Feb 16, 2024, 2:45 PM IST
ಬೆಂಗಳೂರು: ಬಜೆಟ್ ಮೂಲಕ ಅಹಿಂದ ವರ್ಗ ಕೈಹಿಡಿಯುವ ಪ್ರಯತ್ನವನ್ನು ಸಿಎಂ ಸಿದ್ದರಾಮಯ್ಯ(Siddaramaiah) ಮಾಡಿದ್ದಾರೆ. ಅಲ್ಪಸಂಖ್ಯಾತರಿಗೆ ನಿರೀಕ್ಷೆಯಂತೆ ಹೆಚ್ಚು ಅನುದಾನವನ್ನು ಸಿಎಂ ಮೀಸಲಿಟ್ಟಿದ್ದಾರೆ. ಲೋಕಸಭಾ ಚುನಾವಣಾ(Loksabha) ಮತಬೇಟೆಗೆ ಪೂರಕವಾಗಿ ಅನುದಾನವನ್ನು ಕೊಡಲಾಗಿದೆ. ದುಡಿಯುವ ವರ್ಗಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಲಾಗಿದೆ. ರೈತರು, ಮಹಿಳೆಯರಿಗೂ(Women) ಕೊಂಚ ಸಮಾಧಾನವನ್ನು ಸಿಎಂ ಕೊಟ್ಟಿದ್ದಾರೆ. ಅಲೆಮಾರಿ ಸಮುದಾಯವನ್ನು ನೆನಪು ಮಾಡಿಕೊಳ್ಳುವ ಸರ್ಕಸ್ ಮಾಡಿದ್ದಾರೆ. ಉದ್ಯೋಗ ಸೃಷ್ಟಿಯ ಕಸರತ್ತಿಗೆ ಸೀಮಿತವಾದ ಬಜೆಟ್ ಮಂಡಿಸಲಾಗಿದೆ. ಇಂದು ಸಿಎಂ 3.71 ಲಕ್ಷ ಕೋಟಿ ರೂ.ಗಾತ್ರದ ಬಜೆಟ್ ಮಂಡಿಸಿದ್ದಾರೆ. ಅಲ್ಲದೇ 1,05,246 ಕೋಟಿ ರೂ. ಸಾಲ ಪಡೆಯಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಸಾಲ ಮಾಡಿಯಾದರೂ ತುಪ್ಪ ತಿನ್ನುವ ಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: Education Sector: ಈ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿ: 500 ಹಿಂದುಳಿದ ವಿದ್ಯಾರ್ಥಿಗಳಿಗೆ JEE/NEET ಉಚಿತ ತರಬೇತಿ