ನ್ಯಾಷನಲ್ ಕ್ರಶ್‌ಗೆ ಬಣ್ಣದ ಜಗತ್ತಲ್ಲಿ ಭವಿಷ್ಯ ಇಲ್ವಾ?: ರಶ್ಮಿಕಾ ಮಂದಣ್ಣಗೆ ಶುರುವಾಯ್ತಾ ಬ್ಯಾಡ್‌ಟೈಮ್?

ನ್ಯಾಷನಲ್ ಕ್ರಶ್‌ಗೆ ಬಣ್ಣದ ಜಗತ್ತಲ್ಲಿ ಭವಿಷ್ಯ ಇಲ್ವಾ?: ರಶ್ಮಿಕಾ ಮಂದಣ್ಣಗೆ ಶುರುವಾಯ್ತಾ ಬ್ಯಾಡ್‌ಟೈಮ್?

Published : Dec 29, 2022, 08:22 PM IST

ಪಡ್ಡೆ ಹುಡುಗರ ಸೌಂದರ್ಯ ದೇವತೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಬ್ಯಾಡ್ ಟೈಮ್ ಶುರುವಾಯ್ತಾ.? ಹೀಗೊಂದು ಗುಲ್ಲು ಸೌತ್ ಸಿನಿ ಜಗತ್ತಿನಲ್ಲಿ ಎದ್ದಿದೆ. ಇದಕ್ಕೆ ಕಾರಣ ಖ್ಯಾತ ಸೆಲಿಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ನುಡಿದ ರಶ್ಮಿಕಾ ಭವಿಷ್ಯ. ಹಾಲ್ಗೆನ್ನೆಯಂತಾ ಸೌಂದರ್ಯ, ಕೋಲ್ಮಿಂಚಿನಂಥಾ ಕಣ್ಣೋಟ. 

ಪಡ್ಡೆ ಹುಡುಗರ ಸೌಂದರ್ಯ ದೇವತೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಬ್ಯಾಡ್ ಟೈಮ್ ಶುರುವಾಯ್ತಾ.? ಹೀಗೊಂದು ಗುಲ್ಲು ಸೌತ್ ಸಿನಿ ಜಗತ್ತಿನಲ್ಲಿ ಎದ್ದಿದೆ. ಇದಕ್ಕೆ ಕಾರಣ ಖ್ಯಾತ ಸೆಲಿಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ನುಡಿದ ರಶ್ಮಿಕಾ ಭವಿಷ್ಯ. ಹಾಲ್ಗೆನ್ನೆಯಂತಾ ಸೌಂದರ್ಯ, ಕೋಲ್ಮಿಂಚಿನಂಥಾ ಕಣ್ಣೋಟ. ಮುಖದ ಮೇಲೆ ಸದಾ ಕಾಲ ಮಂದಹಾಸ ಇದೆಲ್ಲಾ ರಶ್ಮಿಕಾ ಬ್ಯೂಟಿಗೆ ಹಿಡಿದ ಕೈಗನ್ನಡಿ. ಈ ಸೌಂಧರ್ಯವನ್ನಿಟ್ಟುಕೊಂಡು ರಶ್ಮಿಕಾ ಸ್ಯಾಂಡಲ್‌ವುಡ್‌ಲ್ಲಿ ಸಾನ್ವಿ ಆದ್ರು. ಟಾಲಿವುಡ್ನಲ್ಲಿ ಲಿಲ್ಲಿ, ಗೀತಾ, ಶ್ರೀವಲ್ಲಿಯಾದ್ರು. ಈಗ ಬಾಲಿವುಡ್‌ನಲ್ಲೂ ಬೇಬಿ ಡಾಲ್ ಆಗೋ ಕನಸು ಕಂಡಿದ್ದಾರೆ ರಶ್ಮಿಕಾ. ಆದ್ರೆ ರಶ್ಮಿಕಾಗೆ ಎದುರಾಗಿರೋ ಬ್ಯಾಡ್‌ಟೈಮ್‌ನಿಂದ ಆಕೆಗೆ ಎಲ್ಲರೂ ಗುಡ್‌ಬೈ ಹೇಳುತ್ತಿದ್ದಾರೆ ಅಂತ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ. 

ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡ್ರೆ ಮಾತ್ರ ಸಿನಿಮಾ ರಂಗದಲ್ಲಿ ಉತ್ತುಂಗಕ್ಕೆ ಏರಬಹುದು ಅಂತ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಅಂದು ಹೇಳಿದ್ರು. ಅದರಂತೆ ರಶ್ಮಿಕಾ ರಕ್ಷಿತ್ ಜೊತೆಗಿನ ಸಂಬಂಧ ಮುರಿದುಕೊಂಡ್ರು ಟಾಪ್ ನಟಿ ಆದ್ರು. ಉತ್ತುಂಗದಲ್ಲಿರುವಾಗ್ಲೆ ಈಗ ರಶ್ಮಿಕಾ ನೈಪತ್ಯಕ್ಕೆ ಇಳಿಯುತ್ತಿದ್ದಾರಾ.? ಹೋಗೋಂದು ಡೌಟ್ ಅವರ ಸಿನಿಮಾ ಸೋಲುಗಳು, ನಿಂದನೆ ಆರೋಪಗಳಿಂದ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ರಶ್ಮಿಕಾಗೆ ಇರೋ ಕೊಂಡ ದೋಷವಂತೆ. ಅರೆ ಇದೇನಿದು ಕೋಂಡ ದೋಷ ಅಂತ ನೀವ್ ಕೇಳ್ಬಹುದು. ಅದು ವಿಜಯ್ ದೇವರಕೊಂಡ ದೋಷ. ಯೆಸ್, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಲವ್ ಸ್ಟೋರಿ ಗುಟ್ಟಾಗೇನು ಉಳಿದಿಲ್ಲ. 

ಈ ಲವ್ ಸ್ಟೋರಿಯಲ್ಲಿ ಕೊಂಚ ದೋಷ ಇದೆ ಅಂತ ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಅವರ ಭವಿಷ್ಯ. ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಜೊತೆ ಲವ್ ಅಫೇರ್ ಇಟ್ಟುಕೊಳ್ಳಬೇಡ ಅಂತ ಹೇಳಿದ್ವಿ. ಆದ್ರೆ ರಶ್ಮಿಕಾ ಕೇಳಲಿಲ್ಲ. ವಿಜಯ್ ದೇವಕೊಂಡಗಿರೋ ಬ್ಯಾಡ್‌ಟೈಮ್ ರಶ್ಮಿಕಾಗೂ ಅಂಟಿದೆ. ಈಗ ರಶ್ಮಿಕಾ ವಿರುದ್ಧ ಸುಖಾಸುಮ್ಮನೆ ವಿವಾದಗಳು ಟ್ರೋಲ್ಗಳು ಹುಟ್ಟಿಕೊಳ್ಳುತ್ತಿವೆ. ಕನ್ನಡ ಸಿನಿಮಾದಿಂದ ಬ್ಯಾನ್ ಮಾಡೋ ಪರಿಸ್ಥಿತಿ ಬಂದಿದೆ. ಇಬ್ಬರ ಜಾತಕ ಕೂಡಿ ಬರಲ್ಲ ಅಂತ ಹೇಳಿದ್ದೆ. ಆಗ ವಿಜಯ್ ದೇವರಕೊಂಡ ಒಂದು ಸಿನಿಮಾ ಹಿಟ್ ಆಯ್ತು. ರಶ್ಮಿಕಾ ಈಗ ಟಾಪ್‌ನಲ್ಲಿದ್ದಾರೆ. ಹಿಂದಿಯಲ್ಲಿ ಮೂರು ಸಿನಿಮಾ ಮಾಡುತ್ತಿದ್ದಾಳೆ. ಅಂತಹ ಹುಡುಗಿ ಹೇಳಿದ್ದು ಕೇಳದೆ ಮತ್ತೆ ವಿಜಯ್ ದೇವರಕೊಂಡ ಜೊತೆ ಹೋದಾಗ ಮತ್ತೆ ಆಕೆಗೆ ನೆಗೆಟೀವ್ ಫೀಲಿಂಗ್ಸ್ ಕಾಣಿಸುತ್ತಿವೆ. 

ವಿಜಯ್ ದೇವರಕೊಂಡ ನೆಗೆಟೀವ್ ಎಫೆಕ್ಟ್ ರಶ್ಮಿಕಾ ಮೇಲೂ ಪ್ರಹರಿಸುತ್ತಿದೆ. ಇದರಿಂದ ಆಕೆ ಸಮಸ್ಯೆ ಎದುರಿಸುತ್ತಿದ್ದಾಳೆ. ಶ್ರೀವಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆ ಇತ್ತೀಚೆಗಷ್ಟೆ ಫಾರಿನ್ ಟ್ರಿಪ್ ಹೋಗಿ ಬಂದಿದ್ರು. ಇವರ ಫಾರಿನ್ ಟೂರ್ ಬಳಿಕ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಆರೋಪಗಳು ನಿಂದನೆ ಎದ್ದಿದೆ. ಕಳೆದ ಕೆಲ ದಿನಗಳಿಂದ ರಶ್ಮಿಕಾ ಕೂಡ ತುಸು ಸೈಲೆಂಟ್ ಆಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಮುಂಚಿನ ಹಾಗೆ ದೊಡ್ಡ ಆಫರ್ಗಳು ಬರುತ್ತಿಲ್ಲ ಅಂತ ಟಾಲಿವುಡ್ನಲ್ಲಿ ರೂಮರ್ಸ್ ಇದೆ. ಇದರ ಮಧ್ಯೆ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮತ್ತೊಂದ್ ಕಡೆ ರಶ್ಮಿಕಾ ವಾರಸುಡು ಸಿನಿಮಾ ಮೂಲಕ ತನ್ನ ಫ್ಯಾನ್ಸ್ ಮೆಚ್ಚಿಸಲು ಸಜ್ಜಾಗಿದ್ದಾರೆ. ಆ ಸಿನಿಮಾ ಯಾವ್ ರಿಸಲ್ಟ್ ಕೊಡುತ್ತೆ ಅನ್ನೋ ಕುತೂಹಲ ಮೂಡಿದೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
Read more