ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!

ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!

Published : Dec 19, 2025, 07:50 PM IST

ಬಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್​​​​​​​ ಫ್ಯಾನ್ಸ್​ ಮಧ್ಯೆ ಸಿಲುಕಿ ಸುಸ್ತು ಹೊಡೆದಿದ್ದಾರೆ. ಸಾಕಪ್ಪಾ ಸಾಕು. ಇನ್ಮುಂದೆ ಈ ಫ್ಯಾನ್ಸ್ ಸಹವಾಸವೇ ಸಾಕು ಅನ್ನೋ ಮಟ್ಟಕ್ಕಾಗಿದೆ. ಸಿಕ್ಕಿದ್ದೇ ಚಾನ್ಸು ಅಂತ ನಿಧಿಗೆ ಮೂರು ಲೋಕ ತೋರಿಸಿದ್ದಾ ಅಲ್ಲಿದ್ದ ಜನ.

ಬಾಲಿವುಡ್​ ಬ್ಯೂಟಿ ನಿಧಿ ಅಗರ್ವಾಲ್​​​​​​​ ಫ್ಯಾನ್ಸ್​ ಮಧ್ಯೆ ಸಿಲುಕಿ ಸುಸ್ತು ಹೊಡೆದಿದ್ದಾರೆ. ಸಾಕಪ್ಪಾ ಸಾಕು. ಇನ್ಮುಂದೆ  ಈ ಫ್ಯಾನ್ಸ್ ಸಹವಾಸವೇ ಸಾಕು ಅನ್ನೋ ಮಟ್ಟಕ್ಕಾಗಿದೆ. ಸಿಕ್ಕಿದ್ದೇ ಚಾನ್ಸು ಅಂತ ನಿಧಿಗೆ ಮೂರು ಲೋಕ ತೋರಿಸಿದ್ದಾ ಅಲ್ಲಿದ್ದ ಜನ. ನಿಧಿಗಾದ ಕರಾಳ ಅನುಭವದ ವಿರುಧ್ಧ ಈಗ ಧ್ವನಿ ಎದ್ದಿದೆ. ಹಾಗಾದ್ರೆ ಅಂಥದ್ದೇನಾಯ್ತು.? ಸೆಲೆಬ್ರೆಟಿಗಳು ನೋಡಲು ಜನ ಮುಗಿಬೀಳುವುದು ಸರ್ವೇ ಸಾಮಾನ್ಯ. ಆದ್ರೆ ಇದರಿಂದ  ಕಲಾವಿದರಿಗೆ ಸಮಸ್ಯೆ ತಂದೊಡ್ಡೋತ್ತೆ. ಈಗ ಬಾಲಿವುಡ್ ನಟಿ ನಿಧಿ ಅಗರ್ವಾಲ್​ಗೂ ಅಂತದ್ದೇ ಅನುಭವ ಆಗಿದೆ. ಜನರ ಮಧ್ಯೆ ಸಿಲುಗಿ ನಟಿ ನಿಧಿ ಅಗರ್ವಾಲ್ ಮೂರು ಲೋಕ ನೋಡಿ ಎದ್ನೋ ಬಿದ್ನೋ ಅಂತ ಹೊರ ಬಂದಿದ್ದಾರೆ. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಅಲ್ಲಿದ್ದ ಜನ ಎಳೆದಾದ್ದಾರೆ.

ಹಾಟ್ ಬ್ಯೂಟಿ ನಿಧಿ ಅಗರ್ವಾಲ್ ಹಾಗು ಡಾರ್ಲಿಂಗ್ ಪ್ರಭಾಸ್​ ನಟನೆಯ ದಿ ರಾಜಾಸಾಬ್ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಹೈದರಾಬಾದ್​ನ ಮಾಲ್​​ ಒಂದರಲ್ಲಿ ನಡೆದಿತ್ತು. ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದಂತೆ ನಿಧಿಯನ್ನ ಅಲ್ಲಿದ್ದ ಜನ ಮುತ್ತಿಕೊಂಡು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಕೆಲವರು ಆಕೆಯನ್ನು ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಅಂತೂ ಇಂತೂ ಬಾಡಿಗಾರ್ಡ್ಸ್ ನಿಧಿಯನ್ನ ಸುರಕ್ಷಿತವಾಗಿ ಕಾರ್ ಹತ್ತಿಸಿದ್ದಾರೆ. ಆದ್ರೆ ಕೆಲ ಕ್ಷಣಗಳು ಪರಿಸ್ಥಿತಿ ಕೈ ಮೀರಿದ್ದಂತು ನಿಜ. ಕಾರ್​ ಹತ್ತಿದ ನಟಿ ನಿಧಿ ನಿಟ್ಟುಸಿರು ಬಿಟ್ಟಿದ್ದಾರೆ. ನಟಿ ಶ್ರೀಲೀಲಾಗೂ ಇಂತದ್ದೇ ಅನುಭವ ಆಗಿದೆ. ಆಶಿಕಿ3 ಸಿನಿಮಾದ ಪ್ರಚಾರಕ್ಕೆ ಅಂತ ಹೋದಾಗ ನಟಿ ಶ್ರೀಲೀಲಾರನ್ನ ಕೈ ಹಿಡಿದು ಎಳೆದಿದ್ದ ಫ್ಯಾನ್ಸ್ ತಮ್ಮ ಗುಂಪಿನೊಳಕೆ ಸೇರಿಸಿಕೊಂಡಿದ್ರು.

ಆದ್ರೆ ತಕ್ಷಣ ಅಲರ್ಟ್ ಆದ ಬಾಡಿಗಾರ್ಡ್ಸ್​​ ಶ್ರೀಲೀಲಾರನ್ನ ಅಲ್ಲಿಂದ ಪಾರು ಮಾಡಿದ್ರು. ನಟಿ ರಾಗಿಣಿಗೂ ಇದೇ ಅನುಭವ ಆಗಿದೆ. ಪಬ್ ಒಂದರ ಕಾರ್ಯಕ್ರಮಕ್ಕೆ ಹೋಗಿದ್ದ ರಾಗಿಣಿ ಕೈ ಹಿಡಿದು ಅಭಿಮಾನಿಯೊಬ್ಬ ಎಳೆದಿದ್ದ. ಕೂಡಲೇ ನಟಿ ರಾಂಗ್ ಆಗಿದ್ದ ರಾಗಿಣಿ, ಕೈ ಹಿಡಿದು ಎಳೆದ ಆ ವ್ಯಕ್ತಿಗೆ ರಪ್ ಅಂತ ಅಲ್ಲೇ ಕೆನ್ನೆಗೆ ಬಾರಿಸಿದ್ರು. ಅಷ್ಟೆ ಅಲ್ಲ ನಟಿ ತಮನ್ನಾಗೂ ಹೀಗೆ ಆಗಿತ್ತು. ಡೈ ಹಾರ್ಟ್ ಫ್ಯಾನ್ ಬಾಯ್ ಒಬ್ಬ ತಮನ್ನಾ ಬಳಿ ಫೊಟೋ ಕೇಳಲು ಹೋಗಿ ನುಗ್ಗಿದ್ದ, ಕೊನೆಗೆ ಆತನನ್ನ ಸಮಾಧಾನ ಮಾಡಿ ಫೋಟೋ ಕೊಟ್ಟು ಕೊಳುಹಿಸಿದ್ರು ತಮನ್ನಾ. ಎನಿ ವೇ ಫ್ಯಾನ್ಸ್ ಹೆಸರಲ್ಲಿ ಜನರ ಮಧ್ಯೆ ಇರೋ ಕೆಲ ಕಿಡಿಗೇಡಿಗಳು ನಟಿಯರ ಜೊತೆ ಅತಿರೇಕದ ವರ್ಥನೆಯ ಘಟನೆಗಳು ನಡೀತಾನೆ ಇರುತ್ತೆ. ಆದ್ರೆ ನಟಿ ನಿಧಿ ಅಗರ್ವಾಲ್​​​ ವಿಷಯದಲ್ಲಿ ಸ್ವಲ್ಪ ಹೆಚ್ಚೇ ಆದಂತಿದೆ. 

02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
04:04ವೈರಲ್ ಆದ ಶ್ರೀಲೀಲಾ ಬಾತ್ರೂಮ್ ಫೋಟೋ! ಎಐ, ಡೀಪ್ ಫೇಕ್ ಕಾಟಕ್ಕೆ ಬೇಸತ್ತ ಕಿಸ್ಸಿಕ್ ಬೆಡಗಿ!
04:34ಶ್ರೀಲಂಕಾದಲ್ಲಿ ಶ್ರೀವಲ್ಲಿ ಗ್ಯಾಂಗ್ ಮಸ್ತ್ ಎಂಜಾಯ್: ಮದುವೆ ಮುನ್ನ ಗೆಳತಿಯರ ಜತೆ ಬ್ಯಾಚುಲರ್ ಪಾರ್ಟಿ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
Read more