Jun 14, 2023, 2:15 PM IST
ಮಂಡ್ಯದಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪರ ಮದುವೆ ಬೀಗರೂಟದ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ. 7 ಟನ್ ಚಿಕನ್, 7 ಟನ್ ಮಟನ್ ಸೇರಿ ಒಟ್ಟು 14,000 ಕೆ.ಜಿ ಬಾಡೂಟ ರೆಡಿಯಾಗಲಿದೆ. ಪಕ್ಕ ಅಂಬಿ ಫೇವರಿಟ್ ಐಟಂಸ್ ಇಲ್ಲಿ ಇರಲಿದೆ. ಮಂಡ್ಯದ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಿದ್ಧತೆ ಆರಂಭವಾಗಿದ್ದು, ಸುಮಾರು 1 ಲಕ್ಷ ಜನರಿಗೆ ಬೀಗರೂಟ ಸಿದ್ಧಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. 15 ಎಕರೆ ಜಾಗದಲ್ಲಿ ಬೀಗರೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜರ್ಮನ್ ಟೆಂಟ್ ಹಾಕಲಾಗುತ್ತಿದ್ದು, 50 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ.