ಕೂಲಿ ಸಿನಿಟೀಮ್​​ನ ವಿನೂತನ ಪ್ರಮೋಷನ್: ಮನೆ ಮನೆಗೆ ಬರಲಿದೆ ತಲೈವಾ ಸಿನಿಮಾ ಪೋಸ್ಟರ್

ಕೂಲಿ ಸಿನಿಟೀಮ್​​ನ ವಿನೂತನ ಪ್ರಮೋಷನ್: ಮನೆ ಮನೆಗೆ ಬರಲಿದೆ ತಲೈವಾ ಸಿನಿಮಾ ಪೋಸ್ಟರ್

Published : Aug 01, 2025, 04:22 PM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಮೂವಿ ತೆರೆಗೆ ಬರೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲಾ ಭಾಷೆಯ ಸ್ಟಾರ್ಸ್ ನಟಿಸಿರೋ ಈ ಮಲ್ಟಿಸ್ಟಾರರ್ ಮೂವಿಗೇ ಪ್ರಮೋಷನ್ನೇ ಬೇಕಾಗಿಲ್ಲ.

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಮೂವಿ ತೆರೆಗೆ ಬರೋದಕ್ಕೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲಾ ಭಾಷೆಯ ಸ್ಟಾರ್ಸ್ ನಟಿಸಿರೋ ಈ ಮಲ್ಟಿಸ್ಟಾರರ್ ಮೂವಿಗೇ ಪ್ರಮೋಷನ್ನೇ ಬೇಕಾಗಿಲ್ಲ. ಆದ್ರೂ ಕೂಲಿ ಟೀಂ ಭರ್ಜರಿ ಪ್ರಮೋಷನ್ ಮಾಡ್ತಾ ಇದೆ. ಅದ್ರಲ್ಲೂ ಹೊಸ ಹೊಸ ಟೆಕ್ನಿಕ್ ಬಳಸಿ ಪ್ರಚಾರ ಮಾಡ್ತಾ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ , ಲೊಕೇಶ್ ಕನಗರಾಜ್ ನಿರ್ದೇಶನದ ಕೂಲಿ ಮೂವಿ ರಿಲೀಸ್​ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ.  ಆಗಸ್ಟ್ 14ಕ್ಕೆ  ಕೂಲಿ ಸಿನಿಮಾ ವರ್ಲ್ಟ್ ವೈಡ್ ತೆರೆಗೆ ಬರ್ತಾ ಇದೆ. ಈ ಸಿನಿಮಾದಲ್ಲಿ ತಲೈವಾ ಜೊತೆಗೆ ನಮ್ಮ ಕನ್ನಡದ ರಿಯಲ್ ಸ್ಟಾರ್  ಉಪೇಂದ್ರ, ತೆಲುಗಿನ ಕಿಂಗ್ ನಾಗಾರ್ಜುನ್, ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಕೂಡ ನಟನೆ ಮಾಡಿದ್ದಾರೆ.

ಇಷ್ಟು ದೊಡ್ಡ ಮಲ್ಟಿಸ್ಟಾರರ್ ಮೂವಿಗೆ ಪ್ರಚಾರವಾದ್ರೂ ಯಾಕ್ ಬೇಕೂ, ಈ ಸ್ಟಾರ್​ಗಳ ಹೆಸರೇ ಸಾಕು ಅಲ್ವಾ.. ಆದ್ರೆ ಹೀಗಂದುಕೊಂಡು ಕೂಲಿ ಟೀಂ ಸುಮ್ಮನಾಗಿಲ್ಲ. ಸಿನಿಮಾಗೆ ಭರ್ಜರಿ ಮಾಡ್ತಾ ಇದೆ. ಅದ್ರಲ್ಲೂ ಅಮೇಜಾನ್ ಜೊತೆಗೆ ಕೈ ಜೋಡಿಸಿ ವಿನೂತನ ಪ್ರಚಾರಕ್ಕೆ ಸಿದ್ದವಾಗಿದೆ. ಅಮೇಜಾನ್​ನಿಂದ ತರಿಸುವ ಪಾರ್ಸೆಸ್​ಗಳ ಕವರ್ ಮೇಲೆ ಕೂಲಿ ಪೋಸ್ಟರ್ಸ್ ಪ್ರಿಂಟ್ ಹಾಕಿದ್ದು, ಇನ್ಮುಂದೆ ಅಮೇಜಾನ್​ನಿಂದ ಆರ್ಡರ್ ಮಾಡಿದವರ ಮನೆಗೆ ಕೂಲಿ ಪೋಸ್ಟರ್  ಬರಲಿವೆ. ಈ ಹಿಂದೆ ರಜನಿಕಾಂತ್ ನಟನೆಯ ಕಬಾಲಿ ಪೋಸ್ಟರ್​​ನ ಫ್ಲೈಟ್​​ಗಳ ಪ್ರಿಂಟ್ ಮಾಡಿಸಿದ್ದು, ಸಖತ್ ಸದ್ದು ಮಾಡಿತ್ತು. ಈ ಅಮೇಜಾನ್ ಬಳಸಿಕೊಂಡು ಹೊಸತರ ಸಿನಿಮಾ ಪ್ರಚಾರ ಮಾಡ್ತಾ ಇದೆ ಕೂಲಿ ಟೀಂ. ಒಟ್ಟಾರೆ ತಲೈವಾ ಸಿನಿಮಾ ಎಷ್ಟು ಡಿಫರೆಂಟೋ ಅವರ  ಸಿನಿಮಾ ಪ್ರಮೋಷನ್ಸ್ ಕೂಡ  ಅಷ್ಟೇ ಡಿಫರೆಂಟು.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more