ಇಂಜಿನಿಯರ್‌ ಕೆಲಸ ಬಿಟ್ಟು ಸ್ಟಾರ್ಟಪ್‌ : ಬಿಇ ಪದವೀಧರನ ಕೈ ಹಿಡಿದ ಮಸಾಲೆ ಪುಡಿ !

ಇಂಜಿನಿಯರ್‌ ಕೆಲಸ ಬಿಟ್ಟು ಸ್ಟಾರ್ಟಪ್‌ : ಬಿಇ ಪದವೀಧರನ ಕೈ ಹಿಡಿದ ಮಸಾಲೆ ಪುಡಿ !

Published : Aug 11, 2023, 09:58 AM IST

ಖಾರಪುಡಿ ಹಾಗೂ ವಿವಿಧ ಮಸಾಲೆ ಪುಡಿಗಳ ಉದ್ಯಮ
ಸುಮಾರು 15 ಲಕ್ಷ ಬಂಡವಾಳದೊಂದಿಗೆ ಫಾರ್ಮ್ ಶುರು
ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಉತ್ಪನ್ನ  ಮಾರಾಟ    

ಕೊಪ್ಪಳ: ಅಡುಗೆಯಲ್ಲಿ ಮಸಾಲೆ ಹಾಗೂ ಖಾರದ ಪುಡಿ ವಿಶೇಷವಾದ ಸ್ಥಾನವನ್ನು ಅಲಂಕರಿಸಿದೆ.‌ ಇಂತಹ ವಿಶೇಷವಾದ ಐಟಂಗಳ ಸ್ಟಾರ್ಟಪ್ ಮಾಡುವ ಮೂಲಕ ಯುವಕನೊಬ್ಬ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾನೆ. ಕೊಪ್ಪಳ‌ ನಗರದ ಕಿನ್ನಾಳ‌ ರಸ್ತೆಯಲ್ಲಿರುವ  ರಾಜಭೂಮಿ ಸ್ಪೈಸಸ್(Rajabhoomi Spices) ಎನ್ನುವ ಉದ್ಯಮವನ್ನು ಅಕ್ಷಯ್  ದೇವಾಪೂರಕರ್(Akshay Devapoorkar) ಆರಂಭಿಸುವ ಮೂಲಕ ಯಶಸ್ವಿ ಉದ್ಯಮಿಯಾಗಿದ್ದಾರೆ. ಇನ್ನು ಅಕ್ಷಯ್ ಮೂಲತಃ ಇಂಜಿನಿಯರಿಂಗ್ ಪದವೀಧರನಾಗಿದ್ದು, ಕಂಪನಿಯೊಂದರಲ್ಲಿ  ಕೆಲಸ‌ ಮಾಡುತ್ತಿದ್ದರು. ಆದರೆ ಕೊವೀಡ್(Covid) ಸಮಯದಲ್ಲಿ ತೊಂದರೆಯಾದ ಹಿನ್ನಲೆಯಲ್ಲಿ ತಾವೇ ಸ್ವತಃ ಉದ್ಯಮ ಆರಂಭಿಸುವ ಯೋಚನೆಗೆ ಮುಂದಾದರು. ಈ ವೇಳೆಯಲ್ಲಿ ಅವರ ಆಲೋಚನೆಗೆ ಬಂದದ್ದು ಖಾರಪುಡಿ ಹಾಗೂ ವಿವಿಧ ಮಸಾಲೆ ಪುಡಿಗಳ(Masala powder) ಉದ್ಯಮ. 2021 ರ  ಸೆಪ್ಟಂಬರ್  ನಲ್ಲಿ  12 ರಿಂದ 15 ಲಕ್ಷ ಬಂಡವಾಳದಲ್ಲಿ ರಾಜಭೂಮಿ ಸ್ಪೈಸ್ ಎನ್ನುವ ಫರ್ಮ್ ಆರಂಭಿಸಿದರು. ಇನ್ನು ಅಕ್ಷಯ್ ಅವರ ರಾಜಭೂಮಿ ಸ್ಪೈಸಸ್ ಮೂಲಕ ಖಾರದ, ಅರಿಶಿನ, ಜೀರಾ, ಧನಿಯಾ, ಕರಿಮೆಣಸು, ಗರಂ ಮಸಾಲ, ರಸಂ ಪೌಡರ್, ಮಸಾಲಾ ಚಿಲ್ಲಿ ಪೌಡರ್, ಪುಳಿಯೊಗರೆ, ಬಿಸಿ ಬೇಳೆ ಬಾತ್ ಪೌಡರ್, ಸಾಂಬಾರ ಪೌಡರ್, ಟೀ‌ ಮಸಾಲ, ಕಶಾಯ ಪೌಡರ್‌ಗಳನ್ನು ಪ್ರೊಡಕ್ಷನ್‌ ಮಾಡಲಾಗುತ್ತಿದೆ. ಇನ್ನು ಸಚಿನ್ ಅವರ ಐಟಂಗಳು ಮಹಾರಾಷ್ಟ್ರ, ಪೂನಾ, ಆಂಧ್ರಪ್ರದೇಶ,ತೆಲಂಗಾಣ, ರಾಜಸ್ಥಾನ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತಿವೆ.

ಇದನ್ನೂ ವೀಕ್ಷಿಸಿ:  ಪ್ರಧಾನಿ ಮೋದಿ ಪ್ರತಿಯೊಬ್ಬರನ್ನು ಈ ಮಣ್ಣಿನ ಮಕ್ಕಳಂತೆ ನೋಡುತ್ತಾರೆ: ಕೋಟಾ ಶ್ರೀನಿವಾಸ್‌ ಪೂಜಾರಿ

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ
Read more