Jan 11, 2023, 5:11 PM IST
ಇಂಟರ್ನೆಟ್ ಮೂವಿ ಡೇಟಾ ಬೇಸ್ ಸಂಸ್ಥೆ 2023ರ 20 ನಿರೀಕ್ಷಿತ ಸಿನಿಮಾಗಳ ಪಟ್ಟಿ ಮಾಡಿದೆ. ಈ ಲೀಸ್ಟ್'ನಲ್ಲಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾ 7ನೇ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ಪಠಾಣ್, ಪುಷ್ಪ-2, ಸಲಾರ್, ಆದಿ ಪುರುಷ್, ಟೈಗರ್-2 ಹಾಗೂ ಇಂಡಿಯನ್ 02 ಸಿನಿಮಾಗಳಿವೆ. ಇನ್ನು ಈ ಪಟ್ಟಿಯಲ್ಲಿ ಕನ್ನಡದ ಏಕೈಕ ಸಿನಿಮಾ ಕಬ್ಜ ಚಿತ್ರಕ್ಕೆ ಮಾತ್ರ ಸ್ಥಾನ ಸಿಕ್ಕಿದೆ. ಹೀಗಾಗಿ ಕನ್ನಡ ಸಿನಿ ಪ್ರೇಕ್ಷಕರು ಐಎಂಡಿಬಿ ವಿರುದ್ಧ ಸಿಟ್ಟಾಗಿದ್ದಾರೆ. ಈ ವರ್ಷ ಕನ್ನಡದಿಂದ ಕಬ್ಜ ಜೊತೆಗೆ ಧ್ರುವನ ಮಾರ್ಟಿನ್, ಉಪ್ಪಿಯ ಯುಐ, ಧ್ರುವನ ಕೆಡಿ ಸೇರಿದಂತೆ ಹಲವು ಸಿನಿಮಾಗಳು ಬರುತ್ತಿವೆ. ಆದ್ರೆ ಕಬ್ಜ ಚಿತ್ರಕ್ಕೆ ಮಾತ್ರ ಸ್ಥಾನ ಕೊಟ್ಟಿದ್ದಾರೆ ಅಂತ ಬೇಸರ ಹೊರ ಹಾಕಿದ್ದು, ಐಎಂಡಿಬಿ ವಿರುದ್ಧ ಸಿಟ್ಟಾಗಿದ್ದಾರೆ.