105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

105 ದಿನ..7ನೇ ಸೀಸನ್..! ತೆಲುಗು ಬಿಗ್‌ಬಾಸ್ ಅಂತ್ಯ..!

Published : Dec 19, 2023, 10:11 AM IST

ಕನ್ನಡದ ಬಿಗ್‌ಬಾಸ್‌ ಸೀಸನ್ 10 ಆರಂಭವಾಗಿ 60 ದಿನ ದಾಟಿಯಾಗಿದೆ. ಆದ್ರೆ ತೆಲುಗು ಬಿಗ್‌ಬಾಸ್ ಸೀಸನ್ 7 ಮೊದಲೇ ಆರಂಭವಾಗಿತ್ತು. ಆದ್ರೀಗ ತೆಲುಗು ಬಿಗ್‌ಬಾಸ್‌ ಸೀಸನ್ 7 ಅಂತ್ಯವಾಗಿದ್ದು, 17 ಸ್ಪರ್ಧಿಗಳ ಪೈಕಿ ಒಬ್ಬ  ಬಿಗ್‌ಬಾಸ್‌ ಟ್ರೋಫಿಯನ್ನ ಪಡೆದುಕೊಂಡಿದ್ದಾರೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್‌ಬಾಸ್ ಸೀಸನ್ 7 ಆರಂಭವಾಗಿತ್ತು. ಬರೋಬ್ಬರಿ 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್‌ಬಾಸ್ ತೆಲುಗು ಸೀಸನ್ 7ರಲ್ಲಿ(Bigg Boss Telugu Season 7)ಆಡಿದರು. ಈ ಸರ್ತಿಯ ತೆಲುಗು ಬಿಗ್‌ಬಾಸ್‌ನಲ್ಲಿ 17 ಸ್ಪರ್ಧಿಗಳಲ್ಲಿ ಅನೇಕರು ಬೇರೆ ಬೇರೆ ಬ್ಯಾಗ್ರೌಂಡ್‌ನಿಂದ ಬಂದಿದ್ರು. ಆದ್ರೆ ಫಿನಾಲೆಗೆ ಟ್ರೋಫಿಗೆ ಮುತ್ತಿಟ್ಟಿದ್ದು ಮಾತ್ರ ಒಬ್ಬ ರೈತನ ಮಗ. ನಟ ನಾಗಾರ್ಜುನ(Nagarjuna) ನೇತೃತ್ವದ 'ತೆಲುಗು ಬಿಗ್ ಬಾಸ್‌ 7' ಶೋಗೆ ತೆರೆಬಿದ್ದಿದ್ದು, ನಿರೀಕ್ಷೆಯಂತೆ ರೈತನ ಮಗ ಪಲ್ಲವಿ ಪ್ರಶಾಂತ್ ಈ ಬಾರಿಯ 'ಬಿಗ್ ಬಾಸ್' ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ.'ಬಿಗ್ ಬಾಸ್' ಶೋಗೆ ಮಾಮೂಲಿಯಾಗಿ ವ್ಯಕ್ತಿಯಾಗಿ ಎಂಟ್ರಿಕೊಟ್ಟು, ತಮ್ಮ ಅಸಾಧಾರಣ ಪ್ರತಿಭೆಯಿಂದ ಎಲ್ಲರ ಮನಗೆದ್ದ ಪಲ್ಲವಿ ಪ್ರಶಾಂತ್, ಈಗ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ರೈತನ ಮಗನಿಗೆ(Farmer son) 'ಬಿಗ್ ಬಾಸ್' ಪಟ್ಟ ದಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ, ಅಲ್ಲಿ ಸಿಕ್ಕ ಜನಪ್ರಿಯತೆಯಿಂದ 'ಬಿಗ್ ಬಾಸ್‌' ಮನೆ ಪ್ರವೇಶಿಸಿದ ರೈತನ ಮಗ ಪಲ್ಲವಿ ಪ್ರಶಾಂತ್‌ಗೆ 'ಬಿಗ್ ಬಾಸ್‌ 7'ರ ವಿನ್ನರ್ ಪಟ್ಟ ಸಿಕ್ಕಿದೆ. ಅವರಿಗೆ ವಿನ್ನರ್‌ ಟ್ರೋಫಿ ಜೊತೆಗೆ 35 ಲಕ್ಷ ರೂ. ನಗದು, 15 ಲಕ್ಷ ರೂ. ಬೆಲೆಯ ಕಾರು, ವಜ್ರದ ಚಿನ್ನಾಭರಣ ಬಹುಮಾನವಾಗಿ ಸಿಕ್ಕಿದೆ.'ನಾನೊಬ್ಬ ರೈತ, ರೈತನ ಮಗ. ನನಗೆ ಸಿಕ್ಕಿರುವ ಈ ಹಣದಲ್ಲಿ ರೈತರಿಗೆ ಸಹಾಯ ಮಾಡುತ್ತೇನೆ' ಎಂದು ಪಲ್ಲವಿ ಪ್ರಶಾಂತ್ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರೇಮಮಯಿ ಲೀಲಾವತಿ 11ನೇ ದಿನದ ವೈಕುಂಠ ಸಮಾರಾಧನೆ ಮಾಡಿದ ಮಗ..!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more