ಬಹು ನಿರೀಕ್ಷಿತ 'ಪಠಾಣ್' ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸಾಫೀಸ್'ನಲ್ಲಿ ಅಬ್ಬರಿಸಿಸುತ್ತಿದೆ. ಹಾಗೂ ಕೆಜಿಎಫ್-2 ಕೆಲ ದಾಖಲೆಯನ್ನು ಬ್ರೇಕ್ ಮಾಡಿದೆ.
ಪಠಾಣ್ ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಪಠಾಣ್ ಸಿನಿಮಾ ವಿಶ್ವದಾದ್ಯಂತ 8 ಸಾವಿರ ಸ್ಕ್ರೀನ್'ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇಂಡಿಯಾದಲ್ಲಿ 5500 ಸ್ಕ್ರೀನ್'ಗಳು ಪಠಾಣ್ ತೆಕ್ಕೆಗೆ ಸಿಕ್ಕಿವೆ. ಹೊರದೇಶದಲ್ಲಿ 2,500 ಸ್ಕ್ರೀನ್'ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಈ ಸಿನಿಮಾದ ಫಸ್ಟ್ ಡೇ ಒಟ್ಟು ಹತ್ತತ್ರ 100 ಕೋಟಿ ಕ್ಲಬ್ ಸೇರಿದೆ ಅಂತ ಹೇಳಲಾಗ್ತಿದೆ. ಇನ್ನು ಪಠಾಣ್ ಸಿನಿಮಾವು ಹಿಂದಿಯಲ್ಲಿ ಕೆಜಿಎಫ್ ಚಾಪ್ಟರ್-2 ಬರೆದಿದ್ದ ಮೊದಲ ದಿನದ ರೆಕಾರ್ಡ್ ಬ್ರೇಕ್ ಮಾಡಿದೆ. ಹಾಗೂ ಕೆಜಿಎಫ್-2 ಸಿನಿಮಾಗೆ ಹಿಂದಿಯಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷದ 15 ಸಾವಿರ ಟಿಕೆಟ್'ಗಳು ಮಾರಾಟವಾಗಿದ್ದವು. ಆದರೆ ಇದೀಗ ಪಠಾಣ್ ಸಿನಿಮಾವನ್ನು ಹಿಂದಿಯಲ್ಲಿ ಮೊದಲ ದಿನ ಬರೋಬ್ಬರಿ 5 ಲಕ್ಷದ 56 ಸಾವಿರ ಜನ ಟಿಕೆಟ್ ಬುಕ್ ಮಾಡಿ ನೋಡಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಕೆಜಿಎಫ್-2 ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ರೆಕಾರ್ಡ್ ಕೂಡ ಮುರಿದಿದೆ.
'ತನುಜಾ' ಸಿನಿಮಾದ ಹಾಡುಗಳು ಬಿಡುಗಡೆ: ಇದು ವಿದ್ಯಾರ್ಥಿನಿಯ ರಿಯಲ್ ಕತೆ