ಕೊರೋನಾ ವಕ್ಕರಿಸಿದ ಬಳಿಕ ಮಂಡಿಸುತ್ತಿರುವ ಮೊದಲ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಉತ್ಪಾದನೆ, ಬೇಡಿಕೆಯಲ್ಲಾದ ಏರುಪೇರು ಸೇರಿದಂತೆ ಹಲವು ಕಾರಣಗಳಿಂದ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದೀಗ ಕೇಂದ್ರದ ಬಜೆಟ್ ಕೊರೋನಾದಿಂದ ತುಂಡಾಗಿದ್ದ ಜೀವನ ಚಕ್ರಕ್ಕೆ ಹೊಸ ಚೈತನ್ಯ ನೀಡಲಿದೆ ಅನ್ನೋ ನಿರೀಕ್ಷೆ ಹೆಚ್ಚಾಗಿದೆ. ಈ ಕುರಿತು ತಜ್ಞರು ಭವಿಷ್ಯ ನುಡಿದಿದ್ದಾರೆ.