ರಣಬೀರ್-ಆಲಿಯಾ ಮದುವೆಗೆ ನಿಗದಿ ಆಯ್ತು ಮುಹೂರ್ತ..!

ರಣಬೀರ್-ಆಲಿಯಾ ಮದುವೆಗೆ ನಿಗದಿ ಆಯ್ತು ಮುಹೂರ್ತ..!

Published : Apr 04, 2022, 03:13 PM ISTUpdated : Apr 04, 2022, 04:37 PM IST

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ. 

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ.

 

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿದ್ದು ಅಂತ ಹೇಳಲಾಗುತ್ತಿದೆ.  ಅಷ್ಟೆ ಅಲ್ಲ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಪ್ರೇಮದಲ್ಲಿ ಬಿದ್ದಿರೋ ಈ ಜೋಡಿ ಮದುವೆ ಆಗಲು  ಡಿಸೈಡ್ ಮಾಡಿದೆ. ಆದ್ರೆ ಈ ಜೋಡಿ ವಿವಾಹಕ್ಕೆ ಐಶಾ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾವನ್ನ ಹುಡುಕಿಲ್ಲ. ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಇದೇ ಮನೆಯಲ್ಲಿ ರಣಬೀರ್ ಕಪೂರ್ ತಂದೆ-ತಾಯಿ, ರಿಷಿ ಕಪೂರ್ ಹಾಗೂ ನೀತು ಕಪೂರ್ 1980ರ ಜನವರಿ 20ರಂದು ಮದುವೆ ಆಗಿದ್ರು. ಅದೇ ಮನೆಯಲ್ಲಿ ರಣಬೀರ್-ಆಲಿಯಾ ಹಸೆಮಣೆ ಏರುತ್ತಿದ್ದಾರೆ. 450 ಅತಿಥಿಗಳಿಗೆ ಮಾತ್ರ ತಮ್ಮ ಮದುವೆಗೆ ಆಹ್ವಾನಿಸಲಿದೆಯಂತೆ ಈ ಜೋಡಿ. ಏಪ್ರಿಲ್‌ನಲ್ಲಿ ಮದುವೆ ಅಂತ ಹೇಳಲಾಗ್ತಿದೆಯೇ ಹೊರತು ಮದುವೆ ದಿನಾಂಕವನ್ನ ಈ ಜೋಡಿ ರಿವೀಲ್ ಮಾಡಿಲ್ಲ.

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
Read more