
ರತನ್ ಟಾಟಾ ಅಗಲಿಕೆ ದೇಶಕ್ಕೆ ಅಕ್ಷರಶಃ ಭರಿಸಲಾಗದ ನಷ್ಟವಾಗಿದೆ. ಇವತ್ತು ಟಾಟಾ ಬ್ರ್ಯಾಂಡ್‌ಇಲ್ಲದೆ ದಿನ ಮುಗಿಸೋಕೆ ಸಾಧ್ಯವೇ ಇಲ್ಲ. ಎಂತಹ ಬಡವರು ಅಡುಗೆ ಮನೆಯಲ್ಲೂ ಟಾಟಾ ಉಪ್ಪಿನ ಪ್ಯಾಕೆಟ್ ಇಟ್ಟಿದ್ದರೆ ಶ್ರೀಮಂತನ ಮನೆ ಮುಂದೆ ಲಕ್ಸುರಿ ಜಾಗ್ವಾರ್ ಕಾರು ನಿಂತಿರುತ್ತೆ. ಮಕ್ಕಳನ್ನ ಸ್ಕೂಲಿಗೆ ಕರ್ಕೊಂಡು ಹೋಗೋ ಬಸ್ ಮುಂದೆಯೂ ಕೂಡ ಟಾಟಾ ಬ್ರ್ಯಾಂಡ್ ಎದ್ದು ಕಾಣುತ್ತೆ.
ಬೆಂಗಳೂರು(ಅ.12): ದೇಶಕ್ಕೆ ಸ್ಪೂರ್ತಿಯ ಚಿಲುಮೆಯಂತಿದ್ದ ರತನ್ ಟಾಟಾ ಅವರು ಸಾಮ್ರಾಜ್ಯ ಸ್ಥಾಪನೆಯ ಹಾದಿಯಲ್ಲಿ ಸಾಗುವಾಗ ಹೆಜ್ಜೆ ಹೆಜ್ಜೆಗೂ ಅವರನ್ನ ಸ್ವಾಗತಿಸಿದ್ದು ಸಾಲು ಸಾಲು ಸಮಸ್ಯೆಗಳು. ಅದೆಲ್ಲವನ್ನು ಮೀರಿ ಸಾಧನೆಯ ಸರದಾರರಾಗಿದ್ದರು. ಅವರ ಅಗಲಿಕೆ ದೇಶಕ್ಕೆ ಅಕ್ಷರಶಃ ಭರಿಸಲಾಗದ ನಷ್ಟವಾಗಿದೆ. ಇವತ್ತು ಟಾಟಾ ಬ್ರ್ಯಾಂಡ್‌ಇಲ್ಲದೆ ದಿನ ಮುಗಿಸೋಕೆ ಸಾಧ್ಯವೇ ಇಲ್ಲ. ಎಂತಹ ಬಡವರು ಅಡುಗೆ ಮನೆಯಲ್ಲೂ ಟಾಟಾ ಉಪ್ಪಿನ ಪ್ಯಾಕೆಟ್ ಇಟ್ಟಿದ್ದರೆ ಶ್ರೀಮಂತನ ಮನೆ ಮುಂದೆ ಲಕ್ಸುರಿ ಜಾಗ್ವಾರ್ ಕಾರು ನಿಂತಿರುತ್ತೆ. ಮಕ್ಕಳನ್ನ ಸ್ಕೂಲಿಗೆ ಕರ್ಕೊಂಡು ಹೋಗೋ ಬಸ್ ಮುಂದೆಯೂ ಕೂಡ ಟಾಟಾ ಬ್ರ್ಯಾಂಡ್ ಎದ್ದು ಕಾಣುತ್ತೆ. ಹೀಗೆ ಕಡುಬಡವರರಿಂದ ಹಿಡಿದು ಅಗರ್ಭ ಶ್ರೀಮಂತನ ತನಕ ಟಾಟಾ ಮನೆ ಮಾತಾಗಿದೆ.
ಬಾಲಿವುಡ್‌ನ ಚೆಲುವೆಯ ಪ್ರೇಮಪಾಶಕ್ಕೆ ಬಿದ್ದಿದ್ದ ರತನ್ ಟಾಟಾ: ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದೇಕೆ?