Aug 11, 2023, 10:16 AM IST
ಕೊಪ್ಪಳ: ಇಂಜನಿಯರಿಂಗ್ ಓದಿ, ನೇವಿ ಮರ್ಚೆಂಟ್(Navy Merchant) ಆಗಿದ್ದ ಕೊಪ್ಪಳದ ಯವಕನೊಬ್ಬ ಟಿಶ್ಯೂ ಪೇಪರ್(Tissue Paper) ಸ್ಟಾರ್ಟಪ್ ಮಾಡುವ ಮೂಲಕ ಯಶಸ್ಸುಗಳಿಸಿದ್ದಾರೆ. ಆ ಯುವ ಉದ್ಯಮಿಯ ಹೆಸರು ಸಚಿನ್ ಪಾಟೀಲ್. 2010 ರಲ್ಲಿ ಬಿಇ ಎಲೆಕ್ಟ್ರಾನಿಕ್ಸ್ ಪದವಿ ಮುಗಿಸಿದ ಸಚಿನ್ ಕೊಪ್ಪಳ(Koppal), ಬಳಿಕ ಡೆನ್ಮಾರ್ಕ್ ಮೂಲದ ಕಂಪನಿಯಲ್ಲಿ ಮರ್ಚೆಂಟ್ ನೇವಿ ಎಲೆಕ್ಟ್ರಿಕಲ್ ಇಂಜನಿಯರ್ ಆಗಿ ಕೆಲಸ ಮಾಡಿದರು. ಮರ್ಚೆಂಟ್ ನೇವಿಯಲ್ಲಿ 7 ವರ್ಷ ಕೆಲಸ ಮಾಡಿದರು. ಬಳಿಕ ನಾನು ತಾಯ್ನಾಡಿಗೆ ಹೋಗಿ ಏನಾದರೂ ಉದ್ಯಮ(Business) ಆರಂಭಿಸಬೇಕೆಂದು ನಿರ್ಧರಿಸಿದರು. ಆಗ ಅವರಿಗೆ ಹೊಳೆದದ್ದು ಟಿಶ್ಯೂ ಪೇಪರ್ ಉದ್ಯಮ. ಆರಂಭದಲ್ಲಿ ಮುದ್ರಾ ಯೋಜನೆಯ ಮೂಲಕ 10 ಲಕ್ಷ ಬಂಡವಾಳ ಹಾಕಿ ಒಂದು ಮೆಶಿನ್‌ನಿಂದ ಉದ್ಯಮ ಆರಂಭಿಸಿದ ಸಚಿನ್, ಸದ್ಯ ಮೂರು ಮೆಶಿನ್‌ಗಳ ಮೂಲಕ ಉದ್ಯಮ ನಡೆಸುತ್ತಿದ್ದಾರೆ.
ಇನ್ನು ಗುಜರಾತ್, ಕೊಯಮುತ್ತೂರ್, ದೆಹಲಿ, ಹೈದ್ರಾಬಾದ್, ಉತ್ತರಾಖಂಡ ದಿಂದ ರಾ ಮೆಟಿರಿಯಲ್ ತರಿಸುವ ಸಚಿನ್ ಕೊಪ್ಪಳ ಜಿಲ್ಲೆ ಸೇರಿದಂತೆ ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ತಮ್ಮ ವಹಿವಾಟು ನಡೆಸುತ್ತಿದ್ದಾರೆ. ಇನ್ನು ಸಚಿನ್ ಅವರು ಮೂರೂವರೆ ರೂಪಾಯಿಂದ ಹಿಡಿದು 25 ರೂಪಾಯಿ ವರೆಗೆ ಟಿಶ್ಯೂ ಪೇಪರ್ ಬಂಡಲ್‌ನನ್ನು ಸಿದ್ದಪಡಿಸಿ ,ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನೀಡುತ್ತಿದ್ದಾರೆ. ಸಚಿನ್ ಪಾಟೀಲ್ ಆರಂಭದ ದಿನಗಳಲ್ಲಿ ಮಾರ್ಕೆಟ್ ಮಾಡಲು ಹಾಗೂ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟು ನಡೆಸಲು ಸಾಕಷ್ಟು ಕಷ್ಟಪಟ್ಟಿದ್ದು, ಇದೀಗ ಟಿಶ್ಯೂ ಪೇಪರ್ ಉದ್ಯಮದಲ್ಲಿ ಒಂದು ಹಂತಕ್ಕೆ ಬೆಳೆದು ನಿಲ್ಲುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಇಂಜಿನಿಯರ್ ಕೆಲಸ ಬಿಟ್ಟು ಸ್ಟಾರ್ಟಪ್ : ಬಿಇ ಪದವೀಧರನ ಕೈ ಹಿಡಿದ ಮಸಾಲೆ ಪುಡಿ !