ವಿಶ್ವ ಸುಂದರಿ ಮನೆಯಲ್ಲೂ ಇದೆ ಅತ್ತೆ-ಸೊಸೆ ಜಗಳ..! ಅತ್ತೆ ಮೇಲಿನ ಕೋಪಕ್ಕೆ ಗಂಡನ್ನೇ ದೂರ ಮಾಡ್ತಾರಾ ಐಶ್ವರ್ಯ..?

ವಿಶ್ವ ಸುಂದರಿ ಮನೆಯಲ್ಲೂ ಇದೆ ಅತ್ತೆ-ಸೊಸೆ ಜಗಳ..! ಅತ್ತೆ ಮೇಲಿನ ಕೋಪಕ್ಕೆ ಗಂಡನ್ನೇ ದೂರ ಮಾಡ್ತಾರಾ ಐಶ್ವರ್ಯ..?

Published : Dec 17, 2023, 09:34 AM IST

ಐಶ್ವರ್ಯ ಅಂಥಸ್ತಿದ್ರೇನು.? ಹೆಸರು ಕೀರ್ತಿ ಬಂದ್ರೇನು.? ಮನಸ್ತಾಪ ಆದ್ರೆ ಮುಗೀದು ಮನೆಯೊಂದು ಮೂರು ಬಾಗಿಲು ಆಗ್ಬಿಡುತ್ತೆ. ಈಗ ಅಂತದ್ದೇ ಸ್ತಿತಿ ಬಾಲಿವುಡ್ ದಿಗ್ಗಜ ಕುಟುಂಬ, ಸ್ಟಾರ್ ಫ್ಯಾಮಿಲಿ, ಗೌರವ ಘನತೆ, ಆಸ್ತಿ ಅಂತಸ್ತಿನ ಸಂಸಾರ ಬಚ್ಚನ್ ಕುಟುಂಬಕ್ಕೂ ಆಗಿದೆ.

ಎಲ್ಲಾರ ಮನೆ ದೋಸೆಯೂ ತೂತೆ ಅಂತಾರಲ್ಲ ಅದು ನಿಜಾ ಕಂಡ್ರಿ. ಎಲ್ಲವೂ ಇದ್ರೂ ಏನೋ ಒಂದು ಇಲ್ಲ ಅಂತಾರಲ್ಲ ಅದು ಸತ್ಯ ಕಂಡ್ರಿ. ಯಾಕಂದ್ರೆ ಬಾಲಿವುಡ್ ಚಿತ್ರ ಜಗತ್ತಿನ ಶ್ರೀಮಂತ ಕುಟುಂಬ, ಕೈ ಕಾಲಿಗೆ ಆಳು ಕಾಳು ಎಲ್ಲವೂ ಇರೋ ಅಭಿಷೇಕ್ ಬಚ್ಚನ್ ಸಂಸಾರ ಒಡೆದು ಚೂರಾಗಿದೆ. ಈ ವಿಷಯ ಬಿಟೌನ್‌ನಲ್ಲಿ ಹಲವು ದಿನಗಳಿಂದ ಭಾರಿ ಚರ್ಚೆ ಆಗ್ತಿದೆ. ಆದ್ರೆ ಅದಕ್ಕೆ ಕಾರಣ ಏನು ಅನ್ನೋ ಹೊಗೆ ಈಗ ಹೊರ ಬರುತ್ತಿದೆ. ಅದೇ ಅತ್ತೆ ಸೊಸೆ ಜಗಳವಂತೆ. ಅತ್ತೆ ಮೇಲಿನ ಕೋಪಕ್ಕೆ ಗಂಡನ್ನೇ ದೂರ ಮಾಡ್ತಾರಾ ಐಶ್ವರ್ಯ(Aishwarya Rai) ಅನ್ನೋ ಡೌಟ್ ಈಗ ಎಲ್ಲರಲ್ಲೂ ಇದೆ. ಅಭಿಷೇಕ್ ಬಚ್ಚನ್ ಅಶ್ವರ್ಯ ರೈ ಮದುವೆ ಆಗಿದ್ದು 2007ರಲ್ಲಿ. 15 ವರ್ಷ ತುಂಬು ಸಂಸಾರ ಮಾಡಿದ್ದಾರೆ. ಆದ್ರೆ ಐಶ್ವರ್ಯ ರೈ ಹಾಗು ಅತ್ತೆ ಜಯಾ ಬಚ್ಚನ್(Jaya Bachchan) ಮಧ್ಯೆ ಹೂಯ್ದ ಅಕ್ಕಿ ಬೇಯುತ್ತಿರಲಿಲ್ಲವಂತೆ. ಇಬ್ಬರೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ರಂತೆ. ಇಬ್ಬರ ಮಧ್ಯೆ ಆಸ್ತಿ ವಿಚಾರಕ್ಕೂ ಮನಸ್ತಾಪ ಆಗಿದೆಯಂತೆ. ಅತ್ತೆ ಸೊಸೆ ಜಗಳ ತಾರಕಕ್ಕೇರಿ ಇಬ್ಬರೂ ಮಾತು ಬಿಟ್ಟಿದ್ರಂತೆ. ಹೀಗಾಗಿ ಅತ್ತೆ ಕಾಟಕ್ಕೆ ಬೇಸತ್ತ ಐಶ್ವರ್ಯ ರೈ, ನನಗೆ ಬಚ್ಚನ್ ಫ್ಯಾಮಿಲಿ ಬೇಡ ಅಂತ ಪತಿಯನ್ನ ಕರೆದುಕೊಂಡು ಮನೆ ಬಿಟ್ಟು ಹೋಗಿದ್ರಂತೆ. ಆದ್ರೆ ಅಭಿಷೇಕ್(Abhishek Bachchan) ಹಾಗು ಐಶ್ವರ್ಯ ಮಧ್ಯೆಯೂ ಜಗಳ ಆಗಿದ್ದು, ವಿಶ್ವಸುಂದರಿ ಐಶ್ವರ್ಯ ತಾಳಿ ಕಟ್ಟಿದ ಗಂಡನನ್ನೇ ಬಿಡೋದಕ್ಕೆ ನಿರ್ಧರಿಸಿದ್ದಾರೆ ಅಂತ ಈಗ ಬಿಟೌನ್ನಲ್ಲಿ ಸುದ್ದಿ ಹಬ್ಬಿದೆ. ಸುದ್ದಿ ಮಾತ್ರವಲ್ಲ ಅದಕ್ಕೆ ಪುರಾವೆಗಳು ಸಿಗ್ತಿವೆ. ಐಶ್ವರ್ಯ ರೈ ಕಳೆದ 16 ವರ್ಷದಲ್ಲಿ ಎಲ್ಲೇ ಹೋದ್ರು ಜೊತೆಯಲ್ಲಿ ಪತಿ ಅಭಿಷೇಕ್ ಇರ್ತಾ ಇದ್ರು. ಆದ್ರೆ ಈಗ ವಿಶ್ವಸುಂದರಿ ಸಿಂಗಲ್ ಆಗಿ ಓಡಾಡ್ತಿದ್ದಾರೆ. ಅದಕ್ಕೆ ಸಾಕ್ಷ್ಯ ಕೂಡ ಸಿಕ್ಕಿದೆ. ಐಶ್ ಮಗಳು ಆರಾಧ್ಯ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಓದುತ್ತಿದ್ದಾಳೆ. ಈ ಶಾಲಾ ವಾರ್ಷಿಕೋತ್ಸವದಲ್ಲಿ ಇಡೀ ಬಚ್ಚನ್ ಫ್ಯಾಮಿಲಿ ಭಾಗಿಯಾಗಿತ್ತು. ಅಮಿತಾಭ್, ಜಯಾ ಬಚ್ಚನ್, ಅಭಿಷೇಕ್ ಹಾಗೂ ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡಿದ್ರು. ಆದ್ರೆ ಅಮಿತಾಭ್, ಜಯಾ ಬಚ್ಚನ್, ಅಭಿಷೇಕ್ ಒಂದು ಕಾರಲ್ಲಿ ಬಂದ್ರೆ, ಐಶ್ವರ್ಯ ರೈ ಮಾತ್ರ ಮತ್ತೊಂದು ಕಾರಿನಲ್ಲಿ ಬಂದಿಳಿದಿದ್ರು. ಇದನ್ನು ನೋಡಿದವರು ಇಲ್ಲಿ ಎಲ್ಲವೂ ಸರಿ ಇಲ್ಲ ಅಂತ ಫ್ರ್ಯೂಫ್ ಕೊಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ವರ್ಲ್ಡ್ ವೈಡ್ ಶುರುವಾಗಿದೆ ಪ್ರಭಾಸ್ ಮೇನಿಯಾ..! ಸಲಾರ್ ಕ್ರೇಜ್, ಟಿಕೆಟ್ ಬುಕ್ಕಿಂಗ್ ಸೂಪರ್..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more