ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್

ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್

Published : Dec 20, 2025, 06:49 PM IST

ಅವತಾರ್ ಸರಣಿಯ ಮೂರನೇ ಚಿತ್ರ ಅವತಾರ್ ಫೈರ್ ಅಂಡ್ ಆಶಸ್ ವಿಶ್ವದಾದ್ಯಂತ ತೆರೆಗೆ ಬಂದಿದೆ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿರೋ ಪ್ಯಾಂಡೋರಾ ಜಗತ್ತನ್ನ ನೋಡಿ ಫ್ಯಾನ್ಸ್ ಎಂಜಾಯ್ ಮಾಡ್ತಾ ಇದ್ದಾರೆ.

 

ಅವತಾರ್ ಸರಣಿಯ ಮೂರನೇ ಚಿತ್ರ ಅವತಾರ್ ಫೈರ್ ಅಂಡ್ ಆಶಸ್ ವಿಶ್ವದಾದ್ಯಂತ ತೆರೆಗೆ ಬಂದಿದೆ. ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿರೋ ಪ್ಯಾಂಡೋರಾ ಜಗತ್ತನ್ನ ನೋಡಿ ಫ್ಯಾನ್ಸ್ ಎಂಜಾಯ್ ಮಾಡ್ತಾ ಇದ್ದಾರೆ. ಭಾರತದಲ್ಲೂ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಮೊದಲ ದಿನ 12 ಕೋಟಿ ಗಳಿಕೆ ಮಾಡಿದೆ. ಮೊದಲ ವಾರಾಂತ್ಯಕ್ಕೆ  ಅವತಾರ್-3 , ಮೂರು ಸಾವಿರ ಕೋಟಿ ಗಳಿಸುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್: ಬೆಂಗಳೂರಿನ ಥಣಿಸಂದ್ರದ ಭಾರತೀಯ ಮಾಲ್ ನಲ್ಲಿ ಇವತ್ತು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್ ನಡೆಯಲಿದೆ. ಒಂದೇ ಸ್ಥಳದಲ್ಲಿ ಆರು ಬೃಹತ್ ವೇದಿಕೆ ಇರಲಿದ್ದು, ಚಂದನ್ ಶೆಟ್ಟಿ ಅವರ ಬ್ಯಾಂಡ್ ಸೇರಿದಂತೆ ಅನೇಕ ಪ್ರಸಿದ್ದ ಬ್ಯಾಂಡ್ ಗಳಿಂದ ಆರು ಗಂಟೆಗಳ ಕಾಲ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. "JAM JUNXION" ವತಿಯಿಂದ ಶ್ರೀ  ಆಯೋಜನೆ ಮಾಡಿರುವ ಈ ಮ್ಯೂಸಿಕಲ್​ ಶೋ ಸತತ ಆರು ಗಂಟೆಗಳ ಕಾಲ ನಡೆಯಲಿದ್ದು, ಕನ್ನಡ, ತೆಲುಗು ಹಾಗೂ ಹಿಂದಿ ಮೂರು ಭಾಷೆಗಳ ಸೂಪರ್ ಹಿಟ್ ಹಾಡುಗಳನ್ನ ಹಾಡಿ ಗಾಯಕರು ರಂಜಿಸಲಿದ್ದಾರೆ.

ಆಜಾದ್‌ ಭಾರತ್‌  ಚಿತ್ರಕ್ಕೆ ರಾಜಶ್ರೀ  ಬೋಸ್ ಬೆಂಬಲ: ಸ್ಯಾಂಡಲ್‌ವುಡ್‌ನಲ್ಲಿ ನಟಿ -  ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್‌  ಇದೀಗ ಆಜಾದ್‌ ಭಾರತ್‌  ಎಂಬ ಹಿಂದಿ ಸಿನಿಮಾವನ್ನ ನಿರ್ದೇಶಿಸಿ  ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಜನವರಿ 2ರಂದು ಈ ಸಿನಿಮಾ ತೆರೆಗೆ ಬರಲಿರೋ ಈ ಚಿತ್ರದಲ್ಲಿ  ಸುಭಾಷ್ ಚಂದ್ರ ಬೋಸ್  ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ ಇದೆ.  ವಿಶೇಷ ಅಂದ್ರೆ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳು ರಾಜಶ್ರೀ ಚೌಧರಿ ಬೋಸ್ ಬೆಂಗಳೂರಿನಲ್ಲಿ ನಡೆದ ಸಿನಿಮಾ ಇವೆಂಟ್​ಗೆ ಆಗಮಿಸಿ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದಾರೆ.

ಡೆವಿಲ್ ಸಿನಿಮಾ ವೀಕ್ಷಿಸಿದ ದರ್ಶನ್ ತಾಯಿ: ದರ್ಶನ್ ನಟನೆಯ ಡೆವಿಲ್ ಸಿನಿಮಾವನ್ನ ಮೊದಲ ದಿನವೇ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮತ್ತು ಸೋದರ ದಿನಕರ್ ತೂಗುದೀಪ ವೀಕ್ಷಣೆ ಮಾಡಿದ್ರು. ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಕೂಡ ಮೈಸೂರಿನಲ್ಲಿ ಪುತ್ರನ ಸಿನಿಮಾವನ್ನ ವೀಕ್ಷಣೆ ಮಾಡಿದ್ದಾರೆ. ಎರಡನೇ ವಾರಕ್ಕೆ ಕಾಲಿಟ್ಟಿರೋ ದರ್ಶನ್ ನಟನೆಯ ಡೆವಿಲ್ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣ್ತಾ ಇದೆ.

04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
Read more