Dec 29, 2024, 5:12 PM IST
ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು.. ಬಳುಕುವ ಬಾಲೆಯರ ಜಿಮ್ ವರ್ಕೌಟು.. ಮಲ್ಲಿಗೆ ತೂಕದ ಚೆಲುವೆಯರ ಮೈಮಾಟದ ಗುಟ್ಟು.. ಇಲ್ಲಿದೆ ನೋಡಿ ಇವತ್ತಿನ ಮಸಲ್ ಮಸಾಲ..
ಕೃತಿ ಸನನ್.. ಸೌತ್ ಇಂಡಸ್ಟ್ರಿನಲ್ಲೂ ಬಾಲಿವುಡ್ನಲ್ಲೂ ಮಿಂಚಿ ಮಿನುಗ್ತಾ ಇರೋ ಪರಮ ಸುಂದರಿ. ಕಳೆದೊಂದು ದಶಕದಿಂದಲೂ ಆಕ್ಟಿವ್ ಆಗಿರೋ ಈ ಬ್ಯೂಟಿ, ತನ್ನ ನೀಳ ಮೈಮಾಟ, ಮಾದಕ ನೋಟದಿಂದಾನೇ ಫೇಮಸ್.
ಇಂಡಸ್ಟ್ರಿಗೆ ಬಂದು ದಶಕ ಕಳೆದರೂ ಕೃತಿ ಮೈಕಟ್ಟು ಚೂರು ಕೂಡ ಬದಲಾಗಿಲ್ಲ| ಈ ಚೆಲುವೆಯ ಗ್ರಾಂ ಲೆಕ್ಕದ ತೂಕದಲ್ಲಿ ಅರ್ಧ ಗ್ರಾಂ ಕೂಡ ಹೆಚ್ಚು ಕಮ್ಮಿಯಾಗಿಲ್ಲ. ಅಂತೆಯೇ ಈ ಬ್ಯೂಟಿ (Kriti Sanon) ಜಿಮ್ ನಲ್ಲಿ ಬೆರಿಳಿಸೋದೇ ನನ್ನ ಸೌಂದರ್ಯದ ಸಿಕ್ರೆಟ್ಟು ಅಂತಾಳೆ.
ತನ್ನದೇ ಯೂಟ್ಯೂಟ್ ಚಾನೆಲ್ನಲ್ಲಿ ತನ್ನ ವರ್ಕೌಟ್ ವಿಡಿಯೋಸ್ ಶೇರ್ ಮಾಡೋ ಕೃತಿ ಪಡ್ಡೆ ಹೈಕಳಿಗೆ ಫಜೀತಿ ತಂದೊಡ್ತಾಳೆ. ಕೃತಿ ವರ್ಕೌಟ್ ವಿಡಿಯೋಸ್ ನೋಡಿದವೆಲ್ಲಾ ಆಹಾ ಈಕೆಯ ಮೈಮಾಟವೇ ಒಂದು ಸುಂದರ ಕಲಾಕೃತಿ ಅಂತಾರೆ. ಹೆಚ್ಚಿನ ವರ್ಣನೆಗೆ ವಿಡಿಯೋ ನೋಡಿ..