ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್

ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್

Published : Dec 23, 2025, 01:27 PM IST

ಧುರಂಧರ್ ಬಾಕ್ಸ್ ಆಫೀಸ್ ನಲ್ಲಿ ಭಯಂಕರ ಸದ್ದು ಮಾಡುತ್ತಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿದ ಚಿತ್ರ ಎಲ್ಲೆಡೆ ಮುನ್ನುಗುತ್ತಿದೆ. ಅಷ್ಟೇ ಅಲ್ಲದೆ ₹500 ಕಲೆಕ್ಷನ್ ಕ್ಲಬ್ ಸೇರಿದೆ.

ಬಾಲಿವುಡ್‌ನ ಈ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ "ಧುರಂಧರ್" ಬಾಕ್ಸ್ ಆಫೀಸ್ ನಲ್ಲಿ ಭಯಂಕರ ಸದ್ದು ಮಾಡುತ್ತಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ನಟಿಸಿದ ಚಿತ್ರ ಎಲ್ಲೆಡೆ ಮುನ್ನುಗುತ್ತಿದೆ. ಅಷ್ಟೇ ಅಲ್ಲದೆ ₹500 ಕಲೆಕ್ಷನ್ ಕ್ಲಬ್ ಸೇರಿದೆ. ಕಳೆದ ಎರಡು ವಾರದಿಂದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ಧುರಂಧರ್​​​​ ಸಧ್ಯದಲ್ಲೇ 1000 ಕೋಟಿ ಕ್ಲಬ್ ಸೇರೋ ಸಾಧ್ಯತೆ ಇದೆ.

ಧರ್ಮ ಕೀರ್ತಿರಾಜ್ 25ನೇ ಚಿತ್ರ 'ನಯನ ಮನೋಹರ': ಸ್ಯಾಂಡಲ್​ವುಡ್​​ನ ಚಾಕೋಲೇಟ್ ಬಾಯ್ ಅಂತಲೇ ಫೇಮಸ್ ಆಗಿರೋ ನಟ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರೋ 25ನೇ ಚಿತ್ರ ’ನಯನ ಮನೋಹರ’.. ಈ ಸಿನಿಮಾದ ಟೈಟಲ್​ ಹಾಗು ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಅನುಷ್ ಸಿದ್ದಪ್ಪ ನಿರ್ಮಾಣ ಮಾಡಿರೋ ಸಿನಿಮಾವನ್ನ ಪುನೀತ್.ಕೆಜಿಆರ್ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿದ್ದು, ಕಾರ್ಯಕ್ರಮದಲ್ಲಿ ಪ್ರಿಯಾಂಕ ಉಪೇಂದ್ರ ಮತ್ತು ವಿನೋಧ್ ಪ್ರಭಾಕರ್ ನವೀನ್ ಶಂಕರ್, ಸಿಂಧೂ ಲೋಕನಾಥ್, ಮಯೂರಿ, ಅನುಷಾ ರೈ, ಶಿಶಿರ್, ಐಶ್ವರ್ಯ ಸಿಂಧೂಗಿ, ಚಂದನ ಅನಂತಕೃಷ, ಸಿರಿ, ತ್ರಿಶಾ, ತೆಲುಗು ಬಿಗ್‌ಬಾಸ್ ವಿನ್ನರ್ ನಿಖಿಲ್ ಮುಂತಾದವರು ಆಗಮಿಸಿದ್ರು.  

ಡೈರೆಕ್ಟರ್ ಪಿ.ಸಿ.ಶೇಖರ್ "Just Us" ಫಸ್ಟ್ ಲುಕ್ ಔಟ್: ಕನ್ನಡದ ಡೈರೆಕ್ಟರ್ ಪಿ.ಸಿ. ಶೇಖರ್ ವೆಬ್ ಸೀರೀಸ್ ಮಾಡಿದ್ದಾರೆ. ಇದಕ್ಕೆ Just Us ಅಂತ ಹೆಸರಿಟ್ಟಿದ್ದಾರೆ. 8 ಚಾಪ್ಟರ್​​ನ ಈ ವೆಬ್ ಸೀರೀಸ್ ಪಿ.ಸಿ.ಶೇಖರ್ ಅವರ ಮೊದಲ ಪ್ರಯತ್ನ ಆಗಿದೆ. ಇಲ್ಲಿವರೆಗೂ ಸಿನಿಮಾಗಳನ್ನೆ ಮಾಡಿಕೊಂಡು ಬಂದಿದ್ದಾರೆ. ಆದ್ರೆ ಇದೇ ಮೊದಲ ಭಾರಿ Just Us ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ವೆಬ್ ಸರಣಿ ಫಸ್ಟ್ ಲುಕ್ ಇದೀಗ ರಿಲೀಸ್ ಆಗಿದೆ.

04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
Read more