
ಕಾರ್ಗಿಲ್ ಸಮರದಲ್ಲಿ ಭಾರತೀಯ ವೀರಯೋಧರು ರಣೋತ್ಸಾಹದಿಂದ ಸೆಣೆಸಿ, ರಕ್ತವನ್ನ ಹರಿಸಿ, ಪಾಕ್ ಆಕ್ರಮಿಸಿದ್ದ ನಮ್ಮ ನೆಲವನ್ನ ಮರಳಿ ಗಳಿಸಿದ್ರು. ಆ ಯುದ್ಧದಲ್ಲಿ ನಮ್ಮ ಸಾವಿರಾರು ಯೋಧರ ಬಲಿದಾನ ಕೂಡ ಆಗಿತ್ತು. ಅಂಥಾ ರಣಭೀಕರ ಸಮರದಲ್ಲಿ ಒಬ್ಬ ಬಾಲಿವುಡ್ ಹೀರೋ ಪಾಲ್ಗೊಂಡಿದ್ರು ಅನ್ನೋ ಅಚ್ಚರಿಯ ವಿಷ್ಯ ನಿಮಗ್ ಗೊತ್ತಾ..? ಯಾರು ಆ ರಿಯಲ್ ಹೀರೋ..? ಆ ಕುರಿತ ಇನ್ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಕಾರ್ಗಿಲ್ ಯುದ್ಧ ಅಂದಕೂಡಲೇ ಭಾರತೀಯರಿಗೆಲ್ಲಾ ರೋಮಾಂಚನ ಆಗುತ್ತೆ. ಕುತಂತ್ರಿ ಪಾಕ್ ಸೇನೆ ಮೋಸದಿಂದ ಆಕ್ರಮಿಸಿಕೊಂಡಿದ್ದ ಕಾಶ್ಮೀರದ ಭೂಮಿಯನ್ನ ನಮ್ಮ ಸೈನಿಕರು ರಕ್ತ ಹರಿಸಿ ಮರಳಿ ಪಡೆದಿದ್ರು. ಪಾಕ್ ಆಕ್ರಮಿಸಿದ್ದ ಟೈಗರ್ ಹಿಲ್ನ ಗೆದ್ದು ತಿರಂಗಾ ಬಾವುಟ ಹಾರಿಸಿದ್ರು. ಈ ಯುದ್ಧದಲ್ಲಿ 500ಕ್ಕೂ ಅಧಿಕ ಭಾರತೀಯ ಯೋಧರು ಪ್ರಾಣ ತೆತ್ತಿದ್ರು. ಈ ರಣಭೀಕರ ಕದನದಲ್ಲಿ ಒಬ್ಬ ಬಾಲಿವುಡ್ ನಟ ಭಾಗಿಯಗಿದ್ದು ನಿಮಗ್ ಗೊತ್ತಾ..? ಹೌದು ಬಹುಭಾಷಾ ನಟ ನಾನಾ ಪಾಟೇಕರ್ 1999ರಲ್ಲಿ ಕಾರ್ಗಿಲ್ ಯುದ್ಧ ನಡೀತಾ ಇದ್ದ ವೇಳೆ ಸಿನಿಮಾ ಕೆಲಸ ಬಿಟ್ಟು ಕಾಶ್ಮೀರಕ್ಕೆ ಹೋಗಿದ್ರು. ಅಲ್ಲಿ ಸೇನೆಯ ಜೊತೆಗೆ ಇದ್ದು ಸೈನಿಕರಿಗೆ ಸಹಾಯ ಮಾಡಿದ್ರು.