Jan 4, 2025, 12:34 PM IST
ತೆಲಂಗಾಣದಲ್ಲಿ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಜಂಗಾಬಲವನ್ನೇ ನಡುಗಿಸಿದ್ದಾಯ್ತು. ಸಿಎಂ ರೇವಂತ್ ರಡ್ಡಿ ಒಂದೇ ಒಂದು ಗುಟುರಿಗೆ ಇಡೀ ತೆಲುಗು ಚಿತ್ರರಂಗ ಎದ್ನೋ ಬಿದ್ನೋ ಅಂತ ಸಿಎಂ ಜೊತೆ ಮೀಟಿಂಗ್ ಮಾಡಿ ಅಲ್ಲು ಸಮಸ್ಯೆಯನ್ನ ಸ್ವಲ್ಪ ತಿಳಿ ಮಾಡಿದ್ರು. ಈಗ ಅದೇ ತೆಲಂಗಾಣ ಸರ್ಕಾರದ ಜೊತೆ ಬಾಹುಬಲಿ ಪ್ರಭಾಸ್ ಗಟ್ಟಿ ಧ್ವನಿ ಎತ್ತಿದ್ದಾರೆ. ಯಶ್ ಹೋದ ಹಾದಿಯಲ್ಲೇ ಹೆಜ್ಜೆ ಇಟ್ಟಿರೋ ಪ್ರಭಾಸ್ ಧ್ವನಿ ಎತ್ತಿದ್ದು ಯಾರ ವಿರುದ್ಧ ನೋಡೋಣ ಈ ಎಕ್ಸ್ಕ್ಲ್ಯೂಸೀವ್ ಸ್ಟೋರಿಯಲ್ಲಿ. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ2 ಸಕ್ಸಸ್ ಸೆಲೆಬ್ರೇಷನ್ ಮಾಡಿದ್ರೋ ಬಿಟ್ರೋ.. ತೆಲಂಗಾಣ ಸಿಎಂ ಹಾಕಿದ ಬರೆಯಿಂದ ಬೆಚ್ಚಿ ಬಿಚ್ಚಿದ್ದುಂತು ಆಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅಂದ್ರೆ ಅಲ್ಲು ಸೈಲೆಂಟ್ ಅಗ್ ಬಿಡ್ತಾರೆ.. ಫ್ಯಾನ್ಸ್ ಮಾಡಿದ ಕಾಲ್ತುಳಿತಕ್ಕೆ ಒಂದ್ ದಿನ ಜೈಲು ನೋಡಿ ಬಂದಿದ್ದಾರೆ ಅಲ್ಲು.
ಒಂದ್ ಕಡೆ ಅಲ್ಲು ಅರ್ಜುನ್ಗಿದ್ದ ಆಹಂ ಅನ್ನೋ ಜ್ವರವನ್ನ ಬಿಡಿಸಿರೋ ಇದೇ ತೆಲಂಗಾಣ ಸರ್ಕಾರ ಈಗ ಅದೇ ತೆಲುಗು ಸ್ಟಾರ್ ಪ್ರಭಾಸ್ ಜೊತೆ ಸೇರಿ ಮತ್ತೊಂದು ಸಂಗ್ರಾಮಕ್ಕೆ ಹೆಜ್ಜೆ ಇಟ್ಟಿದೆ. ಅದು ಅಂತಿಂತಾ ಹೋರಾಟ ಅಲ್ಲ. ಇಡೀ ಜಗತ್ತನ್ನೇ ಕಾಡುತ್ತಿರೋ ಡ್ರಗ್ಸ್ ನಶೆಯ ವಿರುದ್ಧದ ಹೋರಾಟ. ಹೌದು, ತೆಲಂಗಾಣ ಸರ್ಕಾರದ ಡ್ರಗ್ಸ್ ಮಾಫಿಯಾ ವಿರುದ್ಧದ ಹೋರಾಟಕ್ಕೆ ಈಗ ಕಲ್ಕಿ ಸ್ಟಾರ್ ಪ್ರಭಾಸ್ ಅಂಬಾಸೀಡರ್ ಆಗಿದ್ದಾರೆ. ಹೀಗಾಗೆ ಡ್ರಗ್ಸ್ ನಶೆಯ ವಿರುದ್ಧ ವೀಡಿಯೋ ಮಾಡಿರೋ ಪ್ರಭಾಸ್ ‘ನಮ್ಮ ಜೀವನದಲ್ಲಿ ಹಲವು ಖುಷಿಗಳಿವೆ. ಸಾಕಷ್ಟು ಮನರಂಜನೆ ಇದೆ. ಡಾರ್ಲಿಂಗ್ಸ್, ಡ್ರಗ್ಸ್ ಬೇಡ. ನಮ್ಮನ್ನು ಪ್ರೀತಿಸುವ ಮತ್ತು ಬದುಕುವ ಜನರಿರುವಾಗ ನಮಗೆ ಈ ಡ್ರಗ್ಸ್ ಬೇಕೇ? ಡ್ರಗ್ಸ್ ತೆಗೆದುಕೊಳ್ಳಬೇಡಿ. ನಿಮಗೆ ತಿಳಿದಿರುವ ಯಾರಾದರೂ ಮಾದಕ ವ್ಯಸನಿಗಳಾಗಿದ್ದರೆ, ಇಂದೇ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ.
ಅವರ ಸಂಪೂರ್ಣ ಚೇತರಿಕೆಗೆ ತೆಲಂಗಾಣ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ ಪ್ರಭಾಸ್. ಹಾಗ್ ನೋಡಿದ್ರೆ ಡ್ರಗ್ ಮಾಫಿಯಾ ವಿರುದ್ಧ ದೊಡ್ಡ ಸಮರಕ್ಕೆ ಸಜ್ಜಾಗಿರೋದು ನಮ್ಮ ರಾಕಿಂಗ್ ಸ್ಟಾರ್ ಯಶ್.. ಅದು ಟಾಕ್ಸಿಕ್ ಸಿನಿಮಾ ಮೂಲಕ. ಡ್ರಗ್ಸ್ ವ್ಯಸನದಲ್ಲಿ ಇಡೀ ಜಗತ್ತೇ ಸಿಕ್ಕಿ ಬಿದ್ದಿದೆ. ಈ ದಂದೆ ಹೇಗೆ ನಡೆಯುತ್ತೆ. ಅದನ್ನ ಹೇಗೆ ತಡಿಬೇಕು ಅನ್ನೋ ಕಥೆಯನ್ನೇ ಯಶ್ ಟಾಕ್ಸಿಕ್ ಸಿನಿಮಾ ಮೂಲಕ ಇಡೀ ಜಗತ್ತಿಗೇ ತಿಳಿಸ ಹೊರಟಿದ್ದಾರೆ. ಯಶ್ ಡ್ರಗ್ಸ್ ವಿರುದ್ಧದ ಸಮರಕ್ಕೆ ಸಿನಿಮಾವನ್ನೇ ಬಳಸಿಕೊಳ್ಳುತ್ತಿದ್ದಾರೆ. ಆ ಕಡೆ ಪ್ರಭಾಸ್ ಈಗ ತೆಲಂಗಾಣ ಸರ್ಕಾರದ ಜೊತೆ ಡ್ರಗ್ಸ್ ವಿರುದ್ಧದ ಹೋರಾಟಕ್ಕೆ ಬಂದಿದ್ದಾರೆ. ಹೀಗಾಗಿ ಡ್ರಗ್ ವಿಷಯದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ಗಳಾದ ಪ್ರಭಾಸ್ ಹಾಗು ಯಶ್ರದ್ದು ಒಂದೇ ಗುರಿ ಆಗಿದ್ದು ಇಬ್ಬರನ್ನೂ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.