆ.  

ಹೌದು ಇಂಡಿಯನ್ ಸಿನಿ ಇಂಡಸ್ಟ್ರಿಯ ಸೌಂದರ್ಯ ದೇವತೆ, ಅತಿಲೋಕ ಸುಂದರಿ ಶ್ರೀದೇವಿ ಕೂಡ ಇದೇ ಲೋ ಬಿಪಿ ನಿಂದ ಹೃದಯಾಘಾತವಾಗಿ ಜೀವ ತೆತ್ತಿದ್ರು.  2018ರಲ್ಲಿ ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲಿಯೇ ಹಠಾತ್ ಆಗಿ ಸಾವನ್ನಪ್ಪಿದ್ರು. ಈ ಸಾವಿನ ಬಗ್ಗೆ ನಾನಾ ತನಿಖೆಗಳು ಕೂಡ ನಡೆದಿದ್ವು.

ಶ್ರೀದೇವಿ 1980-90 ರ ದಶಕದಲ್ಲಿ ಇಡೀ ಇಂಡಿಯನ್ ಸಿನಿಲೋಕವನ್ನಾಳಿದ ಸುಂದರಿ. ಸೌತ್ ಮತ್ತು ಬಾಲಿವುಡ್​ನಲ್ಲಿ ತನ್ನದೇ ಸಾಮ್ರಾಜ್ಞ ಕಟ್ಟಿಕೊಂಡಿದ್ದ ಈ ಚೆಲುವೆಯ ಸೌಂದರ್ಯಕ್ಕೆ  ಸರಿಸಾಟಿಯೇ ಇರಲಿಲ್ಲ. ಅಂತೆಯೇ ಶ್ರೀದೇವಿಯನ್ನ ಅತಿಲೋಕ ಸುಂದರಿ ಅಂತ ಕರೀತಿದ್ರು.

ತನಗಿದ್ದ ಈ ಅತಿಲೋಕ ಸುಂದರಿ ಅನ್ನೋ ಪಟ್ಟವನ್ನ ಸದಾಕಾಲ ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿದ್ದ ಶ್ರೀದೇವಿ ಅತಿಯಾಗಿ ಡಯಟ್ ಮಾಡ್ತಾ ಇದ್ದರಂತೆ. ಲವಣಾಂಶ ಸೇವಿಸಿದ್ರೆ ದೇಹದಲ್ಲಿ ನೀರು ಸೇರಿಕೊಂಡು ತೂಕ ಹೆಚ್ಚುತ್ತೆ ಅಂತ ಅನೇಕ ವರ್ಷಗಳಿಂದ ಉಪ್ಪನ್ನೇ ಸೇವಿಸಿರಲಿಲ್ಲವಂತೆ.

ಕೊನಗೆ ಈ ಡಯಟ್​ನಿಂದಲೇ ಆರೋಗ್ಯ ಏರಪೇರಾಗಿ ಶ್ರೀದೇವಿ ಅಕಾಲಿಕ ನಿಧನರಾದ್ರು ಅಂತ ಹೇಳಲಾಗುತ್ತೆ. ಸದ್ಯ ಶೆಫಾಲಿ ಸಾವಿನ ಬಗ್ಗೆಯೂ ಇಂಥದ್ದೇ ಚರ್ಚೆ ಶುರುವಾಗಿದೆ. ಅಲ್ಲಿಗೆ ಇವರನ್ನ ಸೌಂದರ್ಯ ಸಮರಕ್ಕೆ ಬಿದ್ದು ಪ್ರಾಣ ತೆತ್ತ ಸುಂದರಿಯರು ಅನ್ನಬಹುದು.

03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
Read more