May 28, 2023, 12:31 PM IST
ತೆಲುಗಿನ ಮಾಸ್ ಮಹಾರಾಜ ರವಿತೇಜ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಟೈಗರ್ ನಾಗೇಶ್ವರ್ ರಾವ್. ವಂಶಿ ನಿರ್ದೇಶನದಲ್ಲಿ ಅದ್ಧೂರಿಯಾಗಿ ತಯಾರಾಗಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಭಾರತದ ಮೂರನೇ ಅತಿ ಉದ್ದದ ರಸ್ತೆ ಹಾಗೂ ರೈಲ್ವೆ ಸೇತುವೆ ಎನಿಸಿಕೊಂಡಿರುವ ರಾಜಮುಂಡ್ರಿಯಲ್ಲಿರುವ ಗೋದಾವರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹ್ಯಾವ್ಲಾಕ್ ಸೇತುವೆ ಮೇಲೆ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡಲಾಗಿದೆ.
ಎರಡು ವರ್ಷಗಳ ಹಿಂದೆ ಎರಡನೇ ಹೆಂಡತಿ ಕಿರಣ್ ರಾವ್ ಅವರಿಗೆ ಡಿವೋರ್ಸ್ ಕೊಟ್ಟ ಬಾಲಿವುಡ್ ನಟ ಅಮೀರ್ ಖಾನ್, ಈಗ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ತನಗಿಂತ 28 ವರ್ಷಗಳ ಸಣ್ಣ ವಯಸ್ಸಿನ ಹುಡುಗಿ ಜೊತೆ ಅಮೀರ್ ಖಾನ್ ಮದುವೆ ಆಗುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಅಮೀರ್ ಖಾನ್‌ಗೆ ಈಗ 58 ವರ್ಷ. ಈಗ 58 ವರ್ಷದ ಅಮೀರ್ ಈಗ ಬಾಲಿವುಡ್ ನಟಿ ಫಾತಿಮಾ ಸನಾ ಶೇಕ್ ಜೊತೆ ವಿವಾಹ ಆಗುತ್ತಿದ್ದಾರಂತೆ.